ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಏ.21ರಂದು ಬೃಹತ್ ಪ್ರತಿಭಟನೆ

|
Google Oneindia Kannada News

ಬೆಳಗಾವಿ, ಏಪ್ರಿಲ್ 8: ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಯಾಗಿ, ವಿಧಾನಮಂಡಲದಲ್ಲಿ ಅಂಗೀಕಾರ ಪಡೆದಿದ್ದು, ಇವುಗಳನ್ನು ವಾಪಾಸ್ ಪಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಟ್ಟುಹಿಡಿದಿದ್ದಾರೆ.

ಬೆಳಗಾವಿಯ ಸಾಹಿತ್ಯ ಭವನದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಏಪ್ರಿಲ್ 21ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ನಡೆಯಲಿದೆ ಎಂದರು.

ಬೊಮ್ಮಾಯಿ ಬಜೆಟ್‌ನಲ್ಲಿ ದೂರದೃಷ್ಟಿಯಿಲ್ಲ ಎಂದಿದ್ದೇಕೆ ರಾಜ್ಯ ರೈತ ಸಂಘ? ಬೊಮ್ಮಾಯಿ ಬಜೆಟ್‌ನಲ್ಲಿ ದೂರದೃಷ್ಟಿಯಿಲ್ಲ ಎಂದಿದ್ದೇಕೆ ರಾಜ್ಯ ರೈತ ಸಂಘ?

ರೈತರ ಬೃಹತ್ ಸಮಾವೇಶದ ಪ್ರಮುಖ ಉದ್ದೇಶವೆಂದರೆ, ಭಾರತ ಸರ್ಕಾರ ತಂದಿದ್ದ ಕೃಷಿ ಕಾಯ್ದೆಗಳನ್ನು ಶಾಸನ ಬದ್ಧವಾಗಿ ವಾಪಸ್ ಪಡೆದಾಯಿತು. ಕರ್ನಾಟಕದಲ್ಲಿ ಆ ಕಾಯ್ದೆಗಳನ್ನು ತಳಮಟ್ಟದಲ್ಲಿ ಸುಧಾರಣೆ ಮಾಡಲು ಭೂ ಸುಧಾರಣಾ ಕಾಯ್ದೆ, ಕೃಷಿ ಮಾರುಕಟ್ಟೆ, ಜಾನುವಾರು ಹತ್ಯೆ ಕಾಯ್ದೆ, ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಾಗಿದೆ.

Massive Farmers Protest For Demanding Withdrawal of Agricultural Act In Karnataka On April 21

ಇದನ್ನು ವಾಪಸ್ ಪಡೆಯಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಕುರಿತು ಸರ್ಕಾರದಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಕೃಷಿ ಕಾಯ್ದೆಯನ್ನು ಆದಷ್ಟು ಬೇಗನೆ ವಾಪಸ್ ಪಡೆಯದಿದ್ದರೆ ಸಮಾವೇಶದಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

Massive Farmers Protest For Demanding Withdrawal of Agricultural Act In Karnataka On April 21

ಅಧಿವೇಶನ ಸಂದರ್ಭದಲ್ಲಿ ಇಡೀ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಕೃಷಿ ಮಾರುಕಟ್ಟೆಯ ಕಾಯ್ದೆಯ ತಿದ್ದುಪಡಿ ಅಪಾಯ ಯಾವ ರೀತಿ ಆಗುತ್ತದೆ ಎಂಬ ವಿಷಯ ಈಗಾಗಲೇ ತಿಳಿಸಲಾಗಿದೆ ಎಂದರು.

Recommended Video

Virat Kohli ರೀತಿಯಲ್ಲೇ ಸಂಭ್ರಮಿಸಿದ Ayush Badoni | Oneindia Kannada

ಕೃಷಿ ಮಾರುಕಟ್ಟೆಯು ಸುಮಾರು 90ರಷ್ಟು ಕಳೆದುಹೋಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳಲಾಗಿದೆ. ಆದರೂ ಕೂಡ ಸರ್ಕಾರದ ಚಟುವಟಿಕೆಗಳು ಇದರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದು, ನಾಗರಿಕರಾದ ನಾವು ಹೇಗೆ ಸುಮ್ಮನೆ ಇರಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾರೆ.

ಭ್ರಷ್ಟಾಚಾರವನ್ನು ಅಧಿಕೃತವಾಗಿ ಒಪ್ಪಿಕೊಳ್ಳುವ ಪಕ್ಷಗಳು; ಕೋಡಿಹಳ್ಳಿ ಚಂದ್ರಶೇಖರ್
ಬಹು ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಶಾಸನ ಬದ್ಧವಾಗಿ ಹಿಂಪಡೆದ ನಂತರವೂ ನೈತಿಕ ಹೊಣೆಯಿಂದ ಕರ್ನಾಟಕ ರಾಜ್ಯ ಸರ್ಕಾರವೂ ಕೂಡಾ ಈ ಕಾಯಿದೆಗಳನ್ನು ಹಿಂಪಡೆಯಬೇಕಿತ್ತು, ಆದರೆ ಕುಂಟು ನೆಪಗಳನ್ನು ಹೇಳುತ್ತಾ ವಿಳಂಬ ನೀತಿ ಅನುಸರಿಸುತ್ತಿದೆ.

ಹಿಂಪಡೆಯುವ ಉದ್ದೇಶ ಇದೆಯೋ ಇಲ್ಲವೋ ಎಂಬುದನ್ನೂ ಸ್ಪಷ್ಟಪಡಿಸುತ್ತಿಲ್ಲ. ಅದೇ ರೀತಿ ಕನಿಷ್ಟ ಬೆಂಬಲ ಬೆಲೆಗೆ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಖರೀದಿ ಕೇಂದ್ರಗಳನ್ನು ತೆರೆಯುವುದು ಮತ್ತು ಮುಚ್ಚುವುದು ನಡೆದೇ ಇದೆ. ಇನ್ನು ಬೆಳೆ ವಿಮೆ ವಿಷಯವಾಗಿ ವಿಮಾ ಕಂಪನಿಗಳ ಪರವಾಗಿ ಸರ್ಕಾರ ಬ್ಯಾಟಿಂಗ್ ಮಾಡುವಂತೆ ಕಾಣುತ್ತಿದೆ. ಇದಿಷ್ಟು ಸದ್ಯಕ್ಕೆ ರೈತಕುಲದ ಸವಾಲುಗಳು.

ಇಷ್ಟು ಸಾಲದೆಂಬಂತೆ ರಾಜ್ಯದ ರಾಜಕಾರಣ ಹಾದಿ ತಪ್ಪಿದೆ. ಭ್ರಷ್ಟಾಚಾರ ಮಿತಿಮೀರಿದ್ದು, ಭ್ರಷ್ಟಾಚಾರವನ್ನು ಅಧಿಕೃತವಾಗಿಯೇ ಒಪ್ಪಿಕೊಳ್ಳುವ ಮಟ್ಟಿಗೆ ಸರ್ಕಾರ ತಲುಪಿದೆ. ವಿರೋಧ ಪಕ್ಷಗಳು ನಿಮ್ಮದು 40 ಪರ್ಸೆಂಟ್ ಸರ್ಕಾರ ಎಂದು ಹೇಳಿದರೆ ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬೊಮ್ಮಾಯಿ "ಹೌದು ಭ್ರಷ್ಟಾಚಾರ ಪ್ರಾರಂಭ ಮಾಡಿದವರು ನೀವು, ಮುಂದುವರಿಸುತ್ತಾ ಇರುವವರು ನಾವು," ಎಂದು ಅಸೆಂಬ್ಲಿಯಲ್ಲೇ ಹೇಳುತ್ತಾರೆ.

ಇದಕ್ಕೆ ಇನ್ನೇನು ಸಾಕ್ಷಿ ಬೇಕು. ಹಾಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನಾನು ಕೇಳುವುದಿಷ್ಟೇ, "ನಿಮಗೇನಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಇದೆಯಾ". ರಾಜ್ಯಪಾಲರು ಏನು ಮಾಡುತ್ತಿದ್ದಾರೆ. ನಾಚಿಕೆಗೇಡಿನ ಸಂಗತಿ ಅಲ್ವಾ ಇದು? ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ಇದೇ ತಿಂಗಳ 21ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಪ್ರತಿಭಟನಾ ಸಮಾವೇಶ ಏರ್ಪಡಿಸಲಾಗಿದೆ ಎಂದು ಹೇಳಿದರು.

ಪರ್ಯಾಯ ರಾಜಕಾರಣ
ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಕ್ಕೆ ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ ಎಂದೂ ಅಭಿಪ್ರಾಯಪಟ್ಟ ಕೋಡಿಹಳ್ಳಿ ಚಂದ್ರಶೇಖರ್, ಒಂದು ಕಡೆ ಭ್ರಷ್ಟ ಸರ್ಕಾರ, ಇನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ಭ್ರಷ್ಟಾಚಾರದ ಮಾತೃ ಸಂಸ್ಥೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ರಾಜಕಾರಣಕ್ಕೆ ಪರ್ಯಾಯದ ಅವಶ್ಯಕತೆ ಇದೆ ಎಂದು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಿದೆವು ಎಂದು ಹೇಳಿದರು.

ದುಡ್ಡಿದ್ದರೆ ಎಂಎಲ್ಎ ಆಗಬಹುದು ಅನ್ನುವುದು ತಪ್ಪಬೇಕು ಎಂಬ ಆಶಯ ವ್ಯಕ್ತಪಡಿಸಿದ ಕೋಡಿಹಳ್ಳಿ ಚಂದ್ರಶೇಖರ್, ಪರ್ಯಾಯ ರಾಜಕಾರಣಕ್ಕೆ ಇಂದು ಆಮ್ ಆದ್ಮಿ ದೇಶದಲ್ಲಿರುವ ಒಳ್ಳೆಯ ಮಾಡೆಲ್ ಎಂದೂ ತಿಳಿಸಿದರು.

ಹಾಗಾಗಿ ಏ.21ನೇ ತಾರೀಖು ನಡೆಯುವ ರೈತರ ಬೃಹತ್ ಸಮಾವೇಶಕ್ಕೆ ಆಮ್ ಆದ್ಮಿ ನೇತಾರರಾದ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಹ್ವಾನಿಸಿದ್ದೇವೆ. ಅಂದು ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಶಕೆ ಆರಂಭವಾಗಲಿದೆ ಎಂದು ತಿಳಿಸಿದರು.

ಆಮ್ ಆದ್ಮಿ ಪಕ್ಷದೊಂದಿಗೆ ಸಂಘಟನೆಯನ್ನು ವಿಲೀನ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೋಡಿಹಳ್ಳಿ, ಸಂಘಟನೆಯ ಅಸ್ತಿತ್ವ ಇದ್ದೇ ಇರುತ್ತದೆ ಎಂದು ಹೇಳಿದರು. ಇನ್ನು ಎಲೆಕ್ಷನ್ ಕುರಿತಾಗಿ 21ನೇ ತಾರೀಖಿನಂದು ಪ್ರಕಟ ಮಾಡುವುದಾಗಿ ತಿಳಿಸಿದರು. ಒಟ್ಟಾರೆ ಕರ್ನಾಟಕ ರಾಜ್ಯ ರೈತ ಸಂಘದ ಪರ್ಯಾಯ ರಾಜಕೀಯ ನಡೆ ಏನೆಂಬುದು ಏಪ್ರಿಲ್ 21ರಂದು ಪ್ರಕಟ ಮಾಡುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

English summary
Massive Farmers Protest For Demanding withdrawal of Agricultural Act in Karnataka on April 21 in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X