ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆ ಮತ್ತು ಕರ್ನಾಟಕದ ಹೆಜ್ಜೆ

By ಡಾ. ಅಶ್ವಥ್ ನಾರಾಯಣ್, ಸಚಿವರು ಐಟಿ-ಬಿಟಿ
|
Google Oneindia Kannada News

ಭಾರತವು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶವನ್ನಾವರಿಸಿರುವ ಕೃಷಿ ಪ್ರಧಾನ ದೇಶ. ಬಹುತೇಕ ಜನರು ಇಂದಿಗೂ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ, ಹವಾಮಾನ ವೈಪರಿತ್ಯ, ಮಣ್ಣಿನ ಗುಣಮಟ್ಟ, ಪೋಷಕಾಂಶದಲ್ಲಿನ ವ್ಯತ್ಯಯ, ಅಕಾಲಿಕ ಮಳೆ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅನೇಕ ಕಾರಣಗಳಿಂದ ನಮ್ಮ ಕೃಷಿಕರ ಬದುಕು ಒಂದು ರೀತಿಯಲ್ಲಿ ಹಗ್ಗದ ಮೇಲಿನ ನಡಿಗೆಯಾಗಿದೆ. ದೇಶದ ಆರ್ಥಿಕತೆಯ ದೃಷ್ಟಿಯಿಂದ ಯೋಚಿಸುವುದಾದರೆ, ಶೇಕಡಾ 50ಕ್ಕಿಂತ ಹಚ್ಚು ಜನರು ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರದಿಂದ ನಮ್ಮ ಜಿಡಿಪಿಗೆ ಶೇಕಡಾ 15-20ರಷ್ಟು ಕೊಡುಗೆ ಮಾತ್ರ. ಆದರೆ, ಕೋವಿಡ್ ಬಂದಮೇಲೆ ಪರಿಸ್ಥಿತಿ ಕೊಂಚ ಬದಲಾಗಿದೆ. ಹಲವರು ನಗರಗಳನ್ನು ತೊರೆದು ಹಳ್ಳಿಗಳತ್ತ ನೆಲೆಸಿ, ಕೃಷಿ ಕ್ಷೇತ್ರದತ್ತ ವಾಲುತ್ತಿದ್ದಾರೆ.

ಹಾಗೆಯೇ, ಈ ಕೇತ್ರಕ್ಕೆ ಒಗ್ಗಿಕೊಳ್ಳಲು ಅನುಭವದ ಕೊರತೆ, ಆಧುನಿಕ ತಂತ್ರಜ್ಞಾನದ ಕೊರತೆ ಸಹಿತ ಹಲವಾರು ಅಡೆತಡೆಗಳನ್ನೂ ಎದುರಿಸುತ್ತಿದ್ದಾರೆ. ಬಹಿತೇಕ ಜನರು ತಂತ್ರಜ್ಞಾನ ಕ್ಷೇತ್ರದಿಂದ ಕೃಷಿ ವಲಯದತ್ತ ಆಕರ್ಷಿತರಾಗುತ್ತಿದ್ದಾರೆ.ಇದರಿಂದ ಒಂದು ಸಂತೋಷದ ವಿಷಯವೆಂದರೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಹೊಸ ಹೊಸ ಪ್ರಯೋಗಗಳು ನಡೆಯಲಾರಂಭಿಸಿವೆ.

ಈ ಬೆಳವಣಿಗೆ ಆರ್ಥಿಕತೆಯ ದೃಷ್ಟಿಯಿಂದ ಆಶಾದಾಯಕವಾಗಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕಲಿತ ಪಾಠ ಹಾಗೂ ನಡೆಸಿದ ಪ್ರಯೋಗಗಳು ಎಲ್ಲಾ ರೀತಿಯಿಂದಲೂ ಕೃಷಿ ವಲಯದ ಭವಿಷ್ಯಕ್ಕೆ ಇನ್ನಷ್ಟು ಶಕ್ತಿ ನೀಡುತ್ತದೆ ಎಂಬ ನಂಬಿಕೆ ಉಂಟಾಗಿದೆ. ಈ ದಿಶೆಯಲ್ಲಿ ಹೆಜ್ಜೆ ಇಡುತ್ತಿರುವವರನ್ನು ಕೈ ಹಿಡಿದು ನಡೆಸಲು ನಮ್ಮ ಕೇಂದ್ರ ಹಾಗೂ ಸರ್ಕಾರಗಳು ಹತ್ತು-ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.

ಕೃಷಿ ಮತ್ತು ಕೃಷಿ ತಂತ್ರಜ್ಞಾನ

ಕೃಷಿ ಮತ್ತು ಕೃಷಿ ತಂತ್ರಜ್ಞಾನ

ಇತ್ತೀ ಚಿನ ವರ್ಷಗಳವರೆಗೆ ಕೃಷಿಯೇ ಬೇರೆ, ತಂತ್ರಜ್ಞಾನವೇ ಬೇರೆ ಎಂಬ ತಪ್ಪು ಗ್ರಹಿಕೆ ಇತ್ತು. ಕೈಗಾರಿಕೆಗಳು, ಯಂತ್ರೋ ಪಕರಣಗಳು, ಸೆಮಿಕಂಡಕ್ಟರ್ ವಲಯ, ಇಂತಹ ಕ್ಷೇತ್ರಗಳನ್ನು ಮಾತ್ರ ತಂತ್ರಜ್ಞಾನ ವಲಯಕ್ಕೆ ಸೇರಿಸಿ ಕೃಷಿ ವಲಯವನ್ನು ದೂರವಿಡಲಾಗಿತ್ತು. ಆದರೆ ಕೃಷಿ ಮತ್ತು ಕೃಷಿ ತಂತ್ರಜ್ಞಾನದತ್ತ ಯುವಜನತೆಯನ್ನು ಸೆಳೆಯಲು ಒತ್ತುಕೊಡಲಾಗುತ್ತಿದ್ದು, ಈ ದಿಶೆಯಲ್ಲಿ ರೈತ ಉತ್ಪಾದಕ ಕೇಂದ್ರಗಳನ್ನು ಕೃಷಿ ತಂತ್ರಜ್ಞಾನ ಕಂಪನಿಗಳ ಜತೆ ಬೆಸೆಯುವ ಮೂಲಕ ಈ ವಲಯದ ಬೇಡಿಕೆಯನ್ನು ಹೆಚ್ಚಿಸುವ ಜತೆ ಯುವಜನತೆಗೆ ಪೂರಕ ತರಬೇತಿಯನ್ನು ನೀಡಲು ಕೃಷಿ ತರಬೇತಿ ಯೋಜನೆಗೆ ಶಿಫಾರಸು ಮಾಡಲಾಗಿದೆ. ದೇಶದಲ್ಲೀಗ ಕೃಷಿ ತಾಂತ್ರಿಕ ನವೋದ್ಯಮ ಹೆಚ್ಚಾಗುತ್ತಿದೆ.

70ಕ್ಕೂ ಅಧಿಕ ಸ್ಟಾರ್ಟಪ್‌ಗಳು ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವಲ್ಲಿ ತೊಡಗಿಸಿಕೊಂಡಿವೆ. ಇದರಿಂದಾಗಿ ರೈತರ ಆದಾಯ ಒಂದುವರೆಯಿಂದ ಎರಡುಪಟ್ಟು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸ್ಟಾರ್ಟಪ್‌ಗಳಿಗೆ ಹಾಗೂ ತಾಂತ್ರಿಕ ಉದ್ಯಮಶೀಲರಿಗೆ ಕೃಷಿ ಹಾಗೂ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಜತೆ ಕೃಷಿ/ಆಹಾರ ತಾಂತ್ರಿಕ ಕಂಪನಿಗಳು ಹಾಗೂ ಕೃಷಿ ಉತ್ಪಾದಕ ಸಂಸ್ಥೆಗಳ ನಡುವೆ ನೇರ ಮಾರುಕಟ್ಟೆ ವ್ವವಸ್ಥೆ ಕಲ್ಪಿಸಲು ಒತ್ತುಕೊಡಲಾಗುತ್ತಿದೆ.

ಕೃಷಿಕಲ್ಪದ ಮೂಲಕ ರೈತರ ಬೆಳೆಗೆ ತಕ್ಕ ಬೆಲೆ

ಕೃಷಿಕಲ್ಪದ ಮೂಲಕ ರೈತರ ಬೆಳೆಗೆ ತಕ್ಕ ಬೆಲೆ

ನೇರ ಮಾರುಕಟ್ಟೆ ವ್ಯವಸ್ಥೆ ಅಗತ್ಯ ಸೌಕರ್ಯ ಕಲ್ಪಿಸುವಲ್ಲಿ 'ಕೃಷಿಕಲ್ಪ'ದಂತಹ ಸಾಮಾಜಿಕ ಉದ್ಯಮ ಮಹತ್ತರ ಪಾತ್ರ ವಹಿಸುತ್ತಿದೆ. ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಸೌಕರ್ಯ ಕಲ್ಪಿಸಲಾಗುತ್ತಿದ್ದು ಕೆಲವೆಡೆ ಬೆಳೆಗಾರರು ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನೂ ಪಡೆಯುತ್ತಿದ್ದಾರೆ. ಈವರೆಗೆ 7 ಕೋಟಿಗೂ ಅಧಿಕ ಮೌಲ್ಯದ ಮಾರುಕಟ್ಟೆ ಒದಗಿಸಲಾಗಿದ್ದು ರೈತರಿಗೆ 1 ಕೋಟಿಗೂ ಹೆಚ್ಚಿನ ಆದಾಯ ಬಂದಿರುವ ಜತೆ ಕೃಷಿ ಉತ್ಪಾದಕ ಸಂಸ್ಥೆಗಳಿಗೆ 80 ಲಕ್ಷಕ್ಕೂ ಹೆಚ್ಚಿನ ಲಾಭವಾಗಿದೆ. ಕೃಷಿಕಲ್ಪ ಸಂಸ್ಥೆಯ ಸಹಯೋಗದಲ್ಲಿ ರಾಮನಗರದ ಚನ್ನಪಟ್ಟಣದ ಹೊಸಹಳ್ಳಿ ಗ್ರಾಮದಲ್ಲಿರುವ ರೈತರ ಉತ್ಪಾದಕ ಸಂಸ್ಥೆ ಮೂಲಕ ನೇರವಾಗಿ ರೈತರಿಂದಲೇ ಖರೀದಿಸಿದ ತೆಂಗಿನಕಾಯಿಗಳನ್ನು ಸಂಸ್ಕರಿಸಿ, ಅವುಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ

ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ

ಈ ಭಾಗದ ಜನರು ಹಲವು ವರ್ಷಗಳಿಂದ ತೆಂಗಿನಕಾಯಿ ಬೆಳೆಯುತ್ತಿದ್ದರೂ ತಂತ್ರಜ್ಞಾನದ ಕೊರತೆ ಹಾಗೂ ದಲ್ಲಾಲಿಗಳ ಹಾವಳಿಯಿಂದಾಗಿ ಒಂದು ಕೆ.ಜಿ. ತೆಂಗಿನಕಾಯಿಯನ್ನು ಕೇವಲ 25 ರೂ. ಗೆ ಮಾರುವ ಪರಿಸ್ಥಿತಿ ಇತ್ತು. ಆದರೆ, ಈಗವರು ಒಂದು ಕೆಜಿ ತೆಂಗಿನ ಕಾಯಿಗೆ 35ರೂ.ವರೆಗೆ ಪಡೆಯುತ್ತಿದ್ದಾರೆ. ಖರೀದಿಸಿದ ತೆಂಗಿನ ಕಾಯಿಯನ್ನು ಅತ್ಯುತ್ತಮವಾಗಿ ಸಂಸ್ಕರಿಸಿ ಹೊರ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ. ''ಕೃಷಿ ವಲಯದಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆ ಮಾಡದೇ ಇದ್ದರೆ ಬೆಳೆಗಳ ಮೌಲ್ಯವರ್ಧನೆ ಅಸಾಧ್ಯ ಹಾಗೂ ಭವಿಷ್ಯದಲ್ಲಿ ಆಹಾರದ ಅಗತ್ಯವನ್ನು ನೀಗಿಸುವುದು ಕಷ್ಟವಾಗಬಹುದು''.

ರೈತರನ್ನು ಗಮನದಲ್ಲಿಟ್ಟುಕೊಂಡು ಕೃಷಿ ಪೂರೈಕೆ ಸರಪಳಿಗೆ ಹೊಸ ರೂಪ ನೀಡುವ ಜತೆ ಪ್ರತಿಯೊಬ್ಬ ಕೃಷಿಕನನ್ನೂ ಓರ್ವ ಸಣ್ಣ ಉದ್ಯಮಿಯನ್ನಾಗಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಮುಂದಿನ ತಲೆಮಾರಿನ ರೈತರು ಹೆಚ್ಚಿನ ತಾಂತ್ರಿಕ ಜ್ಞಾನ ಹೊಂದುವ ಜತೆ ಬ್ರಾಡ್‌ ಬ್ರ್ಯಾಂಡ್ ಸಹಿತ ಆಧುನಿಕ ತಂತ್ರಜ್ಞಾನಗಳು ದೇಶದ ಕಟ್ಟ ಕಡೆಯ ಪ್ರದೇಶವನ್ನೂ ತಲುಪಲಿವೆ. ಈ ತಾಂತ್ರಿಕ ಬೆಳವಣಿಗೆಯನ್ನು ಕೃಷಿ ಇಳುವರಿ ಹೆಚ್ಚಿಸಲು,ಉತ್ಪಾದಕತೆ ಅಧಿಕವಾಗಿಸಲು ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಬಳಸಿಕೊಳ್ಳುವ ಅಗತ್ಯವಿದೆ.

ಕೃಷಿ ವಲಯದ ಅಡೆ-ತಡೆಗಳು ಮತ್ತು ಪರ್ಯಾಯ ಮಾರ್ಗಗಳು

ಕೃಷಿ ವಲಯದ ಅಡೆ-ತಡೆಗಳು ಮತ್ತು ಪರ್ಯಾಯ ಮಾರ್ಗಗಳು

ಇತ್ತೀ ಚಿನ ದಿನಗಳಲ್ಲಿ ಕೃಷಿ ಭೂಮಿ ಹಾಗೂ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿರುವುದು, ಪೋಷಕಾಂಶಗಳ ಕೊರತೆ,ಕೃಷಿ ವಲಯದಲ್ಲಿ ಕಡಿಮೆಯಾಗುತ್ತಿರುವ ಅವಕಾಶಗಳು ಯುವ ಪೀಳಿಗೆಗೆ ಕೃಷಿಯ ಬಗ್ಗೆ ಆಸಕ್ತಿಯನ್ನು ವೃದ್ಧಿಸಲು ವಿಫಲವಾಗುತ್ತಿವೆ. ಅದಲ್ಲದೇ, ಶೇಕಡಾ 70ಕ್ಕೂ ಅಧಿಕ ಕೃಷಿ ಮಳೆ ಆಧಾರಿತವಾಗಿದೆ. ಹವಾಮಾನ ವೈಪರಿತ್ಯ ಒಂದು ಕಡೆಯಾದರೆ ಕಟಾವಿಗೂ ಮೊದಲಿನಿಂದ ಕಟಾವಿನ ನಂತರ ದವರೆಗೆ ಶೇಕಡಾ 15-20ರಷ್ಟು ಬೆಳೆ ನಷ್ಟವಾಗುತ್ತಿದೆ. ನೀರಿನ ಮಿತವಾದ ಬಳಕೆ ಮೂಲಕ ಹೆಚ್ಚಿನ ಇಳುವರಿ ಕೊಡುವ ತಳಿಗಳ ಅಭಿವೃದ್ಧಿ ಹಾಗೂ ಬೆಳೆಗಳ ಮೌಲ್ಯವರ್ಧನೆಗೆ ಅಗತ್ಯ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಅಗತ್ಯವಿದೆ. ಈಗ ಕೃಷಿಯಲ್ಲೂ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ ಮಾಡಲಾಗಿದೆ.

ಹೀಗಾಗಿ ಉದ್ಯಮಶೀಲರು ಈ ಡಿಜಿಟಲ್ ತಾಂತ್ರಿಕತೆ ಬಳಸಿಕೊಂಡು ಕೃಷಿ ಪದ್ಧತಿಯಲ್ಲಿ ಸುಧಾರಣೆ ಉಂಟು ಮಾಡುವ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಬಗ್ಗೆ ಆಲೋಚಿಸಬೇಕು. ಕೃಷಿ ವಲಯದ ಹೊಸ ಅನ್ವೇಷಣೆಗಳಿಗೆ ನಮ್ಮ ರಾಜ್ಯ ನೆಲೆಯಾಗಬೇಕೆಂಬುದು ನಮ್ಮ ಸರ್ಕಾರದ ಉದ್ದೇ ಶವಾಗಿದೆ. 'ರಾಜ್ಯ ಕೃಷಿ ವ್ಯವಸ್ಥೆಯಲ್ಲಿ ತುಂಬಿಹೋಗಿದ್ದ ಲೈಸೆನ್ಸ್ ರಾಜ್ ವ್ಯವಸ್ಥೆಯ ನಿರ್ಮೂಲನೆ ಮಾಡಲು ಹಾಗೂ ಕೃಷಿಯಲ್ಲಿ ನವೋದ್ಯಮ, ಆವಿಷ್ಕಾರಗಳಿಗೆ ಒತ್ತು ನೀಡಲು ಸರ್ಕಾರ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ'. ಕೃಷಿ ವಲಯದಲ್ಲಿ ಹಲವು ಅಡೆತಡೆಗಳಿದ್ದರೂ ಅದಕ್ಕೂ ಮೀರಿ ಅವಕಾಶಗಳಿವೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ನಿರಂತರ ಪ್ರಯೋಗ ಹಾಗೂ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಮೂಲಕ ಈ ವಲಯಕ್ಕೆ ಹೊಸ ರೂಪ ನೀಡಲಾಗುತ್ತಿದೆ.

English summary
Higher education and IT BT minister Dr. Ashwathnarayan C. N on How Karnataka using Technology in Agriculture field
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X