ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಬ್ಬರ್, ಪ್ಲಾಸ್ಟಿಕ್ ಉದ್ಯಮದಲ್ಲಿ ಉದ್ಯೋಗಾವಕಾಶ ಅಧಿಕ

|
Google Oneindia Kannada News

ಬೆಂಗಳೂರು ಜೂ.29: ರಬ್ಬರ್ ಹಾಗೂ ಪ್ಲಾಸ್ಟಿಕ್ ಉದ್ಯಮದಲ್ಲಿ ಅಪ್ರೆಂಟಿಸ್ ಸೇರಿದಂತೆ ಸುಮಾರು 4,500ಕ್ಕೂ ಅಧಿಕ ಉದ್ಯೋಗವಕಾಶಗಳು ಇವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಈ ಉದ್ಯಮವು ಇನ್ನಷ್ಟು ಗಣನೀಯವಾಗಿ ಬೆಳೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

ಈ ಬಗ್ಗೆ ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಕೌಶಲ ಸಭೆ (ಸ್ಕಿಲ್ ಮೀಟ್)ಯಲ್ಲಿ ಇಂಡಸ್ಟ್ರಿ ಕನೆಕ್ಟ್, ರಬ್ಬರ್, ಕೆಮಿಕಲ್ ಮತ್ತು ಪೆಟ್ರೋಕೆಮಿಕಲ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ (ಆರ್‌ಸಿಪಿಎಸ್‌ಡಿಸಿ) ಹಿರಿಯ ವ್ಯವಸ್ಥಾಪಕರಾದ ದೀಪಮಾಲಾ ಮೂರ್ಜನಿ ಅವರು ವಿವರಿಸಿದ್ದಾರೆ. ವರ್ಷದಿಂದ ವರ್ಷ ರಬ್ಬರ್ ಹಾಗೂ ಪ್ಲಾಸ್ಟಿಕ್ ಉದ್ಯಮ ಬೆಳೆಯುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಿಗಳ ಅಗತ್ಯತೆ ಉಂಟಾಗುತ್ತಿದೆ ಎಂದರು.

ಭಾರತೀಯ ಉಪ್ಪು ಉದ್ಯಮಕ್ಕೆ ಇರುವ ತೊಡಕುಗಳೇನು?ಭಾರತೀಯ ಉಪ್ಪು ಉದ್ಯಮಕ್ಕೆ ಇರುವ ತೊಡಕುಗಳೇನು?

ದಕ್ಷಿಣದ ಪ್ರಾದೇಶಿಕ ವ್ಯವಸ್ಥಾಪಕರಾದ ಅನ್ನಮಾ ಜಾಕೋಬ್ ಅವರ ಪ್ರಕಾರ, ತಮಿಳುನಾಡು ರಾಜ್ಯವು ಸುಮಾರು ಆರು ಸಾವಿರ ರಬ್ಬರ್ ಹಾಗೂ ಪ್ಲಾಸ್ಟಿಕ್ ಉತ್ಪಾದನಾ ಕೈಗಾರಿಕೆಗಳನ್ನು ಹೊಂದಿದೆ. ರಬ್ಬರ್ ವಿಚಾರಕ್ಕೆ ಬರುವುದಾದರೆ ವಾಹನಗಳಿಗೆ ಬಳಸುವ ಟಯರ್ ಎಂಆರ್ ಎಫ್, ಸಿಯೇಟ್ ಟಯರ್, ಅಪೊಲೋ ಟಯರ್, ಸನ್‌ಡ್ರಂ ಕೈಗಾರಿಕೆ, ಜೆಬಿಎಂ ಆಟೋ ಆಂಡ್ ಎಮೆರೆಲ್ಡ ಟಯರ್ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ಕೌಶಲ್ಯಯುತ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿವೆ ಎಂದು ಹೇಳಿದರು.

ಎಂಎಸ್ಎಂಇ ಗೆ ಅರಿವು ಮೂಡಿಸಬೇಕು:

ಎಂಎಸ್ಎಂಇ ಗೆ ಅರಿವು ಮೂಡಿಸಬೇಕು:

ಸಭೆಯಲ್ಲಿ ನೈಪುಣ್ಯತೆ, ಕೌಶಲ್ಯಯುತ ಮತ್ತು ವೈವಿದ್ಯಮಯ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಒಂದು ವೇದಿಕೆಯಾಗಿ ಕೌಶಲ್ಯ ಸಭೆಯನ್ನು ನಡೆಸಲಾಗುತ್ತಿದ. ಸೂಕ್ಷ್ಮ, ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ನುರಿತ ಉದ್ಯೋಗಿಗಳ ಅನುಕೂಲತೆಗಳು ಮತ್ತು ಕೌಶಲಯುತ ನೌಕರರ ಸಾಮರ್ಥ್ಯದ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ಎಂಎಸ್ಎಂಇ ವಲಯಗಳಿಗೆ ಅರಿವು ಮೂಡಿಸಬೇಕಿದೆ ಎಂಬುದರ ಕುರಿತು ಚರ್ಚೆ ನಡೆಯಿತು.

ಉತ್ತರ ಪ್ರದೇಶ: ಕೃಷಿ ಆದ್ಯತೆ ನೀಡಲು ಉತ್ತರ ಪ್ರದೇಶ: ಕೃಷಿ ಆದ್ಯತೆ ನೀಡಲು "ಕಿಸಾನ್ ಸಮೃದ್ಧಿ ಯೋಜನೆ" ಜಾರಿ

ಸೇತುವೆಯಾಗಿ ಕಾರ್ಯ ನಿರ್ವಹಣೆ:

ಸೇತುವೆಯಾಗಿ ಕಾರ್ಯ ನಿರ್ವಹಣೆ:

ಸ್ಕಿಲ್ ಮೀಟ್ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಲಭ್ಯವಿರುವ ಸರ್ಕಾರದ ಯೋಜನೆಗಳು ಮತ್ತು ಕೈಗಾರಿಕೆಗಳ ಕೌಶಲ್ಯ ಆಧಾರಿತ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಕ್ಷೇತ್ರಕ್ಕೆ ಒದಗಿಸುವ ಮತ್ತು ಮಾರ್ಗಸೂಚಿ ನೀಡುತ್ತದೆ ಎಂದು ಆರ್‌ಸಿಪಿಎಸ್ ಡಿಸಿ ಯ ಅಧ್ಯಕ್ಷ ವಿನೋದ್ ಪಟ್ಕೋಟ್ವಾರ್ ಹೇಳಿದರು.

15,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳ ನೋಂದಣಿ:

15,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳ ನೋಂದಣಿ:

ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (ಎನ್ಎಸ್ ಡಿಸಿ) ವ್ಯಾಪಾರ ಕಾರ್ಯಾಚರಣೆ ಮುಖ್ಯಸ್ಥ ಪಂಖೂರಿ ಬೋರ್ಗೊಹೆನ್ ಅವರು, ಉತ್ಪಾದನಾ ಕೈಗಾರಿಕೆಗಳನ್ನು ಉತ್ತೇಜಿಸುವ ಆರ್‌ಸಿಪಿಎಸ್ ಡಿಸಿ ಸಂಸ್ಥೆಯಡಿ 15ಸಾವಿರಕ್ಕೂ ಅಧಿಕ ಅಪ್ರೆಂಟಿಸ್ ಗಳು ಈಗಾಗಲೇ ಪ್ರಮುಖ ವಿವಿಧ ರಬ್ಬರ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ ದ್ವಿಗುಣ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಈ ಎರಡು ಉದ್ಯಮದಲ್ಲಿ ಸುಮಾರು 1,000 ಕೈಗಾರಿಕೆಗಳು ಆರ್‌ಸಿಪಿಎಸ್ ಡಿಸಿ ನಲ್ಲಿ ನೋಂದಾಯಿಸಿಕೊಂಡಿವೆ" ಎಂದು ವಿವರಿಸಿದರು.

ವೆಬ್ ಪೋರ್ಟಲ್ ಲೋಕಾರ್ಪಣೆ

ವೆಬ್ ಪೋರ್ಟಲ್ ಲೋಕಾರ್ಪಣೆ

ಯುವ ಶಕ್ತಿ ಫೌಂಡೇಶನ್ ನಿರ್ದೇಶಕ ಸತೀಶ್ ಪವಾರ್ ಅವರು, ಎನ್ ಎಪಿಎಸ್ ಆನ್‌ಲೈನ್ ಪೋರ್ಟಲ್ ನಲ್ಲಿ ಉದ್ಯಮಗಳಿಗೆ ಪೂರಕವಾಗಿ ನಡೆಯುವ ಪೂರಕ ಚಟುವಟಿಕೆಗೆಳು ಹಾಗೂ ಥರ್ಡ್ ಪಾರ್ಟಿ ಅಗ್ರಿಗೇಟರ್ (TPA) ಕಾರ್ಯ ಚಟುವಟಿಕೆ ಬಗ್ಗೆ ವಿವರಿಸಿದರು.

ಸ್ಕಿಲ್ ಮೀಟ್ ನಲ್ಲಿ ಆರ್‌ಸಿಪಿಎಸ್ ಡಿಸಿ ರಬ್ಬರ್, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ವಲಯಗಳಲ್ಲಿನ ಕಂಪನಿಗಳಿಗೆ ತನ್ನ ಪ್ಲೇಸ್ ಮೆಂಟ್ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿತು. ಉದ್ಯಮದ ವೃತ್ತಿಪರರಿಗೆ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ರಾಷ್ಟ್ರೀಯ ಅಪ್ರೆಂಟ್ ಶಿಪ್ ಉತ್ತೇಜನಾ ಯೋಜನೆಯನ್ನು ಪ್ರಸ್ತುತಿ ಪಡಿಸಿತು. ಸಭೆಯಲ್ಲಿ ರಬ್ಬರ್, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ವಲಯದ 50 ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Recommended Video

ಈ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾ ಸಾಗರ್ | *Entertainment | OneIndia Kannada

English summary
Over 45K more openings in the Rubber and Plastic Industry, include Apprentices. The industry is expected to grow significantly in the finacial year,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X