ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರದ್ ಪವಾರ್ ಗೆ ಒಂದೇ ಏಟಾ, ಇನ್ನೂ ಬಾರಿಸಬೇಕಿತ್ತು

By Srinath
|
Google Oneindia Kannada News

ರಾಳೆ ಗಣಸಿದ್ಧಿ (ಮಹಾರಾಷ್ಟ್ರ), ನ. 24: ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಮೇಲೆ ದಾಳಿ ನಡೆಸಿದ ವ್ಯಕ್ತಿಯು ತನ್ನ ಹೆಸರು ಹೇಳಿರುವುದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಗಾಂಧಿವಾದಿ ಅಣ್ಣಾ ಹಜಾರೆ, ಕೇವಲ ಒಂದೇ ಒಂದು ಹೊಡೆತ ಹೊಡೆದನೇ? ಇನ್ನೂ ಬಾರಿಸಬೇಕಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಗಮನಾರ್ಹವೆಂದರೆ ಭ್ರಷ್ಟರು ಎಂಬ ಕಾರಣಕ್ಕೆ ಮಹಾರಾಷ್ಟ್ರದ ಜನನಾಯಕ ಪವಾರ್ ಅವರನ್ನು ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ.

ಈ ಮಧ್ಯೆ, ಪವಾರ್ ಮೇಲಿನ ದಾಳಿಗೆ ವಿವಿಧ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಆದರೆ 'ಅವರಿಗೆ ಹೊಡೆಯಲಾಯಿತೇ? ಆತ ಒಂದೇ ಒಂದು ಹೊಡೆತ ಹೊಡೆದನೇ?' (ಬಸ್ ಏಕ್ ಹೀ ತಪ್ಪಡ್ ಮಾರಾ!?) ಎಂದು ಪವಾರ್ ಮೇಲಿನ ದಾಳಿಗೆ ಪ್ರತಿಕ್ರಿಯಿಸುತ್ತಾ ಹಜಾರೆ ಪ್ರಶ್ನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನೊಂದೆಡೆ ತಾನು ದಾಳಿಯನ್ನು ಖಂಡಿಸುವುದಾಗಿಯೂ ಹೇಳುವ ಮೂಲಕ ಅವರು ಇಬ್ಬಂದಿತನ ತೋರಿದ್ದಾರೆ.

ನವದೆಹಲಿಯಲ್ಲಿ ಹರ್ವೀಂದರ್ ಸಿಂಗ್ ಎಂಬಾತ ಪವಾರ್ ಕೆನ್ನೆಗೆ ಬಾರಿಸಿದ ಘಟನೆ ಗುರುವಾರ ನಡೆದಿದೆ. ಭ್ರಷ್ಟಾಚಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಸಿಂಗ್, ಕೃಷಿ ಸಚಿವ ಪವಾರ್ ಮೇಲೆ ದಾಳಿ ನಡೆಸಿದುದಲ್ಲದೆ ಚೂರಿ ತೋರಿಸಿ ಸಚಿವರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದನು.

'ಅಣ್ಣಾಜೀ ಲೋಕಪಾಲ್‌ಗೆ ಮನವಿ ಮಾಡಿದ್ದಾರೆ. ಆದರೆ ಅದು ಫಲಿಸಿಲ್ಲ. ನಾನು ಭಯೋತ್ಪಾದಕನಲ್ಲ, ಭಯೋತ್ಪಾದಕರು ಈ ರೀತಿ ನಡೆದುಕೊಳ್ಳುವುದಿಲ್ಲ. ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವ ಭ್ರಷ್ಟ ಸಚಿವರ ಬಗ್ಗೆ ನಾನು ರೋಸಿ ಹೋಗಿದ್ದೇನೆ' ಎಂದು ದಾಳಿಕೋರ ಹರ್ವೀಂದರ್ ಸಿಂಗ್ ಹೇಳಿದ್ದಾನೆ.

English summary
Asked by reporters about his view on the attack on Pawar, who was slapped by a Sikh man. Hazare said: "Was it only one slap?" Anna Hazare's initial reaction to the attack on union agriculture minister Sharad Pawar angered Congress party leaders enough to question the activist's Gandhian tag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X