ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನೆ: 1,500ಕ್ಕೂ ಅಧಿಕ ಮೊಬೈಲ್ ಟವರ್‌ಗಳಿಗೆ ಹಾನಿ ಮಾಡಿದ ರೈತರು

|
Google Oneindia Kannada News

ಚಂಡೀಗಡ, ಡಿಸೆಂಬರ್ 28: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ತಿಂಗಳಿಗೂ ಹೆಚ್ಚು ಸಮಯದಿಂದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪಂಜಾಬ್‌ನಲ್ಲಿ ಇದುವರೆಗೂ 1,500ಕ್ಕೂ ಅಧಿಕ ದೂರಸಂಪರ್ಕ ಟವರ್‌ಗಳಿಗೆ ಹಾನಿ ಮಾಡಿದ್ದಾರೆ. ಇದರಿಂದ ಅನೇಕ ಕಡೆ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳಿಗೆ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್‌ ಟವರ್‌ಗೆ ಹಾನಿ ಮಾಡದಂತೆ ರೈತರಲ್ಲಿ ಪಂಜಾಬ್ ಸಿಎಂ ಮನವಿಮೊಬೈಲ್‌ ಟವರ್‌ಗೆ ಹಾನಿ ಮಾಡದಂತೆ ರೈತರಲ್ಲಿ ಪಂಜಾಬ್ ಸಿಎಂ ಮನವಿ

ಅನೇಕ ಟವರ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವುದರಿಂದ ಟೆಲಿಕಾಂ ಸಿಗ್ನಲ್‌ಗಳು ಸ್ಥಗಿತಗೊಂಡಿವೆ. ಜತೆಗೆ ಅನೇಕ ಕಡೆ ಕೇಬಲ್‌ಗಳನ್ನು ತುಂಡು ಮಾಡಲಾಗಿದೆ. ನೂತನ ಕೃಷಿ ಕಾಯ್ದೆಗಳು ಮೂಲಸೌಕರ್ಯ ಕ್ಷೇತ್ರದ ಉದ್ಯಮಿ ಗೌತಮ್ ಅದಾನಿ ಮತ್ತು ಜಿಯೋ ಮಾಲೀಕ ಮುಕೇಶ್ ಅಂಬಾನಿ ಅವರಿಗೆ ನೆರವಾಗಲಿದೆ ಎಂಬ ಆಕ್ರೋಶದಿಂದ ರೈತರು, ಅವರಿಗೆ ಸೇರಿದ ಘಟಕಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.

ಸರ್ಕಾರ ಅಕ್ಕಿ ಗಿರಣಿಯಲ್ಲ; ಏಕಾಏಕಿ ಯೂಟರ್ನ್ ಹೊಡೆದ ತೆಲಂಗಾಣ ಸಿಎಂಸರ್ಕಾರ ಅಕ್ಕಿ ಗಿರಣಿಯಲ್ಲ; ಏಕಾಏಕಿ ಯೂಟರ್ನ್ ಹೊಡೆದ ತೆಲಂಗಾಣ ಸಿಎಂ

'ನಿನ್ನೆಯವರೆಗೂ 1,411 ಟವರ್‌ಗಳಿಗೆ ಹಾನಿ ಮಾಡಲಾಗಿತ್ತು. ಇಂದು ಆ ಸಂಖ್ಯೆ 1,500 ದಾಟಿದೆ' ಎಂದು ಮೂಲಗಳು ಮಾಹಿತಿ ನೀಡಿವೆ. ಪಂಜಾಬ್‌ನಲ್ಲಿ 9,000ಕ್ಕೂ ಅಧಿಕ ಟವರ್‌ಗಳನ್ನು ಹೊಂದಿರುವ ಜಿಯೋದ ಫೈಬರ್ ಕೇಬಲ್‌ಗಳ ಗೊಂಚಲುಗಳನ್ನು ಜಲಂಧರ್‌ನಲ್ಲಿ ಸುಟ್ಟುಹಾಕಲಾಗಿದೆ. ಮುಂದೆ ಓದಿ.

ಜನರೇಟರ್ ಕದ್ದೊಯ್ದು ದಾನ!

ಜನರೇಟರ್ ಕದ್ದೊಯ್ದು ದಾನ!

ಹೆಚ್ಚಿನ ಕಡೆ ಟೆಲಿಕಾಂ ಟವರ್‌ಗಳನ್ನು ಹಾನಿ ಮಾಡಲು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸುವುದು ಸಾಮಾನ್ಯ ಕೃತ್ಯವಾಗಿದೆ. ಒಂದು ಕಡೆ ಟವರ್ ಪ್ರದೇಶವೊಂದರಿಂದ ಜನರೇಟರ್ ಒಂದನ್ನು ಹೊತ್ತೊಯ್ದು ಸ್ಥಳೀಯ ಗುರುದ್ವಾರಕ್ಕೆ ದಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸೇವೆ ಸರಿಪಡಿಸಲು ಹೆಣಗಾಟ

ಸೇವೆ ಸರಿಪಡಿಸಲು ಹೆಣಗಾಟ

ಟೆಲಿಕಾಂ ಟವರ್‌ಗಳಿಗೆ ಹಾನಿ ಮಾಡಿರುವುದು ದೂರಸಂಪರ್ಕ ಸೇವೆಗಳಿಗೆ ತೀವ್ರ ಹೊಡೆತ ನೀಡಿದೆ. ಕಾನೂನು ಜಾರಿ ಸಂಸ್ಥೆಗಳ ಗೈರಿನ ಕಾರಣದಿಂದ ದೂರಸಂಪರ್ಕ ಆಪರೇಟರ್‌ಗಳು ಸೇವೆಯನ್ನು ಸರಿಪಡಿಸಲು ಹೆಣಗಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಮನವಿ ಮಾಡಿದ್ದ ಅಮರಿಂದರ್

ಮನವಿ ಮಾಡಿದ್ದ ಅಮರಿಂದರ್

ಮೊಬೈಲ್ ಟವರ್‌ಗಳಿಗೆ ಹಾನಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕಳೆದ ವಾರ ವಿವಿಧ ಮೊಬೈಲ್ ಟವರ್‌ಗಳಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿತ್ತು. ಅಂತಹ ಕೃತ್ಯಗಳ ಮೂಲಕ ಜನಸಾಮಾನ್ಯರಿಗೆ ತೊಂದರೆಯುಂಟು ಮಾಡಬಾರದು ಎಂದು ಅಮರಿಂದರ್ ಸಿಂಗ್ ಮನವಿ ಮಾಡಿದ್ದರು.

ಶಿಸ್ತು ಮತ್ತು ಜವಾಬ್ದಾರಿ ಪ್ರದರ್ಶಿಸಿ

ಕೊರೊನಾ ವೈರಸ್ ಪಿಡುಗಿನ ನಡುವೆ ಮೊಬೈಲ್ ಸಂಪರ್ಕವು ಜನರಿಗೆ ತೀರಾ ಅತ್ಯಗತ್ಯವಾಗಿದೆ. ಪ್ರತಿಭಟನೆ ನಡೆಸುತ್ತಿರುವ ರೈತರು, ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಂತೆಯೇ ಶಿಸ್ತು ಮತ್ತು ಜವಾಬ್ದಾರಿಯ ಪ್ರಜ್ಞೆ ಪ್ರದರ್ಶಿಸಬೇಕು ಎಂದಿದ್ದರು.

ಎಫ್‌ಐಆರ್ ದಾಖಲಾಗಿಲ್ಲ

ಟೆಲಿಕಾಂ ಟವರ್‌ಗಳಿಗೆ ಹಾನಿ ಮಾಡುತ್ತಿರುವವರ ವಿರುದ್ಧ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ. ಕನಿಷ್ಠ 1,600 ಟವರ್‌ಗಳು ಹಾನಿಗೊಳಗಾಗಿವೆ ಎಂದು ಟವರ್ ಮತ್ತು ಮೂಲಸೌಕರ್ಯ ಪೂರೈಕೆದಾರರ ಸಂಘ (ಟಿಎಐಪಿಎ) ತಿಳಿಸಿದೆ.

English summary
Farmers Protest against farm laws: More than 1,500 telecom towers has been damaged by agitating farmers in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X