ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ

By Staff
|
Google Oneindia Kannada News

Media contribution to agricultural development
ಬೆಂಗಳೂರು, ಫೆ. 17 : ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಕೂಡ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಇಂಟರ್ನೆಟ್ ಸೇರಿದಂತೆ ಮಾಧ್ಯಮಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಅಂತರ್ಜಾಲ ಮಾಧ್ಯಮ ಮತ್ತು ಮೊಬೈಲ್ ತಂತ್ರಜ್ಞಾನ ಕೃಷಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರು ಮೊಬೈಲ್ ಸಹಾಯದಿಂದ ಬೆರಳತುದಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ.

ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಮಾಧ್ಯಮಗಳಿಂದ ಸಿಗುತ್ತಿರುವ ಕೊಡುಗೆ ಕುರಿತು ಚರ್ಚಿಸಲು 'ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ' ವಿಚಾರ ಸಂಕಿರಣವನ್ನು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಜಂಟಿಯಾಗಿ ಏರ್ಪಡಿಸಿವೆ.

ದಿನಾಂಕ : ಫೆಬ್ರವರಿ 20ರಂದು ಶುಕ್ರವಾರ.
ಸ್ಥಳ : ಅಲುಮ್ನಿ ಅಸೋಸಿಯೇಷನ್ ಸಭಾಂಗಣ, ವೆಟರ್ನರಿ ಕಾಲೇಜಿನ ಪಕ್ಕ, ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು.
ಸಮಯ : ಬೆಳಿಗ್ಗೆ 10 ಗಂಟೆಗೆ.

ಕೃಷಿ ಸಚಿವರಾದ ಎಸ್.ಎ. ರವೀಂದ್ರನಾಥ್ ಅವರು ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಐಟಿಬಿಟಿ, ವಾರ್ತಾ, ಅಬಕಾರಿ ಮತ್ತು ಬೆಂಗಳೂರು ಜಲಮಂಡಳಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತರು ಮತ್ತು ಕೃಷಿ ನೀತಿ ವಿಶ್ಲೇಷಕರಾದ ದೇವೇಂದರ್ ಶರ್ಮಾ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಲಿದ್ದಾರೆ. ಬೀದರ್, ರಾಯಚೂರು, ಬಾಗಲಕೋಟೆ, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಹಿರಿಯ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಸಂಕಿಕರಣದಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10ರಿಂದ ಸಾಯಂಕಾಲ 5ರವರೆಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಎರಡು ಪ್ರಮುಖ ಗೋಷ್ಠಿಗಳಲ್ಲಿ ಕೃಷಿ ಅಭಿವೃದ್ಧಿಗೆ ಮಾಧ್ಯಮಗಳ ಕೊಡುಗೆ, ಕೃಷಿಕರ ನಿರೀಕ್ಷೆ, ಕೃಷಿಕರಲ್ಲಿ ಅಂತರ್ಜಾಲದ ಬಳಕೆ ಮುಂತಾದ ವಿಷಯ ಕುರಿತಂತೆ ಅನೇಕ ಗಣ್ಯರು ವಿಚಾರ ಮಂಡಿಸಲಿದ್ದಾರೆ. ಗೋಷ್ಠಿಗಳ ವಿವರ ಕೆಳಗಿನಂತಿವೆ.

ಬೆಳಗಿನ ಗೋಷ್ಠಿ : ಸಮಯ : 11 ಗಂಟೆಗೆ, ಅಧ್ಯಕ್ಷತೆ : ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕ

ಮಾತನಾಡುವವರು
1) ಡಾ.ಆರ್. ದ್ವಾರಕೀನಾಥ್ : ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ - ಒಂದು ಸಿಂಹಾವಲೋಕನ.
2) ಜಿ.ಆರ್. ಗುಂಡಪ್ಪ : ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದ ಅನುಭವಗಳು.
3) ಸಿ.ಯು. ಬೆಳ್ಳಕ್ಕಿ : ಕೃಷಿಕರ ಮುನ್ನಡೆಗೆ ಬಾನುಲಿ ಕೊಡುಗೆ.
4) ನಾಗೇಶ ಹೆಗಡೆ : ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ.
5) ಎ.ಎಸ್. ಚಂದ್ರಮೌಳಿ : ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮಗಳಿಗೆ ಕೃಷಿ ಶ್ರೋತೃಗಳ/ವೀಕ್ಷಕರ ಸ್ಪಂದನ.

ಮಧ್ಯಾಹ್ನದ ಗೋಷ್ಠಿ : ಸಮಯ : 2.30 ಗಂಟೆಗೆ, ಅಧ್ಯಕ್ಷತೆ : ಈಶ್ವರ ದೈತೋಟ, ಪತ್ರಕರ್ತ

ವಿಚಾರ ಮಂಡಿಸುವವರು
1) ಸುನಂದಾ ಜಯರಾಮ್ : ಮಾಧ್ಯಮಗಳಿಂದ ಕೃಷಿಕರ ನಿರೀಕ್ಷೆ.
2) ಟಿ.ಎನ್. ಪ್ರಕಾಶ್ ಕಮ್ಮರಡಿ : ಕೃಷಿ ವಿಸ್ತರಣೆ ಚಟುವಟಿಕೆಗಳು ಮತ್ತು ಮಾಧ್ಯಮ.
3) ಆರ್.ಎನ್. ಶ್ರೀನಿವಾಸ ಗೌಡ : ಮಾಧ್ಯಮಗಳಿಂದ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ನಿರೀಕ್ಷೆ.
4) ಪಿ. ಪ್ರಶಾಂತ್ : ಕೃಷಿಕರಲ್ಲಿ ಅಂತರ್ಜಾಲ ಮತ್ತಿತರ ನೂತನ ಮಾಧ್ಯಮಗಳ ಬಳಕೆಯ ಸಾಧ್ಯತೆಗಳು.
5) ಪಿ.ವಿ. ಸತೀಶ್ : ಕೃಷಿಕರು ಮತ್ತು ಸಮುದಾಯ ಮಾಧ್ಯಮ.
6) ಅನಿತಾ ಪೈಲೂರು : ಕೃಷಿ ಬರಹಗಾರರು ಎದುರಿಸುತ್ತಿರುವ ಸವಾಲುಗಳು.

ಅಲುಮ್ನಿ ಅಸೋಸಿಯೇಷನ್ ನ ಅಧ್ಯಕ್ಷರಾದ ಜಿಕೆ ವೀರೇಶ್ ಮತ್ತು ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ಆರ್ ವಿಶುಕುಮಾರ್ ಅವರು ಸರ್ವರಿಗೂ ಸ್ವಾಗತ ಕೋರಿದ್ದಾರೆ.

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X