ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಹಾಬಾದಿನಲ್ಲಿ ಮೇಧಾ ಪಾಟ್ಕರ್ ಹಾಗೂ ಸಂಗಡಿಗರ ಬಂಧನ

By Vanitha
|
Google Oneindia Kannada News

ಅಲಹಾಬಾದ್ , ಸೆಪ್ಟೆಂಬರ್, 26 : ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಕಬಳಿಸಲು ಹೊರಟ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ದನಿ ಎತ್ತಲು ಮುಂದಾದ ಪರಿಸರವಾದಿ ಮೇಧಾಪಾಟ್ಕರ್ ಹಾಗೂ ಅವರ ಸಹಾಯಕರನ್ನು ಸೆಪ್ಟೆಂಬರ್ 26ರ ಶನಿವಾರದಂದು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ರಾಜಸ್ಥಾನದ ಕಚ್ರಿ ಜಿಲ್ಲೆಯಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸುವ ಯೋಜನೆ ಹಾಕಿಕೊಂಡಿತ್ತು. ಇದನ್ನು ವಿರೋಧಿಸಲು ತೀರ್ಮಾನ ತೆಗೆದುಕೊಂಡ ಮೇಧಾಪಾಟ್ಕರ್ ಹಾಗೂ ಅವರ ಸಂಗಡಿಗರು ಅಲ್ಲಿಗೆ ತೆರಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರು ಬಂಧಕ್ಕೊಳಗಾಗಿದ್ದಾರೆ.[ಜೆಪಿ ನಗರದಲ್ಲಿ ಈವಯ್ಯ ಮಾಡುತ್ತಿರುವುದಾದರೂ ಏನು?]

Medha Patkar arrested along with associates in Allahabad

ಮೇಧಾ ಪಾಟ್ಕರ್ ಹಾಗೂ ಅವರ ಸಹಾಯಕರು ಭೂಕಬಳಿಕೆದಾರರ ನೀತಿಯನ್ನು ವಿರೋಧಿಸಲು ಮೊದಲು ಅಲಹಾಬಾದ್ ವಿಶ್ವವಿದ್ಯಾನಿಲಯದ ಬಳಿ ಸೇರಿ ಮುಕ್ತವಾಗಿ ಮಾತುಕತೆ ನಡೆಸಿದರು. ಬಳಿಕ ಅಲ್ಲಿಂದ 50 ಕಿ.ಮೀ ದೂರದಲ್ಲಿರುವ ಕಚ್ರಿ ಜಿಲ್ಲೆಗೆ ಹೊರಡಲು ಅಣಿಯಾಗಿದ್ದರು.

ಈ ಸಂದರ್ಭದಲ್ಲಿ ಹಲವಾರು ಘೋಷಣೆಗಳನ್ನು ಕೂಗಿ ಶಾಂತಿಗೆ ಭಂಗ ತರಲು ಯತ್ನಿಸಿದರು ಹಾಗೂ ಸೂಕ್ಷ್ಮ ಪ್ರದೇಶ ಪ್ರವೇಶಿಸಲು ಬೇಕಾದ ಪೂರ್ವಾನುಮತಿ ಪಡೆದಿರಲಿಲ್ಲ. ಹಾಗಾಗಿ ಅವರನ್ನು ಬಂಧಿಸಲಾಗಿದ್ದು, 151 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಸೂಪರಿಡೆಂಟ್ ಅಧಿಕಾರಿ ತಿಳಿಸಿದರು.

English summary
Social activist Medha Patkar and some of her associates were arrested here today while they were going to Kachri village of the district, where farmers had held protests and clashed with police against acquisition of their land by the UP government for a power plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X