ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಇಷ್ಟರಲ್ಲೇ ಸಿಗುವುದೇ ಹೊಸ ಸಾಲ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 18: ಲಾಕ್ ಡೌನ್ ನಿಂದಾಗಿ ರೈತರಿಗೆ ಸಾಕಷ್ಟು ಅನನುಕೂಲವಾಗಿದೆ. ಇಷ್ಟರಲ್ಲಿಯೇ ರೈತರಿಗೆ ಹೊಸ ಸಾಲ ನೀಡಲು ನಿರ್ಧರಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಬರಲಿದೆ" ಎಂದು ತಿಳಿಸಿದ್ದಾರೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು, "ಕೊರೊನಾ ಭೀತಿ ಹಿನ್ನೆಲೆ ರಾಜ್ಯದ ಬಹುತೇಕ ಎಪಿಎಂಸಿಗೆ ಭೇಟಿ ನೀಡಲಾಗುತ್ತಿದೆ. ರೈತರಿಗೆ ತಮ್ಮ ಬೆಳೆ ಮಾರಾಟಕ್ಕೆ ತೊಂದರೆ ಆಗಬಾರದು‌. ಈಗಾಗಲೇ ರೈತರ ಸಾಲ ಮನ್ನಾ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದರು.

ಜುಬಿಲಿಯಂಟ್ ಸಿಬ್ಬಂದಿಗೆ ವೇತನ ನಿಲ್ಲಿಸದಿರಲು ಸೋಮಶೇಖರ್ ಮನವಿಜುಬಿಲಿಯಂಟ್ ಸಿಬ್ಬಂದಿಗೆ ವೇತನ ನಿಲ್ಲಿಸದಿರಲು ಸೋಮಶೇಖರ್ ಮನವಿ

"ರಾಜ್ಯದಲ್ಲಿ 29800 ಅರ್ಜಿಗಳಿದ್ದವು. ಇದರಲ್ಲಿ 14629 ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ. ಈ ಕುರಿತು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ರೈತರಿಗೆ ಹೊಸ ಸಾಲ ನೀಡುವ ಬಗ್ಗೆ ಆದೇಶ ಹೊರಡಿಸಲಾಗುವುದು. ಇದೇ ವಿಚಾರಕ್ಕೆ ಸಿಎಂ ಜೊತೆ ಸಭೆ ನಡೆಸಲಾಗುವುದು" ಎಂದರು.

New Loan Will Be Announced Shortly To Farmers Informed St Somashekhar

ಖಾಸಗಿ ಹಣಕಾಸು ಕಂಪನಿಗಳು ರೈತರಿಂದ ಸಾಲ ವಸೂಲು ಮಾಡುವಂತಿಲ್ಲ. ವಾಹನಗಳನ್ನ ಸೀಜ್ ಮಾಡುವಂತಿಲ್ಲ. ಅದಾಗಿಯೂ ಸಾಲ ವಸೂಲಿ ಮಾಡಲು ಮುಂದಾದರೆ ಅಂಥ ಕಂಪನಿಗಳಿಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ‌ನಡೆಸಿ ಸುತ್ತೋಲೆ ಕಳುಹಿಸಲಾಗುವುದು. ಮೂರು ತಿಂಗಳ‌ ಕಾಲ ಸಾಲ ವಸೂಲಿ ಮಾಡದಂತೆ ಖಾಸಗಿ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

English summary
New loan will be annouced to farmers very shortly informed ST Somashekhar in davanagere,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X