ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ “ಬೀಜ ಭಯೋತ್ಪಾದನೆ” ಕಾಲ ಸನ್ನಿಹಿತವಾಗಿದೆ!

|
Google Oneindia Kannada News

ಇದ್ಯಾಕೋ ಚೀನಾ ಭಾರತದ ಬುಡಕ್ಕೆ ಕೊಳ್ಳಿ ಇಡುವ ಸೂಚನೆಗಳು ಕಾಣತೊಡಗಿವೆ. ಕಳಪೆ ಬಿತ್ತನೆ ಬೀಜಗಳನ್ನು ಭಾರತಕ್ಕೆ ನುಗ್ಗಿಸಿ ಇಲ್ಲಿನ ಬೀಜ ಮತ್ತು ಜೀವ ವೈವಿಧ್ಯವನ್ನು ನಾಶ ಮಾಡಲು ಸಂಚು ರೂಪಿಸಿರುವ ಬಗ್ಗೆ ಅನುಮಾನ ಹಾಗೂ ಆತಂಕ ವ್ಯಕ್ತವಾಗಿದೆ. ಆ ಬಗ್ಗೆ ಇಂಟರ್ನ್ಯಾಷನಲ್ ಸೀಡ್ ಟೆಸ್ಟಿಂಗ್ ಅಸೋಸಿಯೇಷನ್ (ISTA) ತಕರಾರು ತೆಗೆದಿದೆ.

Recommended Video

ರಾಮಮಂದಿರ ಶಿಲಾ ನ್ಯಾಸಕ್ಕೆ ಕ್ಷಣಗಣನೇ | Oneindia Kannada

ಅನುಮಾನಾಸ್ಪದ ಬೀಜಗಳು ಭಾರತದ ಮಾರುಕಟ್ಟೆಗೆ ಪ್ರವೇಶಿಸಬಹುದಾದ ಸಾಧ್ಯತೆಗಳ ಬಗ್ಗೆ ಸಂಸ್ಥೆಯು ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ವರದಿಯನ್ನಾಧರಿಸಿ ನ್ಯಾಷನಲ್ ಸೀಡ್ ಅಸೋಸಿಯೇಷನ್ ಆಫ್ ಇಂಡಿಯಾ (NSAI) ಕೇಂದ್ರ ಸರ್ಕಾರಕ್ಕೆ ಈ 'ಬೀಜ ಭಯೋತ್ಪಾದನೆ'ಯನ್ನು ತಡೆಯಲು ಬೇಕಾದ ಯೋಜನೆ ರೂಪಿಸಬೇಕು. ಆ ಬಗ್ಗೆ ನಿಗಾವಹಿಸಬೇಕು. ಅಗತ್ಯವಾದ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದೆ.

ಬಿತ್ತನೆ ಬೀಜ-ಆತ್ಮ ನಿರ್ಭರ್ ಮತ್ತು ರಫ್ತು ಅವಕಾಶಗಳು...ಬಿತ್ತನೆ ಬೀಜ-ಆತ್ಮ ನಿರ್ಭರ್ ಮತ್ತು ರಫ್ತು ಅವಕಾಶಗಳು...

ಭಾರತದ germ plasm & genetic resources ಸಂಗ್ರಹದ ಬಗ್ಗೆ ಚೀನಾ ಮತ್ತಿತರ ದೇಶಗಳ ಕಂಪನಿಗಳಿಗೆ ಬಹಳಷ್ಟು ಮಾಹಿತಿ ಇದೆ. ವಾಸ್ತವವಾಗಿ ಕಳೆದ 20-25 ವರ್ಷಗಳಿಂದ ಚೀನಾ ಭಾರತೀಯ ಬೀಜಗಳ ಬಗ್ಗೆ ಅಧ್ಯಯನ ನಡೆಸಿ hybrid parent line ಅನ್ನು ಚೀನಾಕ್ಕೆ ತೆಗೆದುಕೊಂಡು ಹೋಗುತ್ತಿದೆ. ಭಾರತೀಯ germ plasm ಯಾವುದೇ ಅಡೆತಡೆಯಿಲ್ಲದೆ ಚೀನಾಕ್ಕೆ ರಫ್ತಾಗುತ್ತಿವೆ ಎಂದು NSAIನ ಇಂದ್ರಶೇಖರ್ ಸಿಂಗ್ (Director Policy & Outreach) ಹೇಳಿದ್ದಾರೆ.

NSAI Wrote Letter To Central Government Regarding Suspicion Of Seed Terrorism On India

ಮುಂದುವರೆದು, ಭಾರತೀಯ ಕಂಪನಿಗಳು ಚೀನಾದಲ್ಲಿ ಬೀಜ ಕಂಪನಿ ಆರಂಭಿಸುವಂತಿಲ್ಲ. ಆದರೆ ಚೀನಾ ಕಂಪನಿಗಳು ಇಲ್ಲಿ ಸುಸೂತ್ರವಾಗಿ ಬೀಜ ಕಂಪನಿ ಮಾಡಬಹುದು ಎಂದಿದ್ದಾರೆ. ಭಾರತದ ಅನುಮತಿ ಇಲ್ಲದೆ ಹೊರದೇಶಗಳಿಂದ ಯಾವುದೇ ಬೀಜಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ, ಆದರೆ ಈ ನಿಯಮವನ್ನು ಮೀರಲಾಗುತ್ತಿದೆ. ಇಂಥದೊಂದು "ಬೀಜ ಭಯೋತ್ಪಾದನೆ" ಭಾರತದ ಆಹಾರ ಭದ್ರತೆಗೆ ಮಾರಕವಾಗಬಲ್ಲದು. ಚೀನಾದ ಬಳಿ ಅತ್ಯಾಧುನಿಕ ಜೈವಿಕ ತಂತ್ರಜ್ಞಾನವಿದೆ. ಅದು ಎಷ್ಟು ಬಲಿಷ್ಠವಾಗಿದೆಯೆಂದರೆ, ಭಾರತದ ಆಹಾರ ಭದ್ರತೆಯನ್ನೇ ಅಲುಗಾಡಿಸುವಷ್ಟು ಸುಸಜ್ಜಿತ ತಂತ್ರಜ್ಞಾನ ಅವರ ಬಳಿ ಇದೆ. ಹಾಗಾಗಿ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದೂ ಇಂದ್ರಶೇಖರ್ ಸಿಂಗ್ ಹೇಳಿದ್ದಾರೆ.

English summary
There is suspicion that China has conspired to export poor quality sowing seeds to India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X