ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನ ಪಾಲಿಸಿ ನನ್ನ ಕೈಯಲ್ಲಿ'; ಪಾಲಿಸಿಯ ವಿವರ ರೈತನ ಮನೆ ಬಾಗಿಲಿಗೆ: ಬಿ.ಸಿ. ಪಾಟೀಲ್

|
Google Oneindia Kannada News

ಬೆಂಗಳೂರು,ಫೆ.26: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಜೊತೆಗೆ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ನಾವು " ನನ್ನ ಪಾಲಿಸಿ ನನ್ನ ಕೈಯಲ್ಲಿ" ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಬಿ‌.ಸಿ. ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನ ಜಿಕೆವಿಕೆಯ ಬಿ.ಹೆಚ್.ಎಸ್ ಕಾಲೇಜಿನ ಆಡಿಟೋರಿಯಂ‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಸಚಿವರು ಮಾತನಾಡಿದರು.

ರಾಗಿಗೆ ಬೆಂಬಲ ಬೆಲೆ ನೀಡಲು ಕೇಂದ್ರದ ಅನುಮತಿಯ ನಿರೀಕ್ಷೆರಾಗಿಗೆ ಬೆಂಬಲ ಬೆಲೆ ನೀಡಲು ಕೇಂದ್ರದ ಅನುಮತಿಯ ನಿರೀಕ್ಷೆ

ಪ್ರಾಕೃತಿಕ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ನಮ್ಮ ಸಂಕಲ್ಪವಾಗಿದೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಯೋಜನೆ ಇದಾಗಿದೆ. ಹಿಂಗಾರು 2021-22ರ ಹಂಗಾಮಿನಲ್ಲಿ ನೋಂದಣಿ ಮಾಡಿದಂತಹ ರೈತರಿಗೆ ತಮ್ಮ ಪಾಲಿಸಿ ವಿವರವನ್ನು ಇನ್‌ಲ್ಯಾಂಡ್ ಲೆಟರ್‌ ನಮೂನೆಯಲ್ಲಿ ವಿತರಿಸುವ ಕಾರ್ಯಕ್ರಮ. ಈಗ ರಾಜ್ಯದ ಲಕ್ಷಾಂತರ ರೈತರು " ನನ್ನ ಪಾಲಿಸಿ ನನ್ನ ಕೈಯಲ್ಲಿ" ಎಂದು ಹೇಳಿಕೊಳ್ಳಬಹುದು ಎಂದು ಹೇಳಿದರು.

My policy is in my hands; Policy details to the farmers doorstep: B.C. Patil

2021 ರ ಮುಂಗಾರು ಹಂಗಾಮಿನಲ್ಲಿ 113.49 ಕೋಟಿ ರೂ.ಗಳ ಬೆಳೆ ವಿಮಾ ಪರಿಹಾರ ಮೊತ್ತವು ಸ್ಥಳೀಯ ಪ್ರಕೃತಿ ವಿಕೋಪಗಳಡಿ ಇತ್ಯರ್ಥವಾಗಿದ್ದು, 2016-17 ಹಾಗೂ 2017-18ರ ಮುಂಗಾರು , ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿಮಾ ಪರಿಹಾರ ಮೊತ್ತವು ರೈತರ ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆ ಲಭ್ಯವಿಲ್ಲದ ಕಾರಣ ತಿರಸ್ಕೃತಗೊಂಡ 100.24 ಕೋಟಿ ರೂ. ESCROW ಖಾತೆಯ ಮೂಲಕ 1.27 ಲಕ್ಷ ಅರ್ಹ ರತ ಫಲಾನುಭವಿಗಳಿಗೆ ಇತ್ಯಾರ್ಥಪಡಿಸಲಾಗಿದೆ.

ರಾಗಿಗೆ ಬೆಂಬಲ ಬೆಲೆ ನೀಡಲು ಕೇಂದ್ರದ ಅನುಮತಿಯ ನಿರೀಕ್ಷೆರಾಗಿಗೆ ಬೆಂಬಲ ಬೆಲೆ ನೀಡಲು ಕೇಂದ್ರದ ಅನುಮತಿಯ ನಿರೀಕ್ಷೆ

ಕಳೆದ ಬಾರಿ ನಡೆದ ಸಭೆಯಲ್ಲಿ ವಿಮಾ ಸಂಸ್ಥೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರ ಫಲವಾಗಿ ಒಂದೇ ತಿಂಗಳಿನಲ್ಲಿ 43.89 ಕೋಟಿ ರೂ.ಪರಿಹಾರ ಮೊತ್ತವನ್ನು 33,160 ರೈತರಿಗೆ ಇತ್ಯರ್ಥಪಡಿಸಿದ್ದಾರೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮೌಲೀಕರಣದ ವೈಫಲ್ಯದಿಂದಾಗಿ ಹಲವಾರು ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಇತ್ಯರ್ಥವಾಗದ ಕಾರಣ ಎಲ್ಲಾ ರೈತರು ಕಡ್ಡಾಯವಾಗಿ ಆಧಾರನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಕೊಳ್ಳಲೇಬೇಕೆಂದು ಮತ್ತೊಮ್ಮೆ ಸಚಿವರು ಪುನರುಚ್ಚರಿಸಿದರು.

Recommended Video

ಕೋರ್ಟ್ ಆದೇಶ ಫಾಲೋ ಮಾಡಿ ಇಲ್ಲ ಅಂದ್ರೆ ಪೊಲೀಸ್ complaint ಕೊಡ್ಬೇಕಾಗತ್ತೆ! | Oneindia Kannada

ಕಾರ್ಯಕ್ರಮದಲ್ಲಿ ಜಿಕೆವಿಕೆ ಕುಲಪತಿ ರಾಜೇಂದ್ರ ಪ್ರಸಾದ್, ಕೃಷಿ ಇಲಾಖಾ ನಿರ್ದೇಶಕಿ ನಂದಿನಿಕುಮಾರಿ,ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಅಧಿಕಾರಿಗಳಾದ ಶಿವರಾಜ್,ವೆಂಕಟರಮಣ ರೆಡ್ಡಿ ಉಪಸ್ಥಿತರಿದ್ದರು.

English summary
"We will launch a crop insurance policy distribution campaign called 'My policy is in my hands' to extend the scope of the pradhan mantri fasal bima yojana and deliver it to the farmer's doorstep: Agriculture Minister BC Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X