ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PM Kisan eKYC : ಇ-ಕೆವೈಸಿ ತುಂಬದಿದ್ದರೆ ಸಿಗಲ್ಲ ಹಣ, ಇದು ಹೊಸ ಡೆಡ್‌ಲೈನ್

|
Google Oneindia Kannada News

ಕೇಂದ್ರ ಸರಕಾರದ ಅತ್ಯಂತ ಜನಪ್ರಿಯ ಮತ್ತು ಜನೋಪಯೋಗಿ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೂ ಒಂದು. ಈ ಯೋಜನೆಯ ಫಲಾನುಭವಿಗಳು ಗಮನ ಹರಿಸಬೇಕಾದ ಸಂಗತಿ ಇದೆ. ಈ ಯೋಜನೆಯಲ್ಲಿ ನೀವು ಫಲಾನುಭವಿಗಳಾಗಿ ಮುಂದುವರಿಯಬೇಕೆಂದರೆ ಇ-ಕೆವೈಸಿ ಪೂರ್ಣಗೊಳಿಸುವುದು ಅಗತ್ಯ. ಕೆವೈಸಿ ಭರ್ತಿ ಮಾಡದಿದ್ದರೆ ಫಲಾನುಭವಿಗಳ ಪಟ್ಟಿಯಿಂದ ಹೊರಗೆ ಉಳಿಯಬೇಕಾಗುತ್ತದೆ.

ಇ-ಕೆವೈಸಿ ತುಂಬಲು 2022, ಮೇ 31 ಕೊನೆಯ ದಿನವಾಗಿತ್ತು. ಸಮಾಧಾನದ ಸಂಗತಿ ಎಂದರೆ ಇ-ಕೆವೈಸಿಗೆ ನಿಗದಿ ಮಾಡಲಾಗಿದ್ದ ಗಡುವನ್ನು ಎರಡು ತಿಂಗಳು ವಿಸ್ತರಿಸಲಾಗಿದೆ. ಅಂದರೆ ಜುಲೈ 31ರವರೆಗೂ ಕಾಲಾವಕಾಶ ಕೊಡಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ನೀಡಲಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ ಸಾಮಾನ್ಯ ರೈತರಿಗೆ ಸರಕಾರ ಧನ ಸಹಾಯ ಒದಗಿಸಲಾಗುತ್ತದೆ. ಕೇಂದ್ರ ಸರಕಾರ ವರ್ಷಕ್ಕೆ 6 ಸಾವಿರ ರೂ ನೀಡುತ್ತದೆ. ವರ್ಷದಲ್ಲಿ ಒಮ್ಮೆಗೇ ಈ ಆರು ಸಾವಿರ ನೀಡುವ ಬದಲು ಮೂರು ಕಂತುಗಳಲ್ಲಿ ಈ ಹಣ ನೀಡುತ್ತದೆ.

ಸುಧಾರಿತ ಬೇಸಾಯ ಪದ್ಧತಿಯಿಂದ ಸೋಯಾ ಅವರೆ ಅಧಿಕ ಉತ್ಪಾದನೆ!ಸುಧಾರಿತ ಬೇಸಾಯ ಪದ್ಧತಿಯಿಂದ ಸೋಯಾ ಅವರೆ ಅಧಿಕ ಉತ್ಪಾದನೆ!

ಫಲಾನುಭವಿಗಳಿಗೆ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂ ನೀಡಲಾಗುತ್ತದೆ. ಇಲ್ಲಿಯವರೆಗೆ 11 ಕಂತುಗಳಲ್ಲಿ ಕೇಂದ್ರ ಸರಕಾರ ಒಟ್ಟು 20 ಸಾವಿರಕ್ಕೂ ಹೆಚ್ಚು ಹಣ ಒದಗಿಸಿದೆ. ಜುಲೈ 31ರೊಳಗೆ ನೀವು ಇ-ಕೆವೈಸಿ ತುಂಬದೇ ಹೋದರೆ ಈ ಹಣ ಬರುವುದು ನಿಲ್ಲಲಿದೆ.

 ಇ-ಕೆವೈಸಿ ತುಂಬುವುದು ಹೇಗೆ?

ಇ-ಕೆವೈಸಿ ತುಂಬುವುದು ಹೇಗೆ?

ಮೊದಲಿಗೆ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ ತೆರೆಯಬೇಕು. ಅಲ್ಲಿ ಹೋಂ ಪೇಜ್‌ನಲ್ಲಿ ಬಲಬದಿಯ ಮೇಲ್ಗಡೆ ಇಕೆವೈಸಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಫಲಾನುಭವಿಯ ಆಧಾರ್ ಕಾರ್ಡ್ ನಂಬರ್ ನಮೂದಿಸಿ. ಮತ್ತು ಕೆಳಗೆ ಕಾಣಿಸುವ captcha ಕೋಡ್ ಹಾಕಿ ಸರ್ಚ್ ಕ್ಲಿಕ್ ಮಾಡಿ.

ನಂತರ ಫಲಾನುಭವಿಯ ಆಧಾರ್ ಕಾರ್ಡ್‌ಗೆ ಜೋಡಿಸಲಾಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ. ಆಗ ಆ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅ ಒಟಿಪಿಯನ್ನು ಹಾಕಿರಿ.

ಕೆವೈಸಿ ಅಂದರೆ ನೋ ಯುವರ್ ಕಸ್ಟಮರ್ ಎಂದು. ಬ್ಯಾಂಕ್, ಗ್ಯಾಸ್, ಟೆಲಿಕಾಂ ಆಪರೇಟರ್, ಪೇಟಿಎಂ ಇತ್ಯಾದಿ ಅನೇಕ ಕಡೆ ಕೆವೈಸಿ ಭರ್ತಿ ಮಾಡಲು ಹೇಳುತ್ತಾರೆ. ಗ್ರಾಹಕರ ಗುರುತಿನ ವಿವರ ಪಡೆಯುವುದು ಕೆವೈಸಿಯ ಉದ್ದೇಶ.

ಟಗರು ಸಾಕಾಣಿಕೆ; ಬಾಗಲಕೋಟೆ ರೈತನ ಯಶಸ್ಸಿನ ಕಥೆಟಗರು ಸಾಕಾಣಿಕೆ; ಬಾಗಲಕೋಟೆ ರೈತನ ಯಶಸ್ಸಿನ ಕಥೆ

 ಆಫ್‌ಲೈನ್‌ನಲ್ಲೂ ಕೆವೈಸಿ ಭರ್ತಿ ಅವಕಾಶ

ಆಫ್‌ಲೈನ್‌ನಲ್ಲೂ ಕೆವೈಸಿ ಭರ್ತಿ ಅವಕಾಶ

ಆನ್‌ಲೈನ್‌ನಲ್ಲಿ ಇಕೆವೈಸಿ ತುಂಬಲು ಕಷ್ಟವಾದಲ್ಲಿ ನೀವು ಸಮೀಪದ ಕಾಮನ್ ಸರ್ವಿಸ್ ಸೆಂಟರ್ (ಸಿಎಸ್‌ಸಿ) ಕೇಂದ್ರಕ್ಕೆ ಹೋಗಿ ಕೆವೈಸಿ ತುಂಬಬಹುದು. ಅಲ್ಲಿಗೆ ಹೋಗುವಾಗ ನಿಮ್ಮ ಆಧಾರ್ ಕಾರ್ಡ್ ಮತ್ತು ಅದಕ್ಕೆ ಜೋಡಿಸಲಾಗಿರುವ ಮೊಬೈಲ್ ನಂಬರ್ ಇರುವ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿ ಅಲ್ಲಿರುವ ಸಿಬ್ಬಂದಿ ಸಹಾಯದಿಂದ ಕೆವೈಸಿ ಭರ್ತಿ ಮಾಡಬಹುದು.

 ಕೇಂದ್ರದ ಜೊತೆ ರಾಜ್ಯದಿಂದಲೂ ನೆರವು

ಕೇಂದ್ರದ ಜೊತೆ ರಾಜ್ಯದಿಂದಲೂ ನೆರವು

ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರಕಾರ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ ಹಣವನ್ನು ಫಲಾನುಭವಿ ರೈತರ ಖಾತೆಗಳಿಗೆ ನೀಡುತ್ತದೆ. ಸಾಮಾನ್ಯವಾಗಿ ಮಾರ್ಚ್/ಏಪ್ರಿಲ್, ಜುಲೈ/ಆಗಸ್ಟ್ ಮತ್ತು ನವೆಂಬರ್/ಡಿಸೆಂಬರ್ ತಿಂಗಳಲ್ಲಿ ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ.

ಇದರ ಜೊತೆಗೆ ಕರ್ನಾಟಕ ಸರಕಾರ ಹೆಚ್ಚುವರಿಯಾಗಿ ೪ ಸಾವಿರ ರೂ ಕೊಡುತ್ತದೆ. ಇದು ಎರಡು ಕಂತುಗಳಲ್ಲಿ ಬರುತ್ತದೆ. ಕೇಂದ್ರ ಮತ್ತು ರಾಜ್ಯ ಎರಡೂ ಸರಕಾರಗಳಿಂದ ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ ವರ್ಷಕ್ಕೆ 10 ಸಾವಿರ ರೂ ಸಿಗುತ್ತದೆ.

 ಯಾರಿಗೆ ಲಭ್ಯ ಇಲ್ಲ ಈ ಯೋಜನೆ?

ಯಾರಿಗೆ ಲಭ್ಯ ಇಲ್ಲ ಈ ಯೋಜನೆ?

ಪಿಎಂ ಕಿಸಾನ್ ಯೋಜನೆಯ ಮೂಲ ಉದ್ದೇಶ ಬಡ ರೈತರಿಗೆ ಕೃಷಿಗಾರಿಕೆಗೆ ನೆರವಾಗುವುದು. ಮೊದಲಿಗೆ ಐದು ಎಕರೆಗಿಂತ ಹೆಚ್ಚು ಜಮೀನು ಇರದ ರೈತರಿಗೆ ಈ ಯೋಜನೆ ಎಂದಾಗಿತ್ತು. ಇತ್ತೀಚೆಗೆ ಆ ಷರತ್ತನ್ನು ತೆಗೆದು ಮುಕ್ತಾವಕಾಶ ಕೊಡಲಾಗಿದೆ. ಆದರೂ ಕೂಡ ಹಲವು ನಿರ್ಬಂಧಗಳು ಈ ಯೋಜನೆಯಲ್ಲಿವೆ. ಯಾವೆಲ್ಲಾ ರೈತರಿಗೆ ಈ ಯೋಜನೆಯ ಫಲ ಇಲ್ಲ ಎಂಬ ವಿವರ ಇಲ್ಲಿದೆ:

* ಸಾಂಸ್ಥಿಕ ಜಮೀನುದಾರರು. (ಸಹಕಾರ ಒಕ್ಕೂಟದ ಕೃಷಿಭೂಮಿ, ಟ್ರಸ್ಟ್ ಇತ್ಯಾದಿ ಯಾವುದೇ ಸಂಸ್ಥೆ ನಿರ್ವಹಿಸುವ ಭೂಮಿ)
* ಸಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು, ಹೊಂದಿದ್ದವರು.
* ಯಾವುದೇ ಹಂತದ ಜನಪ್ರತಿನಿಧಿಗಳು
* ಸರಕಾರಿ ನೌಕರರು
* ನಿವೃತ್ತಿ ಹೊಂದಿ 10 ಸಾವಿರ ರೂ ಗೂ ಹೆಚ್ಚು ಮೊತ್ತದ ಮಾಸಿಕ ಪಿಂಚಣಿ ಪಡೆಯುತ್ತಿರುವವರು.
* ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು.
* ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಎಂಜಿನಿಯರು, ವಕೀಲರು, ಸಿಎ, ಆರ್ಕಿಟೆಕ್ಟ್ ಇತ್ಯಾದಿ ವೃತ್ತಿಪರ ಹುದ್ದೆಯವರು.

(ಒನ್ಇಂಡಿಯಾ ಸುದ್ದಿ)

English summary
Central Govt has extended deadline to fill eKYC upto July 31st in the PM Kisan Scheme. If not done you may not receive money from the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X