ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ದುಬಾರಿ ಮಾವಿನ ತಳಿ ಭಾರತದಲ್ಲಿ; ಎಷ್ಟಿದರ ಬೆಲೆ?

|
Google Oneindia Kannada News

ಮಾವಿನ ಸೀಸನ್ ಬರುತ್ತಿದ್ದಂತೆ ಥರಾವರಿ ಮಾವಿನ ತಳಿಗಳ ಹೆಸರು ಎಲ್ಲೆಲ್ಲೂ ಚಾಲ್ತಿಯಲ್ಲಿರುತ್ತವೆ. ಕೆಲವು ಗುಣವಿಶೇಷಣಗಳಿಂದ, ಹಾಗೆಯೇ ಕೆಲವು ತಳಿ ದುಬಾರಿ ಬೆಲೆಯಿಂದಲೇ ಸುದ್ದಿಯಲ್ಲಿರುತ್ತವೆ. ಅದೇ ರೀತಿ ಈ ಬಾರಿ ಮಧ್ಯಪ್ರದೇಶದಲ್ಲಿ ಬೆಳೆಯಲಾದ ಈ ವಿಶೇಷ ಮಾವಿನ ತಳಿ ಭಾರೀ ಸುದ್ದಿ ಮಾಡುತ್ತಿದೆ. ವಿಶ್ವದಲ್ಲೇ ಅತಿ ದುಬಾರಿ ಮಾವಿನ ತಳಿ ಎನಿಸಿಕೊಂಡ ಈ ಮಾವನ್ನು ಇಲ್ಲಿನ ದಂಪತಿಯೊಬ್ಬರು ಬೆಳೆದಿದ್ದು, ಆ ಮಾವಿನ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನೂ ನೇಮಿಸಿದ್ದಾರಂತೆ.

Recommended Video

Miyazaki: World's costliest mango, sold at ₹2.70 lakh per Kg| Ruby-coloured mango | Oneindia Kannada

ಅಂದ ಹಾಗೆ ಈ ಮಾವಿನ ತಳಿ ಹೆಸರು ಮಿಯಾಝಾಕಿ. ಹೆಸರೇ ಸೂಚಿಸಿದಂತೆ ಜಪಾನ್‌ನ ಮಿಯಾಝಾಕಿ ಇದರ ಮೂಲ. ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಕರೆಸಿಕೊಂಡಿರುವ ಈ ತಳಿಯ ಒಂದು ಮಾವು 350 ಗ್ರಾಂವರೆಗೂ ಬೆಳೆಯಬಲ್ಲದು. ಇದಕ್ಕೆ "ಸೂರ್ಯನ ಮೊಟ್ಟೆ" ಎಂದೂ ಕರೆಯುತ್ತಾರೆ. ಈ ಮಾವನ್ನು ಈಗ ಎಲ್ಲಿ ಬೆಳೆಯಲಾಗಿದೆ? ಈ ಮಾವಿನ ವಿಶೇಷವೇನು? ಮುಂದೆ ಓದಿ...

 ವಿಶೇಷ ಬಣ್ಣದಿಂದ ಸೆಳೆಯುವ ಹಣ್ಣು

ವಿಶೇಷ ಬಣ್ಣದಿಂದ ಸೆಳೆಯುವ ಹಣ್ಣು

ತನ್ನ ಭಿನ್ನ ನೋಟ ಹಾಗೂ ವಿಶಿಷ್ಟ ಬಣ್ಣದಿಂದ ಬೇರೆ ಮಾವಿಗಿಂತ ಈ ಮಾವು ಆಕರ್ಷಿತವಾಗಿ ಕಾಣುತ್ತದೆ. ನೇರಳೆ ಬಣ್ಣದ ಈ ಹಣ್ಣನ್ನು ಜಪಾನ್‌ನ ಕ್ಯೂಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ಜಪಾನ್‌ನಲ್ಲಿ ಇದು ಸ್ಥಳೀಯ ಹಣ್ಣಿನ ತಳಿಯಾಗಿದ್ದು, ಏಪ್ರಿಲ್‌ನಿಂದ ಆಗಸ್ಟ್‌ನಲ್ಲಿ ಈ ಮಾವನ್ನು ಬೆಳೆಯಲಾಗುತ್ತದೆ.

 ವಿಶ್ವದ ಅತಿ ದುಬಾರಿ ಮಾವಿನ ತಳಿ

ವಿಶ್ವದ ಅತಿ ದುಬಾರಿ ಮಾವಿನ ತಳಿ

ಅತಿ ಹೆಚ್ಚಿನ ಬೆಲೆಗೆ ಈ ಮಾವನ್ನು ಮಾರಾಟ ಮಾಡಲಾಗುತ್ತದೆ. ಹೀಗಾಗೇ ಇದನ್ನು ವಿಶ್ವದಲ್ಲೇ ಅತಿ ದುಬಾರಿ ಮಾವಿನ ತಳಿ ಎಂದು ಕರೆಯಲಾಗಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 2.70 ಲಕ್ಷ ರೂಗೆ ಮಾರಾಟವಾಗಿತ್ತು ಎಂದು ಜಪಾನ್ ಮಾಧ್ಯಮ ವರದಿ ಮಾಡಿದೆ. ಆದರೆ ಹಣ್ಣಿಗೆ ಏಕಿಷ್ಟು ದುಬಾರಿ ಬೆಲೆ ಎಂಬುದರ ಕುರಿತು ಸೂಕ್ತ ಉಲ್ಲೇಖಗಳಿಲ್ಲ. ಉತ್ಪಾದನೆ ಕಡಿಮೆ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಹಳದಿ ಪೆಲಿಕಾನ್ ಮಾವಿಗಿಂತ ಇದು ಭಿನ್ನವಾಗಿದ್ದು, ಆಗ್ನೇಯ ಏಷ್ಯಾ ದೇಶಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಮಿಯಾಝಾಕಿಯಲ್ಲಿ ಬೆಳೆದ ಈ ಹಣ್ಣನ್ನು ಜಪಾನ್‌ನೆಲ್ಲೆಡೆ ಸರಬರಾಜು ಮಾಡಲಾಗುತ್ತದೆ.

 ಮಧ್ಯಪ್ರದೇಶದಲ್ಲಿ ಈ ದುಬಾರಿ ಹಣ್ಣು

ಮಧ್ಯಪ್ರದೇಶದಲ್ಲಿ ಈ ದುಬಾರಿ ಹಣ್ಣು

ಮಧ್ಯಪ್ರದೇಶದ ಭೋಪಾಲ್‌ನ ದಂಪತಿಯೊಬ್ಬರು ಈ ಅಪರೂಪದ ಹಣ್ಣನ್ನು ಬೆಳೆದಿದ್ದಾರೆ. ಸಂಕಲ್ಪ ಹಾಗೂ ರಾಣಿ ಪರಿಹಾರ್ ದಂಪತಿ ತಮ್ಮ ತೋಟದಲ್ಲಿ ಎರಡು ವರ್ಷಗಳ ಹಿಂದೆ ಈ ಸಸಿಗಳನ್ನು ನೆಟ್ಟಿದ್ದರು. ಅದೀಗ ಫಲ ಕೊಡುತ್ತಿವೆ. ಆದರೆ ಈ ದುಬಾರಿ ಮಾವಿಗೆ ಕಳ್ಳರ ಕಾಟ ಶುರುವಾಗಿದೆ. ಹೀಗಾಗಿ ಮಾವಿನ ರಕ್ಷಣೆಗೆ ಭದ್ರತಾ ಸಿಬ್ಬಂದಿ ಹಾಗೂ ನಾಲ್ಕು ನಾಯಿಗಳನ್ನು ನೇಮಿಸಿದ್ದಾರೆ. ರೈಲಿನಲ್ಲಿ ಒಮ್ಮೆ ಪಯಣಿಸುವಾಗ ವ್ಯಕ್ತಿಯೊಬ್ಬರು ಈ ಮಾವಿನ ಗಿಡ ಕೊಟ್ಟರು ಎಂದು ದಂಪತಿ ಹೇಳಿದ್ದಾರೆ.
ಮೊದಲು ಈ ಹಣ್ಣಿನ ವಿಶೇಷತೆ ಕುರಿತು ದಂಪತಿಗೆ ತಿಳಿದಿರಲಿಲ್ಲ. ಈ ತಳಿಗೆ ತಾವೇ ದಿಮಿನಿ ಎಂದು ಹೆಸರಿಟ್ಟಿದ್ದರು. ಆದರೆ ಈ ಅಪರೂಪದ ಮಾವಿನ ತಳಿ ಬಗ್ಗೆ ನಂತರ ತಿಳಿದುಬಂದಿದೆ.

 ಮಾವಿನ ಹಣ್ಣಿನಲ್ಲಿನ ಆರೋಗ್ಯಕರ ಅಂಶಗಳು

ಮಾವಿನ ಹಣ್ಣಿನಲ್ಲಿನ ಆರೋಗ್ಯಕರ ಅಂಶಗಳು

ಆ್ಂಟಿಆಕ್ಸಿಡಂಟ್‌ಗಳು ಈ ತಳಿಯ ಮಾವಿನಲ್ಲಿ ಅತಿ ಹೆಚ್ಚಾಗಿದೆ. ಬೆಟಾ ಕೆರೋಟಿನ್, ಫೋಲಿಕ್ ಆಸಿಡ್ ಹೆಚ್ಚಿದ್ದು, ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ. ದೃಷ್ಟಿ ಮಂದವಾಗುತ್ತಿರುವವರಿಗೂ ಇದು ಸಹಾಯಕ್ಕೆ ಬರುತ್ತದೆ.

70-80ರ ದಶಕದಲ್ಲಿ ಈ ಮಿಯಾಝಾಕಿ ಹಣ್ಣನ್ನು ಜಪಾನ್‌ನಲ್ಲಿ ಸ್ಥಳೀಯವಾಗಿ ಬೆಳೆಯಲು ಆರಂಭಿಸಲಾಯಿತು. ಬೆಚ್ಚನೆಯ ವಾತಾವರಣ, ಸೂರ್ಯನ ಬೆಳಕು, ಆಗಾಗ್ಗೆ ಬೀಳುವ ಮಳೆ ಈ ಮಾವಿಗೆ ಪೂರಕ ವಾತಾವರಣ ಸೃಷ್ಟಿಸಿತ್ತು. ಇದೀಗ ಹೆಚ್ಚಿನ ಮಟ್ಟದಲ್ಲಿ ಈ ಮಾವನ್ನು ಬೆಳೆಯಲಾಗುತ್ತಿದೆ.

English summary
Madhya pradesh couple grown Miyazaki Mango which is primarily grown in japan. Here is all you need to know about the world's most costliest mango variety in kannada,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X