ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಇಂದಿರಾ ಗಾಂಧಿ ಮಾಡಿದ ತಪ್ಪನ್ನೇ ಈಗ ಮೋದಿ ಮಾಡುತ್ತಿದ್ದಾರೆ"

|
Google Oneindia Kannada News

ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ರೈತರು ಹಾಗೂ ಸರ್ಕಾರದ ನಡುವೆ ಸಂಘರ್ಷ ಮುಂದುವರೆದಿದೆ. ಹಲವು ರಾಜಕೀಯ ಹಾಗೂ ರೈತ ಮುಖಂಡರು ಈ ಬೆಳವಣಿಗೆಯನ್ನು ಖಂಡಿಸಿ, ರಾಷ್ಟ್ರವಿರೋಧಿ ಶಕ್ತಿಗಳು ಇದೇ ಅವಕಾಶವನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವ ಅಪಾಯದ ಕುರಿತು ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಳೆದ ವಾರವಷ್ಟೇ, "ಈ ಒಂದು ಪರಿಸ್ಥಿತಿ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರಬಹುದು" ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಎಚ್ಚರಿಕೆ ನೀಡಿದ್ದರು. ಇದೀಗ ರೈತರ ಆಂದೋಲನ ಇನ್ನಷ್ಟು ತೀವ್ರಗೊಂಡಿದೆ. ಮಹಾರಾಷ್ಟ್ರದ ಮಾಜಿ ಸಂಸದ ಹಾಗೂ ರೈತ ಮುಖಂಡ ರಾಜು ಶೆಟ್ಟಿ ಅವರು ಕೂಡ ಇದೇ ಎಚ್ಚರಿಕೆಯನ್ನು ಮರಳಿ ನೀಡಿದ್ದಾರೆ.

ಶತ್ರು ಯಾರೆಂದು ತಿಳಿದಾಗ ಯುದ್ಧ ಮಾಡುವುದು ಸುಲಭ: ಮೋದಿಶತ್ರು ಯಾರೆಂದು ತಿಳಿದಾಗ ಯುದ್ಧ ಮಾಡುವುದು ಸುಲಭ: ಮೋದಿ

ಹಿಂದೆಂದೂ ಈ ರೀತಿ ಪ್ರಜಾಪ್ರಭುತ್ವ ವಿರೋಧಿ ನಡೆಯಲ್ಲಿ ಕಾಯ್ದೆಗಳನ್ನು ಜಾರಿಗೊಳಿಸಿಲ್ಲ. ಪ್ರಜಾಪ್ರಭುತ್ವ ನೀತಿಯನ್ನು ಮುರಿದು ನಿಯಮಗಳನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಕಾಯ್ದೆ ಜಾರಿಗೂ ಮುನ್ನ ರೈತರ ಸಲಹೆಗಳನ್ನು ಪಡೆಯಲು ಸಚಿವಾಲಯದ ಜಾಲತಾಣದಲ್ಲಿ ಕರಡನ್ನು ಹಾಕಬೇಕಿತ್ತು. ನಂತರ ಅದನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕಿತ್ತು. ಕಾಯ್ದೆ ಕುರಿತು ಮತ ಚಲಾವಣೆಗೆ ಅವಕಾಶ ನೀಡಬೇಕಿತ್ತು. ಆದರೆ ಇದಾವುದೂ ಆಗಿಲ್ಲ. ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.

Narendra Modi Making Same Mistake Of Indira Gandhi Said Former MP Raju Shetti

"ರೈತರ ಚಳಿವಳಿಗೆ ರಾಷ್ಟ್ರಾದ್ಯಂತ ಬೆಂಬಲವಿದೆ"

ರೈತರ ಈ ಚಳವಳಿಗೆ ದೇಶಾದ್ಯಂತ ಬೆಂಬಲವಿದೆ. ಉತ್ತರ ಭಾರತಕ್ಕಷ್ಟೇ ಇದು ಸೀಮಿತವಾಗಿಲ್ಲ. ದಕ್ಷಿಣ ಭಾರತದಿಂದ ದೆಹಲಿಯವರೆಗೂ ರೈತರು ಬರಲು ಸಾಧ್ಯವಿಲ್ಲ. ಹೀಗೆಂದು ರೈತರ ಈ ಚಳವಳಿಗೆ ಶಕ್ತಿ ಇಲ್ಲ ಎಂದಲ್ಲ. ದಕ್ಷಿಣ ರಾಜ್ಯಗಳಿಂದ ಬೆಂಬಲವಿಲ್ಲ ಎಂದೂ ಅರ್ಥವಲ್ಲ. ಪ್ರತಿ ದಿನವೂ ಇಲ್ಲಿನ ಪ್ರತಿಭಟನೆಯನ್ನು ಬೆಂಬಲಿಸಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ ಎಂದರು.

"ಮುಂದೆ ಭಾರೀ ಮೊತ್ತ ತೆರಬೇಕಾಗುತ್ತದೆ"

ಆದರೆ ಸರ್ಕಾರ ಈ ಧೋರಣೆಯನ್ನು ಮುಂದುವರೆಸಿದರೆ ಮುಂದೆ ಭಾರೀ ರಾಜಕೀಯ ಮೊತ್ತವನ್ನು ತೆರಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಭಾರತ್ ಬಂದ್ ಈ ಮಟ್ಟಿನ ಯಶಸ್ಸನ್ನು ಕಂಡಿದೆ. ಇದರ ದೊಡ್ಡ ಪರಿಣಾಮವನ್ನೂ ನೀವು ಅರ್ಥಮಾಡಿಕೊಳ್ಳಬೇಕಿದೆ ಎಂದು ಎಚ್ಚರಿಸಿದರು.

"ಆಗಲೂ ಇದೇ ಎಚ್ಚರಿಕೆ ನೀಡಿದ್ದರು"

1980ರಲ್ಲೂ ಪಂಜಾಬ್ ನಲ್ಲಿ ಇದೇ ರೀತಿ ಆಗಿತ್ತು. ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ರೈತರ ಬೆಳೆಗಳನ್ನು ಖರೀದಿಸುವ ವ್ಯಾಪಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಆಗ ಆರ್ಥಿಕ ತಜ್ಞ, ಸಂಸದರೂ ಆಗಿದ್ದ ಶರತ್ ಜೋಷಿ ಇದೇ ಎಚ್ಚರಿಕೆಯನ್ನು ನೀಡಿದ್ದರು. ಸರ್ಕಾರ ಈ ನಿಲುವನ್ನು ಮುಂದುವರೆಸಿದರೆ ರಾಷ್ಟ್ರವಿರೋಧಿ ಶಕ್ತಿಗಳು ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಎಚ್ಚರಿಸಿದ್ದರು.

"ಇಂದಿರಾ ಗಾಂಧಿ ಮಾಡಿದ್ದ ತಪ್ಪನ್ನೇ ಮೋದಿ ಮಾಡುತ್ತಿದ್ದಾರೆ"

ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಯಾವುದೇ ಅರ್ಥಪೂರ್ಣ ಮಾತುಕತೆ, ಸಂವಾದ ನಡೆಸಲಿಲ್ಲ. ದೇಶವು ಮುಂದಿನ ಹತ್ತು ವರ್ಷಗಳಲ್ಲಿ ಇದಕ್ಕೆ ಭಾರೀ ಮೊತ್ತ ತೆರಬೇಕಾಯಿತು. ಇದೇ ಸಂದರ್ಭ ಈಗ ಮತ್ತೆ ಎದುರಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರೂ ಇದೇ ತಪ್ಪನ್ನು ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಸರ್ಕಾರ ಸೂಕ್ಷ್ಮವಾಗಿ ನಿಭಾಯಿಸದೇ ಇದ್ದರೆ ಮುಂದಿನ ಪರಿಣಾಮಗಳಿಗೂ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದರು.
ಸದ್ಯಕ್ಕೆ ಎರಡೂ ಕಡೆಗೆ ಇರುವ ಪರಿಹಾರ ಒಂದೇ. ಕೆಲವು ತಿಂಗಳ ಮಟ್ಟಿಗೆ ಈ ಕಾಯ್ದೆಗಳನ್ನು ತಡೆಹಿಡಿದಿಟ್ಟುಕೊಳ್ಳುವುದು. ಈ ಸಮಯದಲ್ಲಿ ಸೂಕ್ತ ಆಲೋಚನೆ, ಸಲಹೆಗಳೊಂದಿಗೆ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುವುದು. ಸರ್ಕಾರಕ್ಕೆ ಈಗಿರುವ ದಾರಿ ಇದೊಂದೇ ಎಂದು ಉತ್ತರಿಸಿದರು.

English summary
PM Narendra Modi making same mistake what Indira gandhi did. Indira gandhi shut herself from dialogue. Pm modi is also doing same, said former MP Raju shetti reacting on farmers protest in delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X