India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಮಳೆ ಸರಾಸರಿಗಿಂತ ಕಡಿಮೆ; ಕೃಷಿ ಮೇಲೆ ಪರಿಣಾಮ

|
Google Oneindia Kannada News

ನವದೆಹಲಿ, ಜುಲೈ 03; ಭಾರತದ ವಾರ್ಷಿಕ ಮಾನ್ಸೂನ್ ಶನಿವಾರದಂದು ಇಡೀ ದೇಶವನ್ನು ಆವರಿಸಿದೆ, ಇದು ಸಾಮಾನ್ಯಕ್ಕಿಂತ ಆರು ದಿನಗಳ ಮುಂಚಿತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಈ ಋತುವಿನಲ್ಲಿ ಇದುವರೆಗೆ ಸರಾಸರಿಗಿಂತ ಶೇಕಡ 5ರಷ್ಟು ಕಡಿಮೆ ಮಳೆಯಾಗಿದೆ.

ಭಾರತದಲ್ಲಿ ಕೃಷಿ ಉತ್ಪಾದನೆ ಮತ್ತು ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾದ ಮಾನ್ಸೂನ್, ದಕ್ಷಿಣ ಕೇರಳ ರಾಜ್ಯದ ಕರಾವಳಿಗೆ ಮೇ 29 ರಂದು ಆಗಮಿಸಿತು. ವಾಡಿಕೆಗಿಂತ ಒಂದೆರಡು ದಿನ ಮುಂಚಿತವಾಗಿ ಬಂದರೂ ನಂತರ ಮಳೆ ಕ್ರಮೇಣ ಕಡಿಮೆಯಾಯಿತು. ಜೂನ್‌ನಲ್ಲಿ ಶೇಕಡಾ 8ರಷ್ಟು ಮಳೆ ಕೊರತೆಯನ್ನು ಹೊಂದಿತ್ತು.

ಮಂಡ್ಯದಲ್ಲಿ ಭತ್ತದ ಬಂಪರ್ ಬೆಳೆ; ಖರೀದಿಗೆ ಸರ್ಕಾರದ ನಿರಾಸಕ್ತಿ ಮಂಡ್ಯದಲ್ಲಿ ಭತ್ತದ ಬಂಪರ್ ಬೆಳೆ; ಖರೀದಿಗೆ ಸರ್ಕಾರದ ನಿರಾಸಕ್ತಿ

ಜೂನ್ ತಿಂಗಳು ಸುರಿದ ಮಳೆಯಿಂದಾಗಿ ಬೇಸಿಗೆಯ ಅತ್ಯಗತ್ಯ ಬೆಳೆಯಾದ ಭತ್ತದ ನಾಟಿ ವಿಳಂಬವಾಯಿತು. ಭತ್ತ ಬೆಳೆಯುವ ರೈತರು, ಈ ಋತುವಿನಲ್ಲಿ ಇದುವರೆಗೆ 4.3 ಮಿಲಿಯನ್ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 27 ರಷ್ಟು ಕಡಿಮೆಯಾಗಿದೆ.

ದೇಶದ ವಾರ್ಷಿಕ ಮಳೆಯ ಶೇಕಡ 70 ರಷ್ಟನ್ನು ನೀಡುವ ಮಾನ್ಸೂನ್‌ನ ಪ್ರಗತಿಯು ಅಕ್ಕಿ ಉತ್ಪಾದನೆ ಮತ್ತು ವಿಶ್ವದ ಅತಿದೊಡ್ಡ ಧಾನ್ಯದ ರಫ್ತುದಾರರಾದ ಭಾರತದಿಂದ ರಫ್ತು ಪ್ರಮಾಣದಲ್ಲಿ ಅತಿ ನಿರ್ಣಾಯಕ ಪಾತ್ರ ವಹಿಸುತ್ತದೆ.

 ನಕಲಿ ಬೀಜ, ಗೊಬ್ಬರ ಪೂರೈಕೆ; ಕೃಷಿ ಸಚಿವರ ಖಡಕ್ ಎಚ್ಚರಿಕೆ ನಕಲಿ ಬೀಜ, ಗೊಬ್ಬರ ಪೂರೈಕೆ; ಕೃಷಿ ಸಚಿವರ ಖಡಕ್ ಎಚ್ಚರಿಕೆ

ಮಳೆಯಾಧಾರಿತ ಕೃಷಿ ಮೇಲೆ ಪರಿಣಾಮ; ಕಳಪೆ ಮಾನ್ಸೂನ್ ಮಳೆಯು ಭತ್ತದ ನಾಟಿಯನ್ನು ಮತ್ತಷ್ಟು ವಿಳಂಬಗೊಳಿಸುತ್ತದೆ, ಬೆಳೆಯುವ ಪ್ರಮಾಣ ಕಡಿಮಾಗುತ್ತದೆ ಮತ್ತು ಇಳುವರಿ ಕುಂಠಿತವಾಗುತ್ತದೆ. ಇದರಿಂದ ದೇಶದ 1.4 ಶತಕೋಟಿ ಜನರಿಗೆ ಸಾಕಷ್ಟು ಆಹಾರ ಭದ್ರತೆಯನ್ನು ಖಚಿತಪಡಿಸಕೊಳ್ಳುವ ಸಲುವಾಗಿ ರಫ್ತಿನ ಮೇಲೆ ನಿರ್ಬಂಧ ವಿಧಿಸಲು ಕಾರಣವಾಗುತ್ತದೆ.

ಭಾರತವು ಜುಲೈನಲ್ಲಿ ದೀರ್ಘಾವಧಿಯ ಸರಾಸರಿಯ ಶೇಕಡ 94 ಮತ್ತು ಶೇಕಡ 106 ರ ನಡುವೆ ಮಾನ್ಸೂನ್ ಮಳೆಯನ್ನು ಪಡೆಯುವ ಸಾಧ್ಯತೆಯಿದೆ, ಇದು ಅಕ್ಕಿ ಮತ್ತು ಇತರ ಬೆಳೆಗಳಾದ ಜೋಳ, ಹತ್ತಿ, ಸೋಯಾಬೀನ್ ಮತ್ತು ಕಬ್ಬುಗಳನ್ನು ನಾಟಿ ಮಾಡಲು ಅತ್ಯಂತ ನಿರ್ಣಾಯಕ ತಿಂಗಳು ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯು ಜೂನ್‌ನಿಂದ ಪ್ರಾರಂಭವಾಗುವ ಸಂಪೂರ್ಣ ನಾಲ್ಕು ತಿಂಗಳ ಋತುವಿನಲ್ಲಿ 50 ವರ್ಷದ ಸರಾಸರಿ 87 ಸೆಂ.ಮೀ. (35 ಇಂಚು) ಶೇಕಡಾ 96 ಮತ್ತು ಶೇಕಡ 104ರ ನಡುವಿನ ಸರಾಸರಿ ಅಥವಾ ಸಾಮಾನ್ಯ ಮಳೆಯನ್ನು ವ್ಯಾಖ್ಯಾನಿಸುತ್ತದೆ.

Monsoon Rain 5 per Cent Down on Average So Far in India May Affect Agriculture Sector

ಜುಲೈನಲ್ಲಿ ಹೇರಳವಾದ ಮಾನ್ಸೂನ್ ಮಳೆಯು ಬೇಸಿಗೆಯ ಬೆಳೆಗಳ ಉತ್ಪಾದನೆಯ ಬಗ್ಗೆ ಆತಂಕವನ್ನು ಕಡಿಮೆ ಮಾಡುತ್ತದೆ, ಹೆಚ್ಚಿನ ಭಾರತೀಯರು ವಾಸಿಸುವ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಆದಾಯವನ್ನು ನೀಡುತ್ತದೆ. ದೇಶದ ಅರ್ಧದಷ್ಟು ಕೃಷಿ ಭೂಮಿಗೆ ನೀರಾವರಿ ಕೊರತೆ ಇರುವುದರಿಂದ, ಭಾರತೀಯ ರೈತರು ಮಳೆಯನ್ನು ಅವಲಂಬಿಸಿದ್ದಾರೆ.

ಕೃಷಿ ಕ್ಷೇತ್ರದ ಮೇಲೆ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನ ಅವಲಂಬಿತರಾಗಿದ್ದಾರೆ. ಭಾರತದ 2.7 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸುಮಾರು ಶೇಕಡ 15 ನಷ್ಟು ಭಾಗವನ್ನು ಕೃಷಿ ಕ್ಷೇತ್ರ ಹೊಂದಿದೆ.

   ಮೆಕ್ಸಿಕೋದಲ್ಲಿ ಇದೇ ಕಾರಣಕ್ಕೆ ಮೇಯರ್ ಮೊಸಳೆನ ಮದುವೆ ಆಗಿರೋದು !! | OneIndia Kannada
   English summary
   India's annual monsoon covered the entire country, six days earlier than usual, the India meteorological department said, but rain totals are 5% below average so far this season.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X