ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತ ವಾಹಿನಿ 'ಡಿಡಿ ಕಿಸಾನ್' ಗೆ ನರೇಂದ್ರ ಮೋದಿ ಚಾಲನೆ

|
Google Oneindia Kannada News

ನವದೆಹಲಿ, ಮೇ 26: ವಾರ್ತೆ, ಮನರಂಜನೆ, ಪರಿಸರ, ಪ್ರಾಣಿ, ಕ್ರೀಡೆಗೆ ಸಂಬಂಧಿಸಿ ಪ್ರತ್ಯೇಕ ವಾಹಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಸಾರ ಭಾರತಿ ರೈತರಿಗೋಸ್ಕರ 'ಡಿಡಿ ಕಿಸಾನ್' ಎಂಬ ವಾಹಿನಿಯನ್ನು ಲೋಕಾರ್ಪಣೆ ಮಾಡಿದೆ.

ವಾಹಿನಿಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಪ್ರಸಾರ ಭಾರತಿ ಚೇರ್ ಮೆನ್ ಡಾ. ಸೂರ್ಯ ಪ್ರಕಾಶ್, ನಾವು ಈ ವಾಹಿನಿಯನ್ನು ದೇಶದ ಎಲ್ಲ ರೈತರ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲೂ ವಾಹಿನಿಯ ಬಗ್ಗೆ ಪ್ರಚಾರ ನೀಡಲಾಗಿದ್ದು ಕೃಷಿ ಪೂರಕ ಕಾರ್ಯಕ್ರಮಗಳು ಇಂದಿನಿಂದಲೇ ಆರಂಭವಾಗಲಿದೆ ಎಂದು ಹೇಳಿದರು.[ಪ್ರಸಾರ ಭಾರತಿಗೆ ಕನ್ನಡದ ಸೂರ್ಯ ಪ್ರಕಾಶ]

news

ಪ್ರಧಾನಿ ನರೇಂದ್ರ ಮೋದಿ ವಾಹಿನಿಗೆ ಮಂಗಳವಾರ ಸಂಜೆ ಅಧಿಕೃತ ಚಾಲನೆ ನೀಡಿದರು. ಕೇಬಲ್ ಮತ್ತು ಡಿಟಿಎಚ್ ನಿರ್ವಾಹಕರು ತಮ್ಮ ಗ್ರಾಹಕರಿಗೆ ಈ ವಾಹಿನಿಯನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಸರ್ಕಾರ ತಿಳಿಸಿದೆ. [ಪೆನ್ನನ್ನೇ ಪೊರಕೆಯಾಗಿಸಿದ ಪತ್ರಕರ್ತರಿಗೆ ಮೋದಿ ಥ್ಯಾಂಕ್ಸ್]

ವಾಹಿನಿಯ ವಿಶೇಷಗಳು ಏನು?
* ಇದು 24x7 ಮಾದರಿಯ ವಾಹಿನಿ
* ಕೇವಲ ರೈತರಿಗೆ ಸಂಬಂಧಿತ ಕಾರ್ಯಕ್ರಮಗಳು
* ರೈತರ ದೃಷ್ಟಿಕೋನದಲ್ಲಿ ಹವಾಮಾನ ವಿವರ ಮತ್ತು ವಿಶ್ಲೇಷಣೆ
* ದೇಶದ ಎಲ್ಲ ಭಾಗದ ಹವಾಗುಣ ಆಧರಿಸಿ ಮಾಹಿತಿ
* ವೈಜ್ಞಾನಿಕ ವಿಧಾನದ ಮೂಲಕ ಬೆಳೆಗೆ ಸಂಬಂಧಿಸಿದ ವಿವರ
* ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ವಾಹಿನಿಯಲ್ಲಿ ಪ್ರಸಾರವಾಗಲಿದೆ.
* ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ವಾಹಿನಿಯ ಅಂಬಾಸಿಡರ್ ಆಗಿದ್ದಾರೆ.

English summary
The National Democratic Alliance (NDA) government is launched a 24-hour channel for farmers, DD Kisan, on May 26. Its launch comes at a time when rural India is going through one if its worst crop seasons, battered by inclement weather and price shocks. While the government has been blamed for not doing enough to help farmers, it has also risked being labelled anti-farmer by repeatedly pushing for the land acquisition bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X