ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬನ್ ಪಾರ್ಕ್‌ನಲ್ಲಿ 2ನೇ ಶನಿವಾರವೂ ವಾಹನ ಸಂಚಾರವಿಲ್ಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30 : ಬೆಂಗಳೂರು ನಗರದ ಕಬ್ಬನ್ ಪಾರ್ಕ್‌ನಲ್ಲಿ ಪ್ರತಿ ಭಾನುವಾರ ವಾಹನ ಸಂಚಾರವನ್ನು ನಿಷೇಧಿಸಿರುವ ಸಂಚಾರಿ ಪೊಲೀಸರು ಇನ್ನು ಮುಂದೆ ಎರಡನೇ ಶನಿವಾರವೂ ವಾಹನ ಸಂಚಾರ ನಿಷೇಧಿಸಲು ಮುಂದಾಗಿದ್ದಾರೆ.

ನವೆಂಬರ್ 14ರ ಮಕ್ಕಳ ದಿನಾಚರಣೆ ದಿನದಿಂದ ಪ್ರಾಯೋಗಿಕವಾಗಿ ಎರಡನೇ ಶನಿವಾರದ ವಾಹನ ಸಂಚಾರ ನಿಷೇಧ ಜಾರಿಗೆ ಬರಲಿದೆ. ಈ ಪ್ರಯೋಗ ಯಶಸ್ವಿಯಾದರೆ ಇದನ್ನು ಜಾರಿಗೆ ತರಲಾಗುತ್ತದೆ. ಬೆಂಗಳೂರು ಸಂಚಾರಿ ಪೊಲೀಸರು ಈ ಕುರಿತು ಫೇಸ್‌ಬುಕ್‌ನಲ್ಲಿಯೂ ಮಾಹಿತಿ ನೀಡಿದ್ದಾರೆ. [ಪಾರ್ಕಿನಲ್ಲಿ ಸಂಡೇ ಸಂಚಾರ ಬಂದ್ ಸಿಹಿ ಹಂಚಿಕೆ]

cubbon park

ಪ್ರತಿ ತಿಂಗಳ ಎರಡನೇ ಶನಿವಾರ ರಜಾ ದಿನವಾಗಿರುವುದರಿಂದ ಕಬ್ಬನ್ ಉದ್ಯಾನದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುತ್ತದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಕ್ಕೆ ಬರುತ್ತಾರೆ. ಆದ್ದರಿಂದ, ವಾಹನ ಸಂಚಾರ ನಿಷೇಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. [ಭಾನುವಾರ ವಾಹನ ಸಂಚಾರ ಶಾಶ್ವತ ನಿಷೇಧ]

ಭಾನುವಾರ ಸಂಚಾರ ನಿಷೇಧ : ತೋಟಗಾರಿಕಾ ಇಲಾಖೆ ಮತ್ತು ಬೆಂಗಳೂರು ಸಂಚಾರಿ ಪೊಲೀಸರು 2015ರ ಮೇ 24ರ ಭಾನುವಾರದಿಂದ ಮೂರು ವಾರಗಳ ಕಾಲ ಪ್ರಾಯೋಗಿಕವಾಗಿ ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ನಿಷೇಧಿಸಿದ್ದರು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಸದ್ಯ, ಭಾನುವಾರ ಕಬ್ಬನ್ ಪಾರ್ಕ್‌ ವಾಹನಗಳಿಂದ ಮುಕ್ತವಾಗಿರುತ್ತದೆ.

ಕಬ್ಬನ್‌ ಪಾರ್ಕ್‌ನಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ತಡೆಗಟ್ಟಲು ಭಾನುವಾರ ವಾಹನ ಸಂಚಾರ ನಿಷೇಧಕ್ಕೆ ಅನುಮತಿ ನೀಡಬೇಕು ಎಂದು ತೋಟಗಾರಿಕಾ ಇಲಾಖೆ 2014ರ ಡಿಸೆಂಬರ್‌ನಲ್ಲಿ ಸರ್ಕಾರ ಮತ್ತು ಸಂಚಾರಿ ಪೊಲೀಸರಿಗೆ ಮನವಿ ಮಾಡಿತ್ತು. 2015ರಲ್ಲಿ ಅದು ಜಾರಿಗೆ ಬಂದಿದೆ. ಸದ್ಯ, ಎರಡನೇ ಶನಿವಾರವೂ ವಾಹನ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.

Presently Cubbon park is closed for traffic on every Sunday. We are planning to close Cubbon park on 2nd Saturday of November on the experimental basis.

Posted by Bengaluru Traffic Police onThursday, October 29, 2015

English summary
Presently Cubbon park is closed for traffic on every Sunday. We are planning to close Cubbon park on 2nd Saturday of November 14 on the experimental basis said Bengaluru traffic police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X