ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಹಂಗಾಮು ಬೆಳೆಗಳಿಗೆ ವಿಮೆ; ರೈತ ಮಾಹಿತಿ

|
Google Oneindia Kannada News

ಕಲಬುರಗಿ, ಮೇ 26; ಮುಂಗಾರು ಹಂಗಾಮ ಆರಂಭವಾಗಲು ಕೆಲವೇ ದಿನಗಳು ಉಳಿದಿವೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ರೈತರಿಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಮಾಹಿತಿ ನೀಡಲಾಗಿದೆ.

2022-23ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಸರ್ಕಾರವು ಕಲಬುರಗಿ ಜಿಲ್ಲೆಯ ರೈತರಿಗೆ ಘೋಷಿಸಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತೋಟಗಾರಿಕೆ ಬೆಳೆಗಳಾದ ಪಪ್ಪಾಯ ಮತ್ತು ಹಸಿರು ಮೆಣಸಿನಕಾಯಿ (ನೀರಾವರಿ) ಬೆಳೆಗಳನ್ನು ಈ ಯೋಜನೆಯ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ:ಬಿಸಿಪಿಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ:ಬಿಸಿಪಿ

ಹವಾಮಾನ ಅಂಶಗಳಾದ ತಾಪಮಾನ, ಮಳೆಯ ಪ್ರಮಾಣ, ಆರ್ದತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೇಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮಾ ನಷ್ಟವನ್ನು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಹವಾಮಾನ ಆಧಾರಿತ ಬೆಳೆ ವಿಮೆ; ಹಸಿಮೆಣಸಿನಕಾಯಿ ಸೇರ್ಪಡೆ ಹವಾಮಾನ ಆಧಾರಿತ ಬೆಳೆ ವಿಮೆ; ಹಸಿಮೆಣಸಿನಕಾಯಿ ಸೇರ್ಪಡೆ

ರೈತರು ಪಾವತಿಸುವ ಪ್ರೀಮಿಯಂ ವೆಚ್ಚಕ್ಕೆ ಸಮಾನವಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಸಹಾಯಧನ ನೀಡುತ್ತವೆ. ಆದಾಗ್ಯೂ, ಈಶಾನ್ಯ ರಾಜ್ಯಗಳಲ್ಲಿ ವಿಮೆ ಪಡೆಯುವುದನ್ನು ಉತ್ತೇಜಿಸಲು ಈಶಾನ್ಯ ರಾಜ್ಯಗಳಿಗೆ ಪ್ರೀಮಿಯಂ ಸಬ್ಸಿಡಿಯ ಶೇ.90 ರಷ್ಟನ್ನು ಕೇಂದ್ರ ಸರ್ಕಾರ ನೀಡುತ್ತದೆ. ರೈತರು ಯೋಜನೆ ಸದುಪಯೋಗ ಪಡೆದುಕೊಂಡು ನಷ್ಟವಾದರೆ ಪರಿಹಾರ ಪಡೆಯಬಹುದಾಗಿದೆ.

ಅವಧಿಗೂ ಮುನ್ನವೇ ಮುಂಗಾರು ಮಳೆ ಆಗಮನ,ಈ ರಾಜ್ಯಗಳಿಗೆ ಎಚ್ಚರಿಕೆಅವಧಿಗೂ ಮುನ್ನವೇ ಮುಂಗಾರು ಮಳೆ ಆಗಮನ,ಈ ರಾಜ್ಯಗಳಿಗೆ ಎಚ್ಚರಿಕೆ

ಮುಂಗಾರು ಹಂಗಾಮಿಗೆ ಬೆಳೆ ವಿಮೆ

ಮುಂಗಾರು ಹಂಗಾಮಿಗೆ ಬೆಳೆ ವಿಮೆ

ಕಲಬುರಗಿ ಜಿಲ್ಲೆಗೆ ಹೆಚ್‍ಡಿಎಫ್‍ಸಿ ಇಆರ್‌ಜಿಒ ವಿಮಾ ಕಂಪನಿಯು ಆಯ್ಕೆಯಾಗಿದೆ. ವಿಮೆ ಕಂತಿಗೆ ಸಂಬಂಧಪಟ್ಟಂತೆ ರೈತರು ಹಸಿರು ಮೆಣಸಿನಕಾಯಿ (ನೀರಾವರಿ) ಬೆಳೆಗೆ ಪ್ರತಿ ಹೆಕ್ಟೇರ್‌ಗೆ 3550 ರೂ. ಹಾಗೂ ಪಪ್ಪಾಯ ಬೆಳೆಗೆ 6700 ರೂ.ಗಳ ತಮ್ಮ ವಿಮೆ ಕಂತಿನ ಮೊತ್ತವನ್ನು ಪಾವತಿಸಬೇಕು. ವಿಮಾ ಕಂತು ಪಾವತಿಸಲು (ಸಾಲ ಪಡೆದ ಮತ್ತು ಸಾಲ ಪಡೆಯದ ರೈತರಿಗೆ) 2022ರ ಜೂನ್ 30 ಅಂತಿಮ ದಿನ.

ಯಾವ ದಾಖಲೆಗಳು ಬೇಕಿದೆ

ಯಾವ ದಾಖಲೆಗಳು ಬೇಕಿದೆ

ಈ ಯೋಜನೆಯ ಸದುಪಯೋಗ ಪಡೆಯಲು ಬೆಳೆ ಸಾಲ ಪಡೆಯದ ರೈತರು ಹತ್ತಿರದ ಬ್ಯಾಂಕುಗಳಿಗೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಪಹಣಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಹಾಗೂ ಸ್ವಯಂ ಘೋಷಿತ ಬೆಳೆ ಪ್ರಮಾಣ ಪತ್ರದೊಂದಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು. ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಇಲಾಖೆ ಮನವಿ ಮಾಡಿದೆ.

ಯಾರನ್ನು ಸಂಪರ್ಕಿಸಬಹುದು?

ಯಾರನ್ನು ಸಂಪರ್ಕಿಸಬಹುದು?

ಮುಂಗಾರು ಹಂಗಾಮಿನ ಬೆಳೆ ವಿಮೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಸ್ಥಳಿಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್ ಅಥವಾ ಹತ್ತಿರದ ಬ್ಯಾಂಕುಗಳ ಅಧಿಕಾರಿಗಳನ್ನು ರೈತರು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಲಾಗಿದೆ.

ಬೆಳೆ ವಿಮೆ ಯೋಜನೆ ಕುರಿತು ಮಾಹಿತಿ

ಬೆಳೆ ವಿಮೆ ಯೋಜನೆ ಕುರಿತು ಮಾಹಿತಿ

ರೈತರ ಬೆಳೆಗಳ ನಷ್ಟಕ್ಕೆ ಪರಿಹಾರ ಒದಗಿಸಲು 2016 ರ ಜನವರಿ 13 ರಂದು ಭಾರತ ಸರ್ಕಾರ ಪ್ರಮುಖ ಬೆಳೆ ವಿಮಾ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಅನುಮೋದನೆ ನೀಡಿತು. ರೈತರಿಗೆ ದೇಶಾದ್ಯಂತ ಕಡಿಮೆ ಏಕರೂಪದ ಪ್ರೀಮಿಯಂನಲ್ಲಿ ಸಮಗ್ರ ನಷ್ಟ ಪರಿಹಾರವನ್ನು ಒದಗಿಸುವ ಉಪಕ್ರಮ ಇದಾಗಿದೆ.

ರೈತರಿಗೆ ನಷ್ಟವನ್ನು ತಗ್ಗಿಸುವ ಈ ಯೋಜನೆಯು ಸಂಪೂರ್ಣ ಬೆಳೆ ಅವಧಿಗೆ ಬಿತ್ತನೆ ಮಾಡಲಾಗದ ಮತ್ತು ಹಂಗಾಮು ನಡುವಿನ ಪ್ರತಿಕೂಲತೆಗಳಿಂದ ಉಂಟಾಗುವ ನಷ್ಟಗಳೂ ಸೇರಿದಂತೆ ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದವರೆಗೆ ವಿಮೆ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಸ್ಥಳೀಯ ವಿಪತ್ತುಗಳಿಂದ ಉಂಟಾಗುವ ವೈಯಕ್ತಿಕ ಜಮೀನು ಮಟ್ಟದ ನಷ್ಟಗಳು ಮತ್ತು ಪ್ರವಾಹ, ಅಕಾಲಿಕ ಮಳೆ ಮತ್ತು ನೈಸರ್ಗಿಕ ಬೆಂಕಿಯಂತಹ ಅಪಾಯಗಳಿಂದ ಆಗುವ ಕೊಯ್ಲಿನ ನಂತರದ ನಷ್ಟಗಳು ಸಹ ಇದರ ವ್ಯಾಪ್ತಿಗೆ ಬರುತ್ತವೆ.

English summary
Applications invited for the 2022-23 monsoon crop insurance for horticulture crops. June 30th last date for fill premium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X