ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದೆಲ್ಲೆಡೆ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಳ

|
Google Oneindia Kannada News

ಕೃಷಿ ಕ್ಷೇತ್ರದ ಕುರಿತಾಗಿ ಅನೇಕ ಅಂಕಿಅಂಶಗಳು ಬೆರಗುಗೊಳಿಸುತ್ತವೆ. ಇಂದು "ಬ್ಯುಸಿನೆಸ್ ಲೈನ್" ಪತ್ರಿಕೆಯಲ್ಲಿ ಪ್ರಕಟವಾಗಿರುವ ಕೆಲವು ಅಂಕಿಅಂಶಗಳು ಕುತೂಹಲಕಾರಿಯಾಗಿವೆ. ಅದೇ ರೀತಿ ಆಯಾ ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದ ಬಗೆಗೆ ಬಜೆಟ್ ಸಿದ್ಧಪಡಿಸುವಾಗ ಈ ಅಂಕಿಅಂಶಗಳು ನೆರವಿಗೆ ಬರಬಹುದು.

ಬ್ಯುಸಿನೆಸ್ ಲೈನ್ ಪತ್ರಿಕೆಯ ವರದಿಯ ಮುಖ್ಯಾಂಶಗಳು ಇಲ್ಲಿವೆ...

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇಕಡಾ 84ರಷ್ಟು ಕೃಷಿ ಭೂಮಿ ಇದೆ. ಇಲ್ಲಿನ ರೈತರು ದೇಶದ ಇತರೆ ಭಾಗಗಳಿಗಿಂತೆ ಹೆಚ್ಚಿನ ಭೂಹಿಡುವಳಿ ಉಳ್ಳವರಾಗಿದ್ದಾರೆ.

ಈರುಳ್ಳಿ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಸಲಹೆಗಳು ಈರುಳ್ಳಿ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಸಲಹೆಗಳು

ಈ ಎರಡೂ ರಾಜ್ಯಗಳಲ್ಲಿ ಕೃಷಿ ಕೂಲಿಗಳ ಸಂಖ್ಯೆ ಹೆಚ್ಚಾಗಿದ್ದು, ಕಲ್ಟಿವೇಟರ್‌ಗಳು ಕಡಿಮೆ ಆಗಿರುವ ಬಗ್ಗೆ ಇತ್ತೀಚೆಗೆ ಲೋಕಸಭೆಯ ಪ್ರಶ್ನೋತ್ತರದ ವೇಳೆ ಮಾಹಿತಿ ಬಹಿರಂಗವಾಗಿದೆ.

Number Of Agriculture Labours Increased Across Country

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ 2017018ರ ಭೂಬಳಕೆ (ಲ್ಯಾಂಡ್ ಯೂಸ್ ಡಾಟ) ಅಂಕಿ ಅಂಶಗಳನ್ನು ಪ್ರಕಟಿಸಿದ್ದರು. ಅದರ ಪ್ರಕಾರ ಹರಿಯಾಣದ ಒಟ್ಟಾರೆ ಭೂ ಪ್ರದೇಶದಲ್ಲಿ 85.3% ಕೃಷಿ ಭೂಮಿ, ಪಂಜಾಬ್‌ನಲ್ಲಿ 84.9% ಬಳಕೆಯಲ್ಲಿದೆ. ಅದೇ ರೀತಿ ರಾಷ್ಟ್ರೀಯ ಸರಾಸರಿ ಶೇಕಡಾ 55.3% ರಷ್ಟು ಭೂಮಿ ಕೃಷಿಗೆ ಬಳಕೆಯಾಗುತ್ತಿದೆ.

ಇದರ ಜೊತೆಗೆ ಅತ್ಯಂತ ಕಡಿಮೆ ಭೂಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿರುವ ಬಗ್ಗೆಯೂ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರ 4.86% ಅರುಣಾಚಲ ಪ್ರದೇಶ 5.6%, ಅಂಡಮಾನ್ ನಿಕೋಬಾರ್ 3.39%, ಚಂಡೀಘಡ 9.9% ಹಿಮಾಚಲ ಪ್ರದೇಶ 14.66%, ಮಿಜೋರಾಂ 17.46%, ಸಿಕ್ಕಿಂ 13.66% ನಡೆಯುತ್ತಿದೆ.

ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಬಿಡುಗಡೆ ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಬಿಡುಗಡೆ

ಕೃಷಿ ಕೂಲಿಗಳ ಸಂಖ್ಯೆ ಹೆಚ್ಚಳ
2001 ರಿಂದ 2011ರ ಅವಧಿಯಲ್ಲಿ ದೇಶದಲ್ಲಿ 7.15% ರಷ್ಟು ಕಲ್ಟಿವೇಟರ್‌ಗಳು ಇಳಿಮುಖ ಕಂಡಿದ್ದರೆ, ಶೇಕಡಾ 26.2%ರಷ್ಟು ಕೃಷಿ ಕೂಲಿಗಳ ಸಂಖ್ಯೆ ಹೆಚ್ಚಾಗಿದೆ. ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಮಣಿಪುರ ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ರಾಜ್ಯಗಳಲ್ಲಿ ಕಲ್ಟಿವೇಟರ್‌ಗಳ ಸಂಖ್ಯೆ ಕಡಿಮೆಯಾಗಿದೆ. ಉತ್ತರ ಪ್ರದೇಶ ಒಂದರಲ್ಲೇ 2001ರಲ್ಲಿ 22.17 ಮಿಲಿಯನ್ ಇದ್ದದ್ದು 2011ಕ್ಕೆ 19.6 ಮಿಲಿಯನ್‌ಗೆ ಇಳಿಕೆಯಾಗಿದೆ.

Number Of Agriculture Labours Increased Across Country

2001 ರಿಂದ 2011ರ ಅವಧಿಯಲ್ಲಿ ಪಂಜಾಬ್‌ನಲ್ಲಿ ಶೇಕಡಾ 7.25% ರಷ್ಟು ಮತ್ತು ಹರಿಯಾಣದಲ್ಲಿ 21.77% ಇಳಿಕೆಯಾಗಿದೆ. ಅದೇ ರೀತಿ ಪಂಜಾಬ್‌ನಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 6.29% ರಷ್ಟು ಹೆಚ್ಚಾಗಿದ್ದರೆ, ಹರಿಯಾಣದಲ್ಲಿ 16.34 ಶೇಕಡಾ ಹೆಚ್ಚಾಗಿದೆ.

ಈ ಅವಧಿಯಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಳವಾದ ರಾಜ್ಯಗಳು ಮತ್ತು ಕಾರ್ಮಿಕರ ಸಂಖ್ಯೆ ಇಂತಿದೆ.
ಉತ್ತರ ಪ್ರದೇಶ 6.54 ಮಿಲಿಯನ್, ಬಿಹಾರ 4.93 ಮಿಲಿಯನ್, ಮಧ್ಯಪ್ರದೇಶ 4.79 ಮಿಲಿಯನ್, ಆಂಧ್ರಪ್ರದೇಶ (ಇಬ್ಭಾಗ ಆಗುವ ಮುನ್ನ)-3.14 ಮಿಲಿಯನ್, ಪಶ್ಚಿಮ ಬಂಗಾಳ 2.83 ಮಿಲಿಯನ್, ಮಹಾರಾಷ್ಟ್ರ 2.67 ಮಿಲಿಯನ್, ರಾಜಸ್ಥಾನ 2.41 ಮಿಲಿಯನ್, ಚತ್ತೀಸ್‌ಘಡ 2 ಮಿಲಿಯನ್, ಒಡಿಷಾ 1.74 ಮಿಲಿಯನ್, ಜಾರ್ಖಂಡ್ 1.59 ಮಿಲಿಯನ್, ಗುಜರಾತ್ 1.68 ಮಿಲಿಯನ್ ಕೃಷಿ ಕಾರ್ಮಿಕರು ಈ ಅವಧಿಯಲ್ಲಿ ಹೆಚ್ಚಾಗಿದ್ದಾರೆ. ಹರಿಯಾಣದಲ್ಲಿ ಪ್ರತಿ ರೈತನ ಸರಾಸರಿ ಭೂ ಇಡುವಳಿ 2.22 ಹೆಕ್ಟೇರ್. ಪಂಜಾಬ್‌ನಲ್ಲಿ 3.62 ಹೆಕ್ಟೇರ್.

ದೇಶದಲ್ಲಿ ಸರಾಸರಿ 1.8 ಹೆಕ್ಟೇರ್ ಭೂಹಿಡುವಳಿ ಹೊಂದಿರುವ ರೈತರಿದ್ದಾರೆ. ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ 0.73 ಹೆಕ್ಟೇರ್ ಭೂಹಿಡುವಳಿ ಸರಾಸರಿಯಾಗಿದೆ. ಉತ್ತರ ಪ್ರದೇಶದ ಮಗ್ಗುಲಲ್ಲೇ ಇರುವ ಬಿಹಾರದ ರೈತರ ಸರಾಸರಿ ಭೂಹಿಡುವಳಿ 0.39 ಹೆಕ್ಟೇರ್.

ಕೃಷಿ ಗಣತಿಯ ಪ್ರಕಾರ ಭೂಹಿಡುವಳಿಯ ಮೊತ್ತದ ಮೇಲೆ ರೈತರನ್ನು ಐದು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಹಿಡುವಳಿ ಉಳ್ಳವರು ಮಾರ್ಜಿನಲ್ (ಅತಿ ಸಣ್ಣ ರೈತರು), ಸಣ್ಣ ರೈತರು-1 ರಿಂದ 2 ಹೆಕ್ಟೇರ್. ಸಣ್ಣ-ಮಧ್ಯಮ ರೈತರು, 2 ರಿಂದ 4 ಹೆಕ್ಟೇರ್, ಮಧ್ಯಮ ರೈತರು, 4 ರಿಂದ 10 ಹೆಕ್ಟೇರ್ ಮಧ್ಯಮ ರೈತರು, 10 ಹೆಕ್ಟೇರ್‌ಗಿಂತ ಹೆಚ್ಚು ಭೂಹಿಡುವಳಿ ಉಳ್ಳವರು ದೊಡ್ಡ ರೈತರು.

English summary
Some agriculture statistics in "Business Line" news paper brings surprise. Report in that mentions that the number of agriculture labours increased across country,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X