ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ 22ಕ್ಕೆ ಎಂಎಸ್‌ಪಿ ಸಮಿತಿಯ ಮಹತ್ವದ ಸಭೆ

|
Google Oneindia Kannada News

ಬೆಂಗಳೂರು ಆಗಸ್ಟ್ 16: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಿತಿ ವತಿಯಿಂದ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಆಗಸ್ಟ್ 22ರಂದು ಸಭೆ ಆಯೋಜಿಸಿದೆ. ಅಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಭೆ ಎಂಎಸ್‌ಪಿ ಸಮಿತಿಯ ಮೊದಲ ಸಭೆಯಾಗಿದೆ ಎಂದು ಮೂಲಗಳು ಹೇಳಿವೆ.

ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟದಿಂದಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್‌ ತೆಗೆದುಕೊಳ್ಳುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಎಂಎಸ್‌ಪಿ ಸಮಸ್ಯೆ ಬಗೆಹರಿಸಲು ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಮಿತಿ ರಚಿತವಾದ ಸಮಿತಿಯ ಮೊಲದ ಸಭೆ ನಡೆಯಲಿದೆ.

ಅಧಿಕ ಮಳೆಯಿಂದ ಬೆಳೆ ಹಾನಿ: ತೊಗರಿ, ಉದ್ದಿನ ಬೇಳೆ ಕಾಳುಗಳ ಬೆಲೆ ಶೇ.15 ಏರಿಕೆಅಧಿಕ ಮಳೆಯಿಂದ ಬೆಳೆ ಹಾನಿ: ತೊಗರಿ, ಉದ್ದಿನ ಬೇಳೆ ಕಾಳುಗಳ ಬೆಲೆ ಶೇ.15 ಏರಿಕೆ

ಮೂಲಗಳ ಪ್ರಕಾರ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸರ್ಕಾರ ಸಂಯುಕ್ತ ಕಿಸಾನ್ ಮೋರ್ಚಾ ಮನ ಒಲಿಸುತ್ತಿದೆ. ಸರ್ಕಾರದ ನಿರ್ದೇಶನದಂತೆ ಕಿಸಾನ್ ಮೋರ್ಚಾ ಸಮಿತಿಗೆ ಮೂವರು ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡತ್ತದೇಯೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

MSP Committee will organized first meeting on August 22 at New Delhi

ಇನ್ನು ಮೂರು ಕೃಷಿ ಕಾಯ್ದೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದ ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ಎಂಎಸ್‌ಪಿ ಸಮಿತಿಯನ್ನು ತಿರಸ್ಕರಿಸಿದೆ. ಜತೆಗೆ ಸಂಸ್ಥೆಯಿಂದ ಮೂವರು ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಮಹತ್ತರ ಉದ್ದೇಶಕ್ಕೆ ಸಮಿತಿ ರಚನೆ

ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರವಾಲ್ ನೇತೃತ್ವದ ಕನಿಷ್ಠ ಬೆಂಬಲ ಸಮಿತಿ (ಎಂಎಸ್‌ಪಿ) ಸಮಿತಿ ರಚಿಸಲಾಗಿದೆ. ಶೂನ್ಯ ಬಜೆಟ್ ಆಧರಿತ ಕೃಷಿಗೆ ಉತ್ತೇಜನ ನೀಡುವುದು, ದೇಶದಲ್ಲಿ ಎದುರಾಗುತ್ತಿರುವ ಅಗತ್ಯ ಬದಲಾವಣೆಗಳನ್ನು ಪರಿಗಣಿಸಿ ಬೆಳೆ ಮಾದರಿಗಳನ್ನು ಬದಲಾಯಿಸಲು ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಸಮಿತಿ ರಚಿತವಾಗಿದೆ.

ಗಗನಕ್ಕೇರಿದ ಗೋಧಿ ಬೆಲೆ: ಕ್ವಿಂಟಾಲ್‌ಗೆ 2,500 ರೂ!ಗಗನಕ್ಕೇರಿದ ಗೋಧಿ ಬೆಲೆ: ಕ್ವಿಂಟಾಲ್‌ಗೆ 2,500 ರೂ!

ಈ ಸಭೆಯಲ್ಲಿ ಸಮಿತಿ ಸದಸ್ಯರನ್ನು ಪರಿಚಯಿಸುವ ಜತೆಗೆ ಉಪ ಸಮಿತಿ ರಚನೆ, ಭವಿಷ್ಯದ ರೂಪರೇಷೆ ಕುರಿತು ಚರ್ಚೆಗಳು ನಡೆಯಲಿವೆ.

MSP Committee will organized first meeting on August 22 at New Delhi

ಸಮಿತಿಯಲ್ಲಿ ಅಧ್ಯಕ್ಷ ಸೇರಿದಂತೆ ಒಟ್ಟು 26 ಸದಸ್ಯರು ಇದ್ದಾರೆ. ಇದರಲ್ಲಿ ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಭಾರತೀಯ ಆರ್ಥಿಕ ಅಭಿವೃದ್ಧಿ ಸಂಸ್ಥೆ ಸದಸ್ಯ ಅರ್ಥಶಾಸ್ತ್ರಜ್ಞ ಸಿ.ಎಸ್‌.ಸಿ ಶೇಖರ್, ಐಐಎಂನ (ಅಹಮದಾಬಾದ್) ಸುಖಪಾಲ್ ಸಿಂಗ್, ಕೃಷಿ ವೆಚ್ಚ -ಬೆಲೆಗಳ ಆಯೋಗದ ಹಿರಿಯ ಸದಸ್ಯ ನವೀನ್ ಪಿ ಸಿಂಗ್‌ ಅವರನ್ನು ಒಳಗೊಂಡಿದೆ. ಸಂಯುಕ್ತ ಕಿಸಾನ್ ಮೋರ್ಚಾದ ಮೂರು ಪ್ರತಿನಿಧಿಗಳಿಗಾಗಿ ಸದಸ್ಯತ್ವವನ್ನು ಮೀಸಲಿಡಲಾಗಿದೆ.

ಸಮಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಕಾರ್ಯದರ್ಶಿಗಳು

ರಾಷ್ಟ್ರ ಪ್ರಶಸ್ತಿ ವಿಜೇತ ರೈತ ಭರತ್ ಭೂಷಣ ತ್ಯಾಗಿ, ಇನ್ನಿತರ ರೈತಪರ ಸಂಘಟನೆಯ ಐದು ಸದಸ್ಯರಾದ ಗುನ್ವಂತ್ ಪಾಟೀಲ್, ಕೃಷ್ಣವೀರ್ ಚೌಧರಿ, ಪ್ರಮೋದ್ ಕುಮಾರ್ ಚೌಧರಿ, ಗುಣಿ ಪ್ರಕಾಶ್ ಮತ್ತು ಸಯ್ಯದ್ ಪಾಶಾ ಪಟೇಲ್ ಅವರು ಇದ್ದಾರೆ. ಜತೆಗೆ ರೈತರ ಸಹಕಾರಿ ಗುಂಪಿನವರು, ಕೃಷಿ ವಿಶ್ವವಿದ್ಯಾಲಯಗಳ ಸದಸ್ಯರು, ಐದು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು, ಕರ್ನಾಟಕ, ಆಂಧ್ರ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾದ ಸರ್ಕಾರಗಳ ಪ್ರತಿನಿಧಿಗಳು ಸಹ ಸಮಿತಿಯಲ್ಲಿದ್ದಾರೆ.

Recommended Video

Renukacharya ಅವರ ಡಾನ್ಸ್ ಹೇಗಿದೆ ನೋಡಿ | *Karnataka | OneIndia Kannada

English summary
Minimum Support Price (MSP) Committee will organize first meeting on August 22 at New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X