ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು; ಮಳೆ ಆರಂಭ, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು,ಜೂ 6: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಬೀಳುವ ಆಶಾಭಾವದೊಂದಿಗೆ ರಾಯಚೂರು ಜಿಲ್ಲೆಯಾದ್ಯಂತ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಗಾರು ಪೂರ್ವ ಸುರಿದ ಅಡ್ಡ ಮಳೆಯಿಂದ ಭೂಮಿಯಲ್ಲಿ ತೇವಾಂಶ ಉಳಿದಿದ್ದು, ನೀರಿನ ಅನುಕೂಲ ಇರುವ ಕಡೆಗಳಲ್ಲಿ ಈಗಾಗಲೇ ರೈತರು ಸೂರ್ಯಕಾಂತಿ, ಹತ್ತಿ, ತೊಗರಿ, ಭತ್ತ ಬಿತ್ತನೆಯಲ್ಲಿ ತೊಡಗಿದ್ದಾರೆ.

ಮುಖ್ಯವಾಗಿ ಕೃಷ್ಣ ಮತ್ತು ತುಂಗಭದ್ರಾ ನದಿಪಾತ್ರಗಳಲ್ಲಿರುವ ಕೃಷಿಕರು, ಎನ್‌ಆರ್‌ಬಿಸಿ, ಟಿಎಲ್ ಬಿಸಿ ಕಾಲುವೆಗಳ ಭಾಗದ ಬಹುತೇಕ ರೈತರು ಜೂನ್‌ ಮೊದಲ ವಾರದಿಂದ ಬಿತ್ತನೆ ಆರಂಭಿಸಿದ್ದಾರೆ. ಸಿಂಧನೂರು, ಮಸ್ಕಿ, ಹಟ್ಟಿ, ಮುದಗಲ್, ದೇವುಸುಗೂರು, ತುರ್ವಿಹಾಳ, ಬಳಗಾನೂರ ಹೋಬಳಿಗಳಲ್ಲಿ ಅಡ್ಡಮಳೆ ಭಾರೀ ಪ್ರಮಾಣದಲ್ಲಿ ಸುರಿದಿದ್ದು, ಬೀಜ ಬಿತ್ತನೆಗೆ ಪ್ರಶಸ್ತ ದಿನಕ್ಕಾಗಿ ಕಾಯುತ್ತಿದ್ದಾರೆ. ಜೂನ್‌ ಎರಡನೇ ವಾರ ಸ್ವಲ್ಪ ಮಳೆ ಸುರಿದರೂ ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ವ್ಯಾಪಕವಾಗಿ ಆರಂಭವಾಗಲಿದೆ.

ರಾಯಚೂರಿನಲ್ಲಿ ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ ರಾಯಚೂರಿನಲ್ಲಿ ಬಿರುಗಾಳಿ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಬಿತ್ತನೆ ಕಾರ್ಯಕ್ಕೆ ಅನುಕೂಲ ಮಾಡಿಕೊಡಲು ಕೃಷಿ ಇಲಾಖೆ ಕೂಡಾ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ, ಬೆಳೆವಿಮಾ ಮಾಹಿತಿ ಹಾಗೂ ಕೃಷಿ ಇಲಾಖೆಯಲ್ಲಿ ಚಾಲ್ತಿಯಿರುವ ವಿವಿಧ ಯೋಜನೆಗಳ ತಿಳಿವಳಿಕೆಯನ್ನು ರೈತರಿಗೆ ನೀಡುತ್ತಿದೆ. ವಿವಿಧ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸುವ ಕಾರ್ಯ ಆರಂಭಿಸಿದ್ದು, ಸಾಮಾನ್ಯ ಮತ್ತು ಪರಿಶಿಷ್ಟ ರೈತರಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದೆ.

ರಸ್ತೆ ಕಾಮಗಾರಿ ನಡೆಸದೇ ಸಂಪೂರ್ಣ ಬಿಲ್ ಗುಳುಂ- ಶಾಸಕ ಶಿವನಗೌಡ ವಿರುದ್ಧ ಆರೋಪರಸ್ತೆ ಕಾಮಗಾರಿ ನಡೆಸದೇ ಸಂಪೂರ್ಣ ಬಿಲ್ ಗುಳುಂ- ಶಾಸಕ ಶಿವನಗೌಡ ವಿರುದ್ಧ ಆರೋಪ

ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ

ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ

ಸಿಂಧನೂರು ತಾಲ್ಲೂಕಿನಲ್ಲಿ ರೈತರಿಗೆ ಮುಂಗಾರು ಹಂಗಾಮಿಗೆ ಸಾಕಾಗುವಷ್ಟು ಬೀಜ, ಗೊಬ್ಬರ ಸಂಗ್ರಹಿಸಲಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ ಮಾಡುವುದಾಗಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕ ಎಸ್. ತಿಳಿಸಿದ್ದಾರೆ. ವಿವಿಧ ಬೀಜ ಸೇರಿ 638 ಕ್ವಿಂಟಾಲ್ ಸಂಗ್ರಹವಿದೆ. 321 ಕ್ವಿಂಟಾಲ್ ಭತ್ತ, 170 ಕ್ವಿಂಟಾಲ್ ತೊಗರಿ, 29 ಕ್ವಿಂಟಾಲ್ ಸಜ್ಜೆ, 96 ಕ್ವಿಂಟಾಲ್ ಸೂರ್ಯಕಾಂತಿ, 17 ಕ್ವಿಂಟಾಲ್ ಮೆಕ್ಕೆಜೋಳ ಸಂಗ್ರಹವಿದೆ. 13000 ಟನ್ ರಸಾಯನಿಕ ಗೊಬ್ಬರ ಸಂಗ್ರಹವಿದ್ದು, ಅದರಲ್ಲಿ ಯೂರಿಯಾ 8400, ಡಿಎಪಿ 2200, ಎಂಒಪಿ 90, ಕಾಂಪ್ಲೆಕ್ಸ್ 2100 ಟನ್ ಸಂಗ್ರಹವಿದೆ. ಅಗತ್ಯಕ್ಕನುಗುಣವಾಗಿ ಈಗಾಗಲೇ ರೈತರಿಗೆ ವಿತರಿಸಲಾಗಿದೆ. ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಬಂದಿದ್ದು, ವಿತರಣಾ ಕಾರ್ಯ ಆರಂಭವಾಗಿಲ್ಲ ಎಂದು ಅವರು ತಿಳಿಸಿದರು.

ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಭೇಟಿ ನೀಡಿ ಸೂರ್ಯಕಾಂತಿ ಬೀಜ ಕೇಳುತ್ತಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ಇಲ್ಲ ಬೀಜ ಸಂಗ್ರಹವಿಲ್ಲ, ನಾಳೆ ಅಥವಾ ನಾಡಿದ್ದು ಬನ್ನಿ ಎಂದು ಉತ್ತರಿಸಿ ವಾಪಸ್ ಕಳುಹಿಸುತ್ತಿರುವುದು ಕಂಡು ಬಂತು.

ಸಜ್ಜೆ ಬೀಜಗಳ ದಾಸ್ತಾನಿಗೆ ವ್ಯವಸ್ಥೆ

ಸಜ್ಜೆ ಬೀಜಗಳ ದಾಸ್ತಾನಿಗೆ ವ್ಯವಸ್ಥೆ

ಮಾನ್ವಿ ತಾಲ್ಲೂಕಿನ ಸ್ಥಳೀಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಗೆ ಮಾನ್ವಿ ಹಾಗೂ ನೂತನ ಸಿರವಾರ ತಾಲ್ಲೂಕು ಒಳಪಟ್ಟಿವೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತರ ನೆರವಿಗಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಸಹಾಯ ಧನದ ಅಡಿಯಲ್ಲಿ ಅಗತ್ಯ ಪ್ರಮಾಣದ ಬೀಜ, ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 2,751 ಕ್ವಿಂಟಾಲ್ ವಿವಿಧ ಬೀಜಗಳಿಗೆ ಬೇಡಿಕೆ ಇದ್ದು ಹಂತ ಹಂತವಾಗಿ ರೈತರಿಗೆ ಪೂರೈಸಲು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಎರಡು ತಾಲ್ಲೂಕುಗಳ ಒಟ್ಟು 7 ಹೋಬಳಿ ಕೇಂದ್ರಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ತೊಗರಿ, ಸೂರ್ಯಕಾಂತಿ, ಹೆಸರು ಹಾಗೂ ಸಜ್ಜೆ ಬೀಜಗಳ ದಾಸ್ತಾನಿಗೆ ವ್ಯವಸ್ಥೆ ಮಾಡಲಾಗಿದೆ.

ಆರಂಭದಲ್ಲಿ ತೊಗರಿ, ಹೆಸರು ಮತ್ತು ಸೂರ್ಯಕಾಂತಿ ಬೀಜಗಳಿಗೆ ಬೇಡಿಕೆ ಇದ್ದು ರೈತರಿಗೆ ವಿತರಿಸಲಾಗುತ್ತಿದೆ. ಒಟ್ಟು 43ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು 10,446 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಯೂರಿಯಾ 6,621ಮೆಟ್ರಿಕ್ ಟನ್, ಡಿಎಪಿ 1,498 ಮೆಟ್ರಿಕ್ ಟನ್, ಎಂಒಪಿ-50 ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್-2,277 ಮೆಟ್ರಿಕ್ ಟನ್ ಪ್ರಮಾಣದಷ್ಟು ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದೆ.

ಬಿತ್ತನೆ ಬೀಜ ಪೂರೈಸುವ ಏಜೆನ್ಸಿಗಳ ವಿಳಂಬ ಧೋರಣೆಗೆ ರೈತರ ಆಕ್ರೋಶ

ಬಿತ್ತನೆ ಬೀಜ ಪೂರೈಸುವ ಏಜೆನ್ಸಿಗಳ ವಿಳಂಬ ಧೋರಣೆಗೆ ರೈತರ ಆಕ್ರೋಶ

ಲಿಂಗಸುಗೂರು ತಾಲ್ಲೂಕಿನಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು ಕೃಷಿ ಇಲಾಖೆ ಕೂಡ ರೈತರಿಗೆ ಜಾಗೃತಿ ಅಭಿಯಾನ, ಬೀಜೋಪಚಾರ, ಮಿಶ್ರಬೆಳೆ ಪದ್ಧತಿ ಸೇರಿದಂತೆ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಣೆಗೆ ಮುಂಜಾಗ್ರತೆ ವಹಿಸಿದೆ. ಆದರೆ, ಬಿತ್ತನೆ ಬೀಜ ಪೂರೈಸುವ ಏಜೆನ್ಸಿಗಳ ವಿಳಂಬ ಧೋರಣೆ ಸಂಕಷ್ಟಕ್ಕೆ ಸಿಲುಕಿಸಿದೆ. ತಾಲ್ಲೂಕಿನಾದ್ಯಂತ ಬಿತ್ತನೆ ಕೈಗೊಳ್ಳಬಹು ದಾದ 58706 ಹೆಕ್ಟೇರ್‍ ಪ್ರದೇಶಕ್ಕೆ ಅವಶ್ಯಕ ಎನ್ನಿಸುವ 25347 ಮೆಟ್ರಿಕ್‍ ಟನ್‍ ವಿವಿಧ ಬಗೆಯ ರಸಗೊಬ್ಬರ, 4818 ಟನ್‍ ವಿವಿಧ ಬಗೆಯ ಬಿತ್ತನೆ ಬೀಜಗಳ ಸಂಗ್ರಹಣೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಂಡಿರುವುದನ್ನು ಕೃಷಿ ಇಲಾಖೆ ದೃಢಪಡಿಸಿದೆ.

ತಾಲ್ಲೂಕಿನ ಗುರುಗುಂಟಾ, ಲಿಂಗಸುಗೂರು, ಮುದಗಲ್ಲ ಸೇರಿದಂತೆ ಇತರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ಸೂರ್ಯಕಾಂತಿ, ಸಜ್ಜೆ, ಹೆಸರು, ತೊಗರಿ ಸೇರಿದಂತೆ ಇತರೆ ಬಿತ್ತನೆ ಬೀಜಗಳ ಸಂಗ್ರಹಣೆ ಮಾಡಿಕೊಳ್ಳಲಾಗಿದೆ. ಬೇಡಿಕೆ ಆಧರಿಸಿ ಸೂರ್ಯಕಾಂತಿ ಬಿತ್ತನೆ ಜೀಜ ಪೂರೈಕೆ ಆಗದಿರುವುದು ರೈತರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಬೇಡಿಕೆಯ ಅರ್ಧದಷ್ಟು ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಸ್ಟಾಕ್ ಇದ್ದು ಬಾಕಿ ಬೀಜಗಳು ಬೇಡಿಕೆಗನುಗುಣವಾಗಿ ಲಭ್ಯವಾಗಲಿವೆ ಎಂದು ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಸಿದ್ದಾರೆಡ್ಡಿ ತಿಳಿಸಿದ್ದಾರೆ.

5,35,471 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಗುರಿ

5,35,471 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಗುರಿ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 5,35,471 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಗುರಿ ಹೊಂದಲಾಗಿದೆ. ಅದರಲ್ಲಿ 2,44,767 ಹೆಕ್ಟೇರ್‌ ಖುಷ್ಕಿ ಜಮೀನು ಮತ್ತು 2,90,704 ಹೆಕ್ಟೇರ್‌ ನೀರಾವರಿ ಜಮೀನಿನಲ್ಲಿ ಬಿತ್ತನೆ ಗುರಿ ಇದೆ. ಕೆಲವು ಭಾಗಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿದೆ. ಸದ್ಯಕ್ಕೆ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ, ತೊಗರಿ ಮತ್ತು ಹೆಸರು ಬಿತ್ತನೆ ಬೀಜಗಳನ್ನು ರೈತರಿಗೆ ನೀಡುತ್ತಿದ್ದಾರೆ. ಬಿಬಿಟಿ 5204 ಭತ್ತ ಒಂದು ಪ್ಯಾಕೆಟ್‌ ದರ ₹875, ಆರ್‌ಎನ್‌ಆರ್‌ ಭತ್ತ 5048 ಪ್ಯಾಕೆಟ್‌ 912.5, ಟಿಎಸ್-3ಆರ್ ತೊಗರಿ ಒಂದು ಪ್ಯಾಕೆಟ್‌ ದರ 550, ಬಿಜಿಎಸ್9 ಹೆಸರು ಒಂದು ಪ್ಯಾಕೆಟ್‌ಗೆ 550 ದರ ನಿಗದಿ ಮಾಡಲಾಗಿದೆ. ಭತ್ತದ ಬೀಜ ಖರೀದಿಸುವ ಸಾಮಾನ್ಯ ರೈತರಿಗೆ ನಿಗದಿತ ದರದಲ್ಲಿ 200 ಸಹಾಯಧನ ಹಾಗೂ ಪರಿಶಿಷ್ಟ ರೈತರಿಗೆ 300 ಸಹಾಯಧನವಿದೆ. ತೊಗರಿ ಮತ್ತು ಹೆಸರು ಖರೀದಿಸುವ ಸಾಮಾನ್ಯ ರೈತರಿಗೆ 125 ಸಹಾಯಧನ ಮತ್ತು ಪರಿಶಿಷ್ಟ ರೈತರಿಗೆ 187.5 ಸಹಾಯಧನವಿದೆ.

ಮುಂಗಾರು ಹಂಗಾಮಿನಲ್ಲಿ ಒಟ್ಟು 2,11,225 ಟನ್‌ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಮೇ ತಿಂಗಳಲ್ಲಿ 22,946 ಟನ್‌ ಗೊಬ್ಬರ ಪೂರೈಸುವಂತೆ ಇಲಾಖೆ ಕೋರಿದೆ. ಈಗಾಗಲೇ 23,957 ಟನ್‌ ರಸಾಯನಿಕ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಅದರಲ್ಲಿ 7781 ಟನ್ ಯೂರಿಯಾ, ಡಿಎಪಿ 5,100 ಟನ್‌, ಎನ್‌ಪಿಕೆ 11,076 ಟನ್‌ ದಾಸ್ತಾನಿದೆ.

Recommended Video

Kashmir ಹುಡಿಗಿಯ ಈ ವೀಡಿಯೊ ದೇಶದೆಲ್ಲೆಡೆ ವೈರಲ್ | #India | OneIndia Kannada

English summary
All set for 2022 monsoon season. Farmers preparing for Agriculture activities at Raichur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X