ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್ ಬಾಗ್ ನಲ್ಲಿ ಮಾವಿನ ತೋರಣ ಆರಂಭ

By Mrutyunjaya Kalmat
|
Google Oneindia Kannada News

Mango Exhibition
ಬೆಂಗಳೂರು, ಮೇ. 29 : ಲಾಲ್ ಬಾಗ್ ಮಲ್ಲಿ ಮಾವು ಮತ್ತು ಹಲಸಿನ ಪ್ರದರ್ಶನ ಮತ್ತು ಮಾರಾಟ ಮೇಳೆ ಇಂದಿನಿಂದ(ಮೇ29) ಆರಂಭವಾಗಿದ್ದು, ಜೂನ್ 7ರ ವರಗೆ ನಡೆಯಲಿದೆ.

ಪ್ರತಿ ವರ್ಷದಂತೆಯೇ ಈ ವರ್ಷವು ಲಾಲ್ ಬಾಗ್ ನಲ್ಲಿ ಮಾವು ಮಾರಾಟ ಮೇಳ ಆಯೋಜಿಸಲಾಗಿದ್ದು, ಮೇಳದಲ್ಲಿ ರಾಜ್ಯದ ಮಾವು ಬೆಳೆಗಾರರು, ತೋಟಗಾರಿಕಾ ಇಲಾಖೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಖಾಸಗಿ ಸಂಸ್ಕರಣಾ ಘಟಕಗಳು ಪಾಲ್ಗೊಳ್ಳಲಿವೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಎನ್ ಜಯರಾಮ್ ತಿಳಿಸಿದ್ದಾರೆ.

ಪ್ರದರ್ಶನದಲ್ಲಿ ಕರ್ನಾಟಕದಲ್ಲಿ ಬೆಳೆಯುವ ಎಲ್ಲಾ ಪ್ರಮುಖ ಮಾವಿನ ಹಣ್ಣುಗಳ ತಳಿಗಲ್ಲದೇ ದೇಶದ ಇತರೆ ಭಾಗಗಳಲ್ಲಿ ಬೆಳೆಯುವ ಮಾವಿನ ಹಣ್ಣುಗಳ ತಳಿಗಳು ಪ್ರದರ್ಶನದಲ್ಲಿ ನೋಡಲು ಲಭ್ಯವಿರುತ್ತದೆ ಎಂದು ಅವರು ವಿವರಿಸಿದರು. ಬೆಳಗಾರರು ಸಹ ಮಧ್ಯವರ್ತಿಗಳ ಕಾಟವಿಲ್ಲದೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಬಹುದು ಎಂದರು.

ಲಾಲ್ ಬಾಗ್ ನ ಗಾಜಿನ ಮನೆಯ ಹಿಂಭಾಗದಲ್ಲಿರುವ 75 ಮಾರಾಟ ಮಳಿಗೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ 200 ಕ್ಕೂ ಹೆಚ್ಚು ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 7ರವರೆಗೆ ಮೇಳ ತೆರೆದಿರುತ್ತದೆ. ಲಾಲ್ ಬಾಗ್ ಪ್ರವೇಶ ಶುಲ್ಕ ಹೊರತುಪಡಿಸಿ ಮೇಳಕ್ಕೆ ವಿಶೇಷ ಶುಲ್ಕವಿಲ್ಲ ಎಂದು ಜಯರಾಮ್ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X