• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಗಿ ಉತ್ಸವಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ ಮೈಸೂರು

|
Google Oneindia Kannada News

ಮೈಸೂರು, ಡಿಸೆಂಬರ್ 20: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾ ನಂತರ ಪ್ರವಾಸಿಗರನ್ನು ಹಾಗೂ ಸ್ಥಳೀಯರನ್ನು ಹೆಚ್ಚು ಆಕರ್ಷಿಸಲು ವರ್ಷಾಂತ್ಯದಲ್ಲಿ ಆಯೋಜಿಸುವ ಮಾಗಿ ಉತ್ಸವ' ಈ ಬಾರಿ ಡಿ.22ರಿಂದ ಆರಂಭವಾಗಲಿದ್ದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೇಕ್ ಉತ್ಸವ, ಮುಕ್ತ ಚಲನಚಿತ್ರೋತ್ಸವ, ಚಿತ್ರಸಂತೆ ಮಾದರಿಯಲ್ಲಿ ಕಲಾಉತ್ಸವ, ಹಸಿರು ಸಂತೆ, ಪಕ್ಷಿ ಹಬ್ಬ, ಗೊಂಬೆಯಾಟ ಪ್ರದರ್ಶನ ಹೀಗೆ ಹತ್ತು ಹಲವು ಕಾರ್ಯಕಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ವಿವರಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು, ಈ ಬಾರಿ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಯೋಜಿಸಿದ್ದು, ಹೊಸ ಆಯಾಮ ನೀಡಲಾಗಿದೆ.

ಮೈಸೂರು ಅರಮನೆ ಆವರಣದಲ್ಲಿ ಡಿ. 22 ರಿಂದ ವೈಭವೋಪೇತ ಫಲಪುಷ್ಪ ಪ್ರದರ್ಶನಮೈಸೂರು ಅರಮನೆ ಆವರಣದಲ್ಲಿ ಡಿ. 22 ರಿಂದ ವೈಭವೋಪೇತ ಫಲಪುಷ್ಪ ಪ್ರದರ್ಶನ

ಕೃಷ್ಣರಾಜ ಬುಲೆವಾರ್ಡ್ ರಸ್ತೆ (ನ್ಯಾಯಾಲಯದ ಮುಂಭಾಗದ ರಸ್ತೆ)ಯಲ್ಲಿ ಡಿ.30ರಂದು ಮೈಸೂರು ಕಲಾ ಉತ್ಸವ ಹಾಗೂ ಸಾವಯವ ಕೃಷಿಯ ಹಸಿರು ಸಂತೆಯನ್ನು ಆಯೋಜಿಸಲಾಗಿದೆ. ಇಲ್ಲಿ ಒಂದು ರಸ್ತೆಯಲ್ಲಿ ಕಲಾ ಉತ್ಸವ ನಡೆಯಲಿದ್ದು, ಮತ್ತೊಂದು ರಸ್ತೆಯಲ್ಲಿ ಹಸಿರು ಸಂತೆ ನಡೆಯಲಿದೆ.

ಕಲಾ ಉತ್ಸವದಲ್ಲಿ ಮೈಸೂರು ಶೈಲಿಯ ಚಿತ್ರಕಲೆಗಳು, ಗಂಜೀಫಾ, ವರ್ಣಚಿತ್ರಗಳು, ಛಾಯಾ ಚಿತ್ರಗಳು, ಕಾಷ್ಟ ಶಿಲ್ಪ, ಶಿಲ್ಪ ಕಲಾಕೃತಿಗಳು, ಮರದ ಕೆತ್ತನೆ, ಲೋಹದ ಕುಸುರಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಹಸಿರು ಸಂತೆಯಲ್ಲಿ ಸಾವಯವ ಕೃಷಿಯ ಉತ್ಪನ್ನಗಳ ಪ್ರದರ್ಶನ, ಮಾರಾಟ, ತಿಂಡಿ,ತಿನಿಸುಗಳು ಲಭ್ಯವಿರಲಿದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರದರ್ಶನ ಇದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಡಿ.26ರಿಂದ 28ರವರೆಗೆ ನಗರದ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ. ಡಿ 26ರಿಂದ 28ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಮುಕ್ತ ಚಲನ ಚಿತ್ರೋತ್ಸವ (ಓಪನ್ ಫಿಲಂ ಫೆಸ್ಟಿವಲ್) ನಡೆಯಲಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಹಾಗೂ ಅಂಬಿ ನಿಂಗ್ ವಯಸ್ಸಾಯ್ತು' ಮತ್ತು ಇಂಗ್ಲಿಷ್ ಚಿತ್ರ ಜಂಗಲ್ ಬುಕ್ ಅಥವಾ ಅವೆಂಜರ್ಸ್ ಎಂಡ್‍ಗೇಮ್ ಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಕಲಾಮಂದಿರದ ಆವರಣದಲ್ಲಿರುವ ರಂಗಾಯಣದ ವನರಂಗದಲ್ಲಿ ಡಿ.29ರಂದು ಮಕ್ಕಳಿಗಾಗಿ ಗೊಂಬೆಯಾಟ (ಪಪ್ಪೆಟ್ ಶೋ) ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದಲ್ಲದೆ, ರಾಜ್ಯಮಟ್ಟದಲ್ಲಿ ನಡೆಯುವ ಬರ್ಡ್ ಫೆಸ್ಟಿವಲ್ ಈ ಬಾರಿ ಮೈಸೂರಿನಲ್ಲಿ ಡಿ.28 ಮತ್ತು 29ರಂದು ನಡೆಸಲಿದ್ದು ಇಲ್ಲಿನ ಜೀವ ವೈವಿಧ್ಯಗಳ ಬಗ್ಗೆ ಪರಿಚಯ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಡಿ.22ರಿಂದ ನಗರದ ಮಾನಸ ಗಂಗೋತ್ರಿಯಲ್ಲಿರುವ ಕ್ರಿಕೆಟ್ ಮೈದಾನದಿಂದ ದಸರಾದಲ್ಲಿ ಆಯೋಜಿಸಿದ್ದ ಪ್ಯಾರಾ ಸ್ಕೈಲಿಂಗ್ ಅನ್ನು ಮಾಗಿ ಉತ್ಸವದಲ್ಲೂ ಪರಿಚಯಿಸಲಾಗುತ್ತಿದೆ. ದಸರಾದಲ್ಲಿ ಇದ್ದ ದರವೇ ಈಗಲೂ ಇರಲಿದೆ ಎಂದರು.

English summary
Mysuru winter festival will start from december 22nd .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X