ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀಟನಾಶಕಗಳ ನಿಷೇಧ: ಪರ-ವಿರೋಧಗಳ ಧ್ವನಿ

|
Google Oneindia Kannada News

ಕಳೆದ ತಿಂಗಳು ಕೇಂದ್ರ ಕೃಷಿ ಸಚಿವಾಲಯವು 27 ಕೀಟನಾಶಕಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿ, ಸಾರ್ವಜನಿಕ ಅಭಿಪ್ರಾಯಕ್ಕಾಗಿ 45 ದಿನಗಳ ಗಡುವು ನೀಡಿತ್ತು. ವಿಜ್ಞಾನಿಗಳು, ಕೃಷಿ ಪರಿಕರ ಉತ್ಪಾದನಾ ಕಂಪನಿಗಳು ಸರ್ಕಾರಕ್ಕೆ ತಮ್ಮ ಸಲಹೆ ಸೂಚನೆಗಳನ್ನು ಕೊಡುವುದರ ಜೊತೆಗೆ ನಿಷೇಧದ ಕುರಿತು ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ಸಾರ್ವಜನಿಕ ಸ್ಪಂದನೆ ಗಮನಿಸಿದ ಕೇಂದ್ರ ಸರ್ಕಾರ ಅಭಿಪ್ರಾಯ ಸಂಗ್ರಹಕ್ಕೆ ಇನ್ನೂ 45 ದಿನ ಹೆಚ್ಚು ಮಾಡಿ ಒಟ್ಟು 90 ದಿನಗಳ ಗಡುವು ನೀಡಿದೆ.

Recommended Video

ಜನ ನಿಮ್ಮನ್ನು ನೋಡುತ್ತಿರುತ್ತಾರೆ ಹುಷಾರ್ | Manmohan Singh | Narendra Modi | Oneindia Kannada

ಕರ್ನಾಟಕ ಮೂಲದ ಖ್ಯಾತ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಕೀಟನಾಶಕಗಳನ್ನು ನಿಷೇಧಿಸಿ, ಹೆಚ್ಚಿನ ಬೆಲೆಯ ಪರಿಕರಗಳನ್ನು ಪರಿಚಯಿಸುವುದರಿಂದ ರೈತರಿಗೆ ಅನಾನುಕೂಲವಾಗುತ್ತದೆ. ಇದೀಗ ನಿಷೇಧಿಸಲು ನೀಡಿರುವ ಕಾರಣಗಳಲ್ಲಿ ಪ್ರಮುಖವಾಗಿ ಪರಿಸರ, ಜನ, ಜಾನುವಾರುಗಳಿಗೆ ಮಾರಕ ಹಾಗೂ ಜೇನು ನೊಣಗಳು ಸಾಯುತ್ತವೆ ಎಂಬುದಾಗಿದೆ. ಆದರೆ ಈ ರಾಸಾಯನಿಕಗಳಿಗೆ ಪರ್ಯಾಯವಾಗಿ ಬಿಡುಗಡೆ ಮಾಡುವ ಕೀಟನಾಶಕಗಳಿಂದ ಅಂತಹ ದುಷ್ಪರಿಣಾಮಗಳು ಉಂಟಾಗುವುದಿಲ್ಲ ಎಂಬುದಕ್ಕೆ ಪುರಾವೆಯಾಗಿ ಏನಾದರೂ ಅಂಕಿ ಅಂಶಗಳಿವೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ

ನವದೆಹಲಿಯ ಸ್ವದೇಶಿ ಆಂದೋಲನ ಕೇಂದ್ರಕ್ಕೆ ಪತ್ರ ರವಾನಿಸಿದೆ

ನವದೆಹಲಿಯ ಸ್ವದೇಶಿ ಆಂದೋಲನ ಕೇಂದ್ರಕ್ಕೆ ಪತ್ರ ರವಾನಿಸಿದೆ

ಮತ್ತೊಬ್ಬ ವಿಜ್ಞಾನಿ 287 ಕೀಟನಾಶಕಗಳು ದೇಶದಲ್ಲಿ ರಿಜಿಸ್ಟರ್ ಆಗಿವೆ. ಅವುಗಳಲ್ಲಿ ಕೇವಲ 27 ನ್ನು ನಿಷೇಧಿಸಲು ಮುಂದಾಗಿರುವುದು. ಇದರಿಂದ ರೈತರ ಮೇಲೆ ಹಾಗೂ ಬೆಳೆ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಹೀಗೆ ಹತ್ತಾರು ಪತ್ರಗಳು ಕೇಂದ್ರ ಸರ್ಕಾರವನ್ನು ತಲುಪಿವೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಪತ್ರಗಳು ತಲುಪುತ್ತವೆ ಕೂಡಾ. ನವದೆಹಲಿಯ ಸ್ವದೇಶಿ ಆಂದೋಲನ ಕೇಂದ್ರಕ್ಕೆ ರವಾನಿಸಿರುವ ಪತ್ರ ಒನ್ ಇಂಡಿಯಾ ಗೆ ಲಭ್ಯವಾಗಿದೆ. ಪತ್ರದ ಸಾರಾಂಶವಿಲ್ಲಿದೆ.

ಸ್ವದೇಶಿ ಆಂದೋಲನ

ಸ್ವದೇಶಿ ಆಂದೋಲನ

ಇದೀಗ ನಿಷೇಧ ಹೇರಿರುವ 27 ಕೀಟನಾಶಕಗಳು, 2013 ಆಗಸ್ಟ್ 9 ರಂದು ಕೇಂದ್ರ ಕೃಷಿ ಸಚಿವಾಲಯ ತಜ್ಞರ ಸಮಿತಿ ರಚಿಸಿ ಕೀಟನಾಶಕಗಳ ಪರಿಶೀಲಿಸಲು ಆದೇಶಿಸಿದ್ದ 66 ಕೀಟನಾಶಕಗಳ ಪಟ್ಟಿಯಲ್ಲಿ ಸೇರಿವೆ. ಮೇ 14, 2016 ರಲ್ಲಿ ಭಾರತ ಸರ್ಕಾರ 13 ರಾಸಾಯನಿಕಗಳನ್ನು ನಿಷೇಧಿಸಿ ಮತ್ತು 2020 ರಷ್ಟರಲ್ಲಿ 6 ರಸಾಯನಿಕಗಳ ಉತ್ಪಾದನೆ ಹಾಗೂ ಸರಬರಾಜು ನಿಲ್ಲಿಸಬೇಕೆಂಬ ಆದೇಶ ನೀಡಿತ್ತು.

ಅದೇ ಆದೇಶದಲ್ಲಿ 2018 ಕ್ಕೆ 27 ರಾಸಾಯನಿಕಗಳನ್ನು ಪರಿಶೀಲಿಸಲು ಅಧ್ಯಯನ ಕೈಗೊಳ್ಳಬೇಕಾಗಿಯೂ ಕೂಡಾ ಆದೇಶ ನೀಡಲಾಗಿತ್ತು. ಈಗಾಗಲೇ ಬಹಳ ತಡವಾಗಿದೆ. ಇನ್ನೂ ಈ ರಸಾಯನಿಕಗಳು ಸರಬರಾಜಾಗುತ್ತಿವೆ. ಇವೆಲ್ಲವೂ ಅನೇಕ ದೇಶಗಳಲ್ಲಿ ಹದಿನೈದು ವರ್ಷಗಳ ಹಿಂದೆಯೇ ನಿಷೇಧಕ್ಕೊಳಪಟ್ಟಿವೆ.

18 ರಾಸಾಯನಿಕಗಳನ್ನು ಮುಂದುವರಿಸಬೇಕಾಗಿ ಸಮಿತಿ ಶಿಫಾರಸ್ಸು

18 ರಾಸಾಯನಿಕಗಳನ್ನು ಮುಂದುವರಿಸಬೇಕಾಗಿ ಸಮಿತಿ ಶಿಫಾರಸ್ಸು

90 ದಿನಗಳ ಗಡುವು ಮುಗಿದಾಕ್ಷಣ ಈ 27 ರಾಸಾಯನಿಕಗಳನ್ನು ನಿಷೇಧಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಇವುಗಳನ್ನು ನಿಷೇಧಿಸುವುದರಿಂದ ನಮ್ಮ ಪರಿಸರ, ಮಣ್ಣು, ಆಹಾರ ಮತ್ತು ಆರೋಗ್ಯವನ್ನು ಕಾಪಾಡಿದಂತಾಗುತ್ತದೆ. 66 ರಸಾಯನಿಕಗಳಲ್ಲಿ ಸುಮಾರು 18 ರಾಸಾಯನಿಕಗಳನ್ನು ಮುಂದುವರಿಸಬೇಕಾಗಿ ಸಮಿತಿ ಶಿಫಾರಸ್ಸು ಮಾಡಿರುವುದಾಗಿ ತಿಳಿದು ಬಂದಿದೆ. ಅವುಗಳ ಪಟ್ಟಿ ಇಂತಿದೆ.

Aluminium Phosphide, Bifenthrin, Carbosulfan, Chlorfenapyr, Chlorothanonil, Dazomet, Diflubenzuron, Ethofenprox, Fenpropathrin, Iprodione, Kasugamycin, Mepiquat Cloride, Metaldehyde, Paraquat dichloride, Pretilachlor, Propargite, Propineb, and Zinc Phosphide. ಆದರೆ ಈ ಎಲ್ಲಾ ರಾಸಾಯನಿಕಗಳನ್ನು ಅನೇಕ ದೇಶಗಳಲ್ಲಿ ಈಗಾಗಲೇ ನಿಷೇಧಿಸಲಾಗಿದೆ.

ಕೆಲವು ದೇಶಗಳಲ್ಲಿ ನಿಷೇಧವಿರುವ ಒಂದೆರಡು ಉದಾಹರಣೆ

ಕೆಲವು ದೇಶಗಳಲ್ಲಿ ನಿಷೇಧವಿರುವ ಒಂದೆರಡು ಉದಾಹರಣೆ

ಬೈಫೆನ್ ಥ್ರಿನ್: ನೆದರ್ಲ್ಯಾಂಡ್ ಮತ್ತು ರಷ್ಯಾದಲ್ಲಿ ನಿಷೇಧಿಸಲಾಗಿದೆ. ಐರೋಪ್ಯ ಒಕ್ಕೂಟಗಳಲ್ಲಿ ಇದು ರಿಜಿಸ್ಟರ್ ಆಗಿಲ್ಲ. ಅಮೆರಿಕಾ ಪರಿಸರ ಸಂರಕ್ಷಣಾ ಸಂಸ್ಥೆ ಇದನ್ನು ಸಂಭಾವ್ಯ ಕ್ಯಾನ್ಸರ್ ಕಾರಕ ಪಟ್ಟಿಯಲ್ಲಿ ಸೇರಿಸಿದೆ.

ಕಾರ್ಬೋಸಲ್ಫಾನ್: ಇದು ಪನಾಮ ಮತ್ತು ಮಲೇಷಿಯಾ ಒಳಗೊಂಡಂತೆ 10 ದೇಶಗಳಲ್ಲಿ ನಿರ್ಬಂಧಿಸಲಾಗಿದೆ. ಐರೋಪ್ಯ ಒಕ್ಕೂಟದಲ್ಲಿ ಇದರ ನೋಂದಣಿಯನ್ನು ಹಿಂಪಡೆಯಲಾಗಿದೆ.

ಕ್ಲೋರೋಫೆನಾಪಿರ್: ಇದನ್ನು ಐರೋಪ್ಯ ಒಕ್ಕೂಟಗಳಲ್ಲಿ ಅನುಮೋದಿಸಿಲ್ಲ.

ಕ್ಲೋರೋಥನೋನಿಲ್: ಸ್ವೀಡನ್ ಮತ್ತು ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾಗಿದ್ದು, ಐರೋಪ್ಯ ಒಕ್ಕೂಟದಲ್ಲಿಯೂ ಅನುಮೋದಿಸಿಲ್ಲ.

ಡ್ಯಾಜೋಮಿಟ್: ಡೆನ್ಮಾರ್ಕ್ ನಲ್ಲಿ ನಿಷೇಧಿಸಲಾಗಿದೆ.

ಡಿಫ್ಲೂಬೆನ್ಜುರಾನ್: ಬೆಲ್ಜಿಯಂ ಮತ್ತು ಓಮನ್ ದೇಶದಲ್ಲಿ ನಿರ್ಬಂಧಿಸಲಾಗಿದೆ.

ಎಥ್ನೋಫೆನೋಪ್ರಾಕ್ಸ್: ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಕೊಂಚ ಅಪಾಯಕಾರಿ ಎಂದು ಹೇಳಿದೆ.

ಫೆನಪ್ರೋಪಾಥ್ರಿನ್: ಮಲೇಷಿಯಾ ಮತ್ತು ದಕ್ಷಿಣ ಕೊರಿಯಾ ದೇಶದಲ್ಲಿ ನಿಷೇಧಿಸಲಾಗಿದೆ. ಐರೋಪ್ಯ ಒಕ್ಕೂಟ ಹಿಂಪಡೆದಿದೆ.

ಹೀಗೆ ಪ್ರತಿಯೊಂದು ರಾಸಾಯನಿಕಗಳದ್ದೂ ಒಂದಿಲ್ಲೊಂದು ಸಮಸ್ಯೆಯ ಕಾರಣ ಅನೇಕ ದೇಶಗಳಲ್ಲಿ ನಿಷೇಧಿಸಿರುವುದು, ಬಳಕೆಯನ್ನು ನಿರ್ಬಂಧಿಸಿರುವುದು ಮತ್ತು ಪರವಾನಗಿಯನ್ನು ಹಿಂಪಡೆದಿರುವುದನ್ನು ಕಾಣಬಹುದಾಗಿದೆ. ಹಾಗಾಗಿ ಈ ಕೂಡಲೇ 27 ಕೀಟನಾಶಗಳನ್ನು ನಿಷೇಧಿಸಬೇಕೆಂದು ಸ್ವದೇಶಿ ಆಂದೋಲನ ಒತ್ತಾಯಿಸಿದೆ.

English summary
Last month, the Union Ministry of Agriculture banned 27 pesticides and issued a 45-days deadline for public comment. Here is a pros and cons opinions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X