ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ತಿಂಗಳ ಮಳೆ; ಮಾವು ಕೊಯ್ಲು, ರೈತರು ಅನುಸರಿಸಬೇಕಾದ ಕ್ರಮ

|
Google Oneindia Kannada News

ಬೆಂಗಳೂರು, ಮೇ 08; ಮೇ ತಿಂಗಳ ಪ್ರಾರಂಭದಿಂದ ಮಾವು ಬೆಳೆಯುವ ಅನೇಕ ಪ್ರದೇಶಗಳಲ್ಲಿ ಅಲ್ಲಲ್ಲಿ ಗಾಳಿ, ಆಲಿಕಲ್ಲು ಸಹಿತ ಬಿರುಸು ಮಳೆಯಾಗುತ್ತಿದೆ. ಇದರಿಂದಾಗಿ ಕಟಾವಿಗೆ ಸಿದ್ದವಾಗಿರುವ/ ಬಲಿಯುತ್ತಿರುವ ಮಾವಿನಕಾಯಿಗಳಿಗೆ ಹೆಚ್ಚಿನ ಹಾನಿ ಆಗುತ್ತಿದೆ.

ಹವಾಮಾನ ಬದಲಾವಣೆಯ ಕಾರಣ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಹಣ್ಣಿನ ಊಜಿನೊಣಗಳ ಹಾವಳಿ ಸಹ ಹೆಚ್ಚುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಆಗುವ ನಷ್ಟವನ್ನು ತಪ್ಪಿಸಲು ಮಾವು ಬೆಳೆಗಾರರು ಫಸಲು ರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ.

ಮೈಸೂರಿನಲ್ಲಿ ಮಾವಿನ ಹಣ್ಣಿನ ಮೇಳ; ಯಾವ ಮಾವು ಸಿಗಲಿವೆ?ಮೈಸೂರಿನಲ್ಲಿ ಮಾವಿನ ಹಣ್ಣಿನ ಮೇಳ; ಯಾವ ಮಾವು ಸಿಗಲಿವೆ?

ತೋಟಗಾರಿಕಾ ಇಲಾಖೆ ರೈತರಿಗೆ ಮಾವಿನ ಫಸಲು ಸಂರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದೆ. ಮರದಲ್ಲಿ ಮಾವಿನಕಾಯಿಗಳು ಬಲಿತ್ತಿದ್ದರೆ ಅವುಗಳನ್ನು ತಡಮಾಡದೇ ಶೀಘ್ರವಾಗಿ ಕೊಯ್ಲು ಮಾಡಬೇಕು ಎಂದು ತಿಳಿಸಲಾಗಿದೆ.

ರಾಮನಗರ; ಶೇಕಡಾ 90 ರಷ್ಟು ಮಾವು ಬೆಳೆ ನಾಶ, ಪರಿಹಾರಕ್ಕೆ ರೈತರ ಮೊರೆ ರಾಮನಗರ; ಶೇಕಡಾ 90 ರಷ್ಟು ಮಾವು ಬೆಳೆ ನಾಶ, ಪರಿಹಾರಕ್ಕೆ ರೈತರ ಮೊರೆ

May Month Rain Suggestion To Mango Farmers For Crop Protect

ಹಣ್ಣಿನ ಊಜಿನೊಣಗಳನ್ನು ಹತೋಟಿಯಲ್ಲಿಡಲು ಎಕರೆಗೆ ಕನಿಷ್ಠ8-10 ಮೋಹಕ ಬಲೆಗಳನ್ನು ಕಟ್ಟಬೇಕು. ಮರಗಳಿಗೆ Deltamethrin ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ 1.0 ಮಿ.ಲಿ. ಪ್ರಮಾಣದಲ್ಲಿ ಬೆರಸಿ ಸಿಂಪಡಿಸಬೇಕು. 10 ದಿನಗಳ ನಂತರ (ಕೊಯ್ಲು ಮುಂಚಿತವಾಗಿ ಕನಿಷ್ಠ 10-15 ದಿನಗಳ ಮೊದಲು) ಈ ಕ್ರಮವನ್ನು ಮತ್ತೆ ಪುನರಾವರ್ತಿಸಬೇಕು.

ಬೆಂಗಳೂರಿನಲ್ಲಿ ಮೇ 9ರವರೆಗೆ ಮಳೆ: ಎಲ್ಲೆಲ್ಲಿ ವರುಣ ತಂಪೆರೆಯಲಿದ್ದಾನೆ ತಿಳಿಯಿರಿ ಬೆಂಗಳೂರಿನಲ್ಲಿ ಮೇ 9ರವರೆಗೆ ಮಳೆ: ಎಲ್ಲೆಲ್ಲಿ ವರುಣ ತಂಪೆರೆಯಲಿದ್ದಾನೆ ತಿಳಿಯಿರಿ

ತೋಟದಲ್ಲಿ ಈಗಾಗಲೇ ಹಣ್ಣಿನ ಊಜಿನೊಣಗಳ ಹಾವಳಿಗೆ ತುತ್ತಾಗಿ ನೆಲಕ್ಕೆ ಬಿದ್ದಿರುವ ಹಣ್ಣುಗಳನ್ನು ತಡಮಾಡದೇ ಸಂಗ್ರಹಿಸಿ ಅವುಗಳನ್ನು 1 ಅಡಿ ಆಳದ ಗುಣಿ ತೋಡಿ ಹೂತು ಹಾಕಿ ಮಣ್ಣು ಮುಚ್ಚುವುದು. ಇದರಿಂದ ಆ ಹಣ್ಣುಗಳ ಒಳಗೆ ಬೆಳೆಯುತ್ತಿರುವ ಊಜಿನೊಣದ ಕೋಶಗಳನ್ನು ನಾಶಪಡಿಸಲು ಸಾಧ್ಯವಾಗಲಿದೆ.

ಬಲಿತ ಮಾವಿನ ಕಾಯಿಗಳನ್ನು ಕಟಾವು ಮಾಡುವಾಗ ರೈತರು ನಿರ್ವಹಿಸಬೇಕಾದ ಅಗತ್ಯ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಕೈಗೆ ನಿಲುಕುವ ಕಾಯಿಗಳನ್ನು ತೊಟ್ಟು ಸಮೇತ ಕೊಯ್ಲು ಮಾಡಿ ನಂತರ 2 ಸೆ. ಮೀ. ತೊಟ್ಟನ್ನು ಉಳಿಸಿಕೊಳ್ಳುವುದು. ಕೈಗೆ ನಿಲುಕದ ಕಾಯಿಗಳನ್ನು ಏಣಿಯ ಸಹಾಯದಿಂದ ಅಥವಾ ದೋಟಿ ಉಪಯೋಗಿಸಿ ಕಾಯಿಗಳನ್ನು ಕೊಯ್ಲು ಮಾಡುವುದು. ಈ ಹಂತದಲ್ಲಿ ಸೊನೆಯು ಕಾಯಿಗಳ ಮೇಲೆ ಅಂಟಿಕೊಂಡಿರುವುದನ್ನು ಬಟ್ಟೆಯ ಸಹಾಯದಿಂದ ಒರಸಿ ಸ್ವಚ್ಛಗೊಳಿಸುವುದು.

May Month Rain Suggestion To Mango Farmers For Crop Protect

ಯಾವುದೇ ಸನ್ನಿವೇಶದಲ್ಲಿ ಕಾಯಿಗಳನ್ನು ಪ್ರಖರ ಬಿಸಿಲಿನಲ್ಲಿ ಕೊಯ್ಲು ಮಾಡಬಾರದು. ಬಿಸಿಲಿನ ಪ್ರಖರತೆ ಕಡಿಮೆ ಇರುವ ಮುಂಜಾವು ಮತ್ತು ಸಾಯಂಕಾಲದಲ್ಲಿ ಮಾತ್ರ ಕಾಯಿಗಳನ್ನು ಕೊಯ್ಲು ಮಾಡುವುದು. ಕೊಯ್ಲು ಮಾಡಿದ ಕಾಯಿಗಳನ್ನು ಯಾವುದೇ ಕಾರಣಕ್ಕೂ ಬಿಸಿಲಿಗೆ ಒಡ್ಡಬಾರದು.

ಈ ರೀತಿ ಕೊಯ್ಲು ಮಾಡಿದ ಕಾಯಿಗಳು ಬಿಸಿಲಿನಲ್ಲಿ ಇಡಲ್ಪಟ್ಟರೆ ಅವುಗಳಿಂದ ಹಣ್ಣುಗಳಲ್ಲಿ ಗರ್ಭ ಉಂಟಾಗುವ ಅಪಾಯವಿರುತ್ತದೆ. ಆದ್ದರಿಂದ ಕೊಯ್ಲು ಮಾಡಿದ ಕಾಯಿಗಳನ್ನು ತಕ್ಷಣವೇ ನೆರಳಿನಲ್ಲಿ ಇಡುವುದು ಸೂಕ್ತ.

ಕೊಯ್ಲು ಮಾಡಿದ ಕಾಯಿಗಳನ್ನು ನೆಲ-ಮಣ್ಣಿನ ಮೇಲೆ ಇಡುವುದು ತಪ್ಪು ಕ್ರಮ. ಕೊಯ್ಲು ಮಾಡಿದ ಕಾಯಿಗಳನ್ನು ನೇರವಾಗಿ ಕ್ರೇಟಗಳಿಗೆ ತುಂಬುವುದು ಸರಿಯಾದ ಕ್ರಮವಾಗಿದೆ.

English summary
May month rain damaging the Mango crop. Horticulture department suggestion to farmers for protect mango trees and crop in the time of harvest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X