ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್ ಬಾಗ್ ನಲ್ಲಿ ಮತ್ತೆ ಹಣ್ಣಿನ ರಾಜನ ದರ್ಬಾರ್

By Staff
|
Google Oneindia Kannada News

Mango Mela at Lalbagh
ಬೆಂಗಳೂರು, ಮಾ.29: ಕರ್ನಾಟಕ ರಾಜ್ಯದಲ್ಲಿ ಮಾವು ಬೆಳೆಯು ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಪ್ರಸ್ತುತ ವರ್ಷದಲ್ಲಿ ಮಾವಿನ ಇಳುವರಿ ಅಧಿಕವಾಗಿ ಬರುತ್ತಿದ್ದು, ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿದೆ.

ಉತ್ತಮ ತಳಿಯ ಮಾವಿನ ಹಣ್ಣುಗಳನ್ನು ಹಾಗೂ ಮಾವಿನ ಹಣ್ಣಿನಿಂದ ಸಂಸ್ಕರಿಸಿದ ಪದಾರ್ಥಗಳನ್ನು ಪ್ರದರ್ಶಿಸುವುದು, ಅಲ್ಲದೇ, ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳ ಮಾರಾಟದ ವ್ಯವಸ್ಥೆಯನ್ನು ಮಾಡುವುದಕ್ಕಾಗಿ ತೋಟಗಾರಿಕೆ ಇಲಾಖಾ ವತಿಯಿಂದ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ ವನ್ನು ಏಪ್ರಿಲ್ 15 ರಿಂದ ಜೂನ್ 30 ರವರೆಗೆ ಲಾಲ್‌ಬಾಗ್‌ನಲ್ಲಿ ಮಾವಿನ ಹಣ್ಣುಗಳ ಲಭ್ಯತೆಯ ಆಧಾರದ ಮೇಲೆ ಹಮ್ಮಿಕೊಳ್ಳಲಾಗುವುದು.

*ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ ದಲ್ಲಿ ಭಾಗವಹಿಸಲು ಇಚ್ಫಿಸುವ ಮಾವು ಬೆಳೆಗಾರರು/ಮಾವು ಸಂಸ್ಕರಣಾ ಘಟಕಗಳು/ಸರ್ಕಾರಿ/ಅರೆ ಸರ್ಕಾರಿ/ಖಾಸಗೀ ಸಂಸ್ಥೆಗಳು/ಆಸಕ್ತರು ತೋಟಗಾರಿಕಾ ಇಲಾಖೆಯಲ್ಲಿ ನೊಂದಣೆ ಮಾಡಿಸಬೇಕಾಗಿರುತ್ತದೆ.

*ಮಾವು ಪ್ರದರ್ಶನವನ್ನು ದಿನಾಂಕ 30-5-2009 ರಿಂದ 03-06-2009 ರವರೆಗೆ (5 ದಿನಗಳು ಮಾತ್ರ) ಏರ್ಪಡಿಸಲಾಗುತ್ತದೆ. ಮಾವು ಪ್ರದರ್ಶನದಲ್ಲಿ ಭಾಗವಹಿಸುವವರು ಪ್ರದರ್ಶಿಕೆಗಳನ್ನು ದಿನಾಂಕ 30-5-2009 ರಂದು ಮಧ್ಯಾಹ್ನ 12.00 ಗಂಟೆಯೊಳಗೆ ಪ್ರದರ್ಶನ ನಡೆಯುವ ಸ್ಥಳವಾದ ಲಾಲ್‌ಬಾಗ್‌ನ ಗಾಜಿನ ಮನೆಯ ಹತ್ತಿರ ತರಬೇಕು. ಪ್ರದರ್ಶನಕಾರರೇ ಸಾಗಾಣಿಕೆ ವೆಚ್ಚವನ್ನು ಭರಿಸಬೇಕಾಗಿರುತ್ತದೆ.

*ಮಾವಿನ ಹಣ್ಣಿನ ಮಾರಾಟಕ್ಕಾಗಿ ಮಾವು ಬೆಳೆಗಾರರು ಮಾರಾಟ ಮಳಿಗೆಗಳ ನೊಂದಣಿ ಶುಲ್ಕ (ರು. 250.00) ಹಾಗೂ ಠೇವಣೆ ಶುಲ್ಕ (ರು.250.00) ಎರಡೂ ಸೇರಿ ಒಟ್ಟು ರು.500.00ಗಳನ್ನು ಭರಿಸಬೇಕಾಗಿರುತ್ತದೆ.

*ರೈತರು ಮಳಿಗೆಗಾಗಿ ಅರ್ಜಿಗಳನ್ನು ಏಪ್ರಿಲ್ 8 ರೊಳಗಾಗಿ ಆಯಾ ಜಿಲ್ಲೆಗಳ ತೋಟಗಾರಿಕೆ ಉಪ ನಿರ್ದೇಶಕರವರೆ ಶಿಫಾರಸ್ಸಿನ ಮುಖಾಂತರ ತೋಟಗಾರಿಕೆ ಉಪ ನಿರ್ದೇಶಕರು, ತೋಟಗಾರಿಕಾ ಮಾಹಿತಿ ಕೇಂದ್ರ ಲಾಲ್‌ಬಾಗ್, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು ತೋಟಗಾರಿಕೆ ಮಾಹಿತಿ ಕೇಂದ್ರ (ಜಿಲ್ಲಾ ಪಂಚಾಯತ್) ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು/ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿರುತ್ತದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X