ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ: ಹಣ ಪಡೆಯಲು ಈ ದಾಖಲೆ ನೀಡುವುದು ಕಡ್ಡಾಯ

|
Google Oneindia Kannada News

ವಂಚನೆಗಳನ್ನು ತಡೆಯುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಅಡಿಯಲ್ಲಿ ನಿಯಮಗಳನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ, ನಿರ್ದಿಷ್ಟ ವರ್ಗದ ರೈತರು ಮಾತ್ರ ಪ್ರಯೋಜನಗಳನ್ನು ಪಡೆಯುತ್ತಾರೆ.

ಆದರೆ ಈ ಯೋಜನೆಯಡಿಯಲ್ಲಿ ಹಲವರು ನಕಲಿ ದಾಖಲೆಗಳನ್ನು ನೀಡಿ ವರ್ಷಕ್ಕೆ 6,000 ರುಪಾಯಿಗಳನ್ನು ಪಡೆದಿರುವ ಬಗ್ಗೆ ರಾಜ್ಯಗಳು ವರದಿ ಮಾಡಿದೆ. ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು, ಅರ್ಹರಿಗೆ ಮಾತ್ರ ಯೋಜನೆಯ ಹಣ ದೊರೆಯುವಂತೆ ಮಾಡಲು ಹಲವು ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಯೋಜನೆಯಡಿ ಪ್ರಧಾನಿ ಮೋದಿ ಸರ್ಕಾರವು ರೈತರ ಖಾತೆಗೆ ಇದುವರೆಗೆ 11 ಕಂತುಗಳ ಹಣ ಪಾವತಿಸಿದೆ. ಇದೀಗ 12ನೇ ಕಂತಿನ ಹಣ ಬಿಡುಗಡೆಯಾಗಬೇಕಾಗಿದೆ.

PM Kisan eKYC : ಇ-ಕೆವೈಸಿ ತುಂಬದಿದ್ದರೆ ಸಿಗಲ್ಲ ಹಣ, ಇದು ಹೊಸ ಡೆಡ್‌ಲೈನ್PM Kisan eKYC : ಇ-ಕೆವೈಸಿ ತುಂಬದಿದ್ದರೆ ಸಿಗಲ್ಲ ಹಣ, ಇದು ಹೊಸ ಡೆಡ್‌ಲೈನ್

ಆರಂಭದಲ್ಲಿ 5 ಎಕರೆ ಕೃಷಿಯೋಗ್ಯ ಭೂಮಿ ಹೊಂದಿರುವ ರೈತರು ಮಾತ್ರ ಯೋಜನೆಯಡಿ ಹಣ ಪಡೆಯಲು ಅರ್ಹರು ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಈ ನಿಯಮ ತೆಗೆದುಹಾಕಿದ್ದು, 14.5 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲಿದ್ದಾರೆ.

ಪಡಿತರ ಚೀಟಿ ವಿವರ ನಮೂದಿಸುವುದು ಕಡ್ಡಾಯ

ಪಡಿತರ ಚೀಟಿ ವಿವರ ನಮೂದಿಸುವುದು ಕಡ್ಡಾಯ

ಹೊಸ ನಿಯಮದ ಪ್ರಕಾರ, ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸುವಾಗ ಎಲ್ಲಾ ರೈತರು ತಮ್ಮ ಪಡಿತರ ಚೀಟಿ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಯೋಜನೆಗೆ ನೋಂದಾಯಿಸುವಾಗ ನಿಮ್ಮ ಪಡಿತರ ಚೀಟಿಯ ಪ್ರತಿಯನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಈಗ ಯಾರು ತಮ್ಮ ಅರ್ಜಿಯಲ್ಲಿ ಪಡಿತರ ಚೀಟಿಯ ವಿವರಗಳನ್ನು ನಮೂದಿಸುತ್ತಾರೋ ಅವರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುತ್ತದೆ.

ಕರ್ನಾಟಕದ 63 ಲಕ್ಷ ರೈತರ ಖಾತೆಗೆ 11ನೇ ಕಂತು: ಕೇಂದ್ರದಿಂದ 1269.85 ಕೋಟಿ ಬಿಡುಗಡೆಕರ್ನಾಟಕದ 63 ಲಕ್ಷ ರೈತರ ಖಾತೆಗೆ 11ನೇ ಕಂತು: ಕೇಂದ್ರದಿಂದ 1269.85 ಕೋಟಿ ಬಿಡುಗಡೆ

ಆಧಾರ್ ಕಾರ್ಡ್‌ ಕಡ್ಡಾಯ

ಆಧಾರ್ ಕಾರ್ಡ್‌ ಕಡ್ಡಾಯ

ಕಿಸಾನ್ ಸಮ್ಮಾನ್ ನಿಧಿ ಯೋಜನಯೆಯ ಪ್ರಯೋಜನ ನೀಡಲು ಆಧಾರ್ ಕಾರ್ಡ್‌ ಹೊಂದಿರುವುದು ಅಗತ್ಯ. ಆಧಾರ್ ಇಲ್ಲದೆ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ಯೋಜನೆಯಲ್ಲಿ ನೋಂದಣಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಲೆಕ್ಕಪರಿಶೋಧಕರು, ಕಾಪೌಂಡರ್ ಮತ್ತು ಕೃಷಿ ಅಧಿಕಾರಿಗಳ ಬಳಿ ಹೋಗುವುದು ತಪ್ಪುತ್ತದೆ. ಈಗ ರೈತರು ಸುಲಭವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ನೀವು ಖಾತೆ ಸಂಖ್ಯೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿದ್ದರೆ, pmkisan.nic.inನಲ್ಲಿ ಫಾರ್ಮರ್ಸ್ ಕಾರ್ನರ್‌ಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಬಹುದು. ನಮೂದಿಸಿದ ವಿವರಗಳಲ್ಲಿ ತಪ್ಪಾಗಿದ್ದರೆ ತಿದ್ದುಪಡಿ ಮಾಡುವ ಅವಕಾಶ ಕೂಡ ಇದೆ.

ನೋಂದಣಿ ಬಳಿಕ ನಿಮ್ಮ ಸ್ಟೇಟಸ್ ಪರಿಶೀಲಿಸಿ

ನೋಂದಣಿ ಬಳಿಕ ನಿಮ್ಮ ಸ್ಟೇಟಸ್ ಪರಿಶೀಲಿಸಿ

ನೋಂದಣಿ ಬಳಿಕ ರೈತರು ತಮ್ಮ ಸ್ಟೇಟಸ್ ಪರಿಶೀಲನೆ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಇನ್ನು ಮುಂದೆ ರೈತರೇ ತಮ್ಮ ಅರ್ಜಿಯ ಸ್ಟೇಟಸ್ ಪರಿಶೀಲನೆ ಮಾಡಬಹುದು.

ರೈತರ ಬ್ಯಾಂಕ್ ಖಾತೆಗೆ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಬಹುದು. ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡಿ ರೈತರು ತಮ್ಮ ಮೊಬೈಲ್ ಅಥವಾ ಬ್ಯಾಂಕ್ ಅಕೌಂಟ್ ನಂಬರ್ ನಮೂದಿಸುವ ಮೂಲಕ ಮಾಹಿತಿ ಪಡೆಯಬಹುದು.

ಇ ಕೆವೈಸಿ ಮಾಡುವುದು ಈಗ ಕಡ್ಡಾಯ

ಇ ಕೆವೈಸಿ ಮಾಡುವುದು ಈಗ ಕಡ್ಡಾಯ

ಪಿಎಂ ಕಿಸಾನ್ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಲು ಅರ್ಹ ರೈತರು ಇಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪಿಎಂ-ಕಿಸಾನ್ ನೋಂದಾಯಿತ ರೈತರಿಗೆ ಇಕೆವೈಸಿ (eKYC) ಕಡ್ಡಾಯವಾಗಿದೆ. ಒಟಿಪಿ ಆಧಾರಿತ ಇಕೆವೈಸಿ ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಇಕೆವೈಸಿ ಮಾಡಲು ಜುಲೈ 31 ಕೊನೆಯ ದಿನಾಂಕವಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಕೂಡ ಸೇರಿಸಲಾಗಿದೆ. ಪಿಎಂ ಕಿಸಾನ್‌ನ ಫಲಾನುಭವಿಗಳು ಸುಲಭವಾಗಿ ಕೆಸಿಸಿ ಮಾಡಿಸಿಕೊಳ್ಳಬಹುದು. ಕೆಸಿಸಿಯಲ್ಲಿ ಶೇಕಡ 4ರ ದರದಲ್ಲಿ ರೈತರು 3 ಲಕ್ಷ ರುಪಾಯಿವರೆಗೆ ವರೆಗೆ ಸಾಲ ಪಡೆಯಬಹುದಾಗಿದೆ.

ಪ್ರಧಾನಿ ಕಿಸಾನ್ ಯೋಜನೆಯನ್ನು 2018 ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಯಿತು, ಆರ್ಥಿಕ ಬೆಂಬಲ ಅಗತ್ಯವಿರುವ ರೈತ ಕುಟುಂಬಗಳಿಗೆ ಪಿಂಚಣಿ ನೀಡುವ ಯೋಜನೆ ಇದಾಗಿದೆ. 2019 ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ, ರೈತರು ವರ್ಷಕ್ಕೆ 6,000 ರುಪಾಯಿ ಭತ್ಯೆಯನ್ನು ಪಡೆಯುತ್ತಾರೆ, ಇದನ್ನು ನಾಲ್ಕು ತಿಂಗಳ ಅಂತರದಲ್ಲಿ ವರ್ಷದಲ್ಲಿ ಮೂರು ಬಾರಿ ವಿತರಿಸಲಾಗುತ್ತದೆ. ಸರ್ಕಾರವು ಪಿಎಂ ಕಿಸಾನ್ ಯೋಜನೆಗೆ 2 ಲಕ್ಷ ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ.

Recommended Video

ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆ ಬಗ್ಗೆ ನರೇಶ್ ಮೂರನೇ ಪತ್ನಿ ಹೇಳಿದ್ದೇನು? | Oneindia Kannada

English summary
The government has made it mandatory to do an eKYC by te eligible farmers to continue receiving the benefits of PM KISAN. Know more changes about in PM Kisan samman Scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X