ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಿರವಾಗಿದೆ ಮಾವಿನ ಹಂಗಾಮು; ಶ್ರೀನಿವಾಸಪುರದ ಮಾವಿನ ಕಥೆಯೇನು?

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 26: ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಾವು ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ಏಷಿಯಾದಲ್ಲಿ ಅತೀ ದೊಡ್ಡ ಮಾರುಕಟ್ಟೆ ಸಹ ಇದೆ. ಹೀಗಾಗೇ ಇಲ್ಲಿ ಸಾವಿರಾರು ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದೆ.

Recommended Video

ಗುದ್ದಲಿ ಹಿಡಿದು ಉದ್ಯೋಗ ಖಾತ್ರಿ ಕೂಲಿ ಕೆಲಸ ಮಾಡಿದ ಶಾಸಕ ರೇಣುಕಾಚಾರ್ಯ..! | Renukacharya

ಪ್ರತಿ ವರ್ಷ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ನಾಲ್ಕೈದು ಲಕ್ಷ ಟನ್ ನಷ್ಟು ಮಾವಿನ ವಹಿವಾಟು ನಡೆಯುತ್ತದೆ. ಆದರೆ ಕೊರೊನಾ ವೈರಸ್ ಪರಿಣಾಮ ಇಲ್ಲಿನ ಮಾವಿನ ವಹಿವಾಟಿನ ಮೇಲೂ ಆಗಿದೆ. ಕೋಲಾರದಲ್ಲಿ ಈ ವರ್ಷ ಮಾವು ಮಾರುಕಟ್ಟೆಯನ್ನ ರದ್ದುಗೊಳಿಸಬೇಕು ಅನ್ನೋ ಕೂಗು ಕೇಳಿಬಂದಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

 ಮಾವು ಮಾರುಕಟ್ಟೆಗೆ ಕೊರೊನಾ ಭೀತಿ

ಮಾವು ಮಾರುಕಟ್ಟೆಗೆ ಕೊರೊನಾ ಭೀತಿ

ಕೊರೊನಾ ಭೀತಿ ಇಲ್ಲಿನ ಮಾವು ಮಾರುಕಟ್ಟೆಗೂ ಎದುರಾಗಿದೆ. ಮೇ ತಿಂಗಳ ಅಂತ್ಯಕ್ಕೆ ಮಾವು ಮಾರುಕಟ್ಟೆಯ ಸುಗ್ಗಿ ಪ್ರಾರಂಭ ಆಗಿದ್ದರೆ, ಎರಡೂವರೆ ತಿಂಗಳ ಕಾಲ ಮಾವು ಮಾರಾಟ ನಡೆಯುತ್ತದೆ. ಸಾವಿರಾರು ವರ್ತಕರು, ವ್ಯಾಪಾರಿಗಳು ದೇಶದ ನಾನಾ ಭಾಗಗಳಿಂದ ಬಂದು ವಹಿವಾಟು ನಡೆಸುತ್ತಾರೆ. ಪಕ್ಕದ ಆಂಧ್ರ ಹಾಗೂ ತಮಿಳುನಾಡು ರಾಜ್ಯದಿಂದ ಕಾರ್ಮಿಕರು ಬಂದು ಕೊರೊನಾ ವೈರಸ್ ಹರಡುವ ಭೀತಿಯಿಂದ ಎಪಿಎಂಸಿ ಆಡಳಿತ ಮಂಡಳಿ ಸರ್ಕಾರದ ಆದೇಶ, ನಿರ್ಬಂಧನೆಗಳನ್ನು ಪಾಲಿಸಲು ಸಿದ್ಧವಾಗಿದೆ.

ಕೋಲಾರದ ಮಾವು ಬೆಳೆಗಾರ ಸಹಾಯಕ್ಕೆ ಬಂದಿದೆ ಆನ್ ಲೈನ್ ವಹಿವಾಟುಕೋಲಾರದ ಮಾವು ಬೆಳೆಗಾರ ಸಹಾಯಕ್ಕೆ ಬಂದಿದೆ ಆನ್ ಲೈನ್ ವಹಿವಾಟು

 ತೋಟಗಳಿಂದಲೇ ವಿಲೇವಾರಿ ಸೂಕ್ತ

ತೋಟಗಳಿಂದಲೇ ವಿಲೇವಾರಿ ಸೂಕ್ತ

ಕೊರೊನಾದಿಂದಾಗಿ ಉಂಟಾಗಿರುವ ಈ ಪರಿಸ್ಥಿತಿಯನ್ನು ಅರಿತು ಈ ವರ್ಷ ಮಾವು ಮರುಕಟ್ಟೆಯನ್ನು ತೆರೆಯುವುದು ಬೇಡ, ಇದಕ್ಕೆ ಬದಲಾಗಿ ತೋಟಗಳಿಂದಲೇ ವಿಲೇವಾರಿ ಮಾಡುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಎಪಿಎಂಸಿ ಬಂದಿದೆ.

 ಆನ್ ಲೈನ್ ವಹಿವಾಟಿಗೆ ಪ್ರೇರೇಪಣೆ

ಆನ್ ಲೈನ್ ವಹಿವಾಟಿಗೆ ಪ್ರೇರೇಪಣೆ

ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ. ಈ ಮಧ್ಯೆ ರೈತರ ನೆರವಿಗೆ ನಿಂತಿರುವ ಕೋಲಾರ ತೋಟಗಾರಿಕೆ ಇಲಾಖೆ ಆನ್ ಲೈನ್ ವ್ಯಾಪಾರಕ್ಕೆ ರೈತರನ್ನು ಪ್ರೇರೇಪಿಸುತ್ತಿದೆ.

ಮಾರುಕಟ್ಟೆಗೆ ಕೊಪ್ಪಳ ಮಾವು; ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣುಮಾರುಕಟ್ಟೆಗೆ ಕೊಪ್ಪಳ ಮಾವು; ಮನೆ ಬಾಗಿಲಿಗೆ ಬರಲಿದೆ ತಾಜಾ ಹಣ್ಣು

 ಮಾವು ಬೆಳೆಗಾರರ ಸಹಾಯಕ್ಕೆ ಹೊಸ ಆಪ್

ಮಾವು ಬೆಳೆಗಾರರ ಸಹಾಯಕ್ಕೆ ಹೊಸ ಆಪ್

ಹೊಸ ಆಪ್ ನೊಂದಿಗೆ ಮಾವು ಬೆಳೆಗಾರರಿಂದ ನೋಂದಣಿ ಮಾಡಿಸಿ, ಮಾವು ಖರೀದಿದಾರರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತಿದೆ. ರೈತರ ಹೆಸರು, ಯಾವ ಬಗೆಯ ಮಾವು, ಎಷ್ಟು ಪ್ರಮಾಣದಲ್ಲಿದೆ, ಬೆಲೆ ಎಲ್ಲವನ್ನೂ ನಿಗದಿ ಮಾಡಲಾಗುತ್ತದೆ. ಮಾತ್ರವಲ್ಲದೆ ರೈತರೇ ನಗರಗಳಲ್ಲಿ ನೇರವಾಗಿ ಮಾರಾಟ ಮಾಡುವ ಅವಕಾಶದಂಥ ಚಿಂತನೆ ನಡೆಯುತ್ತಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಅನ್ನೋದು ಕಾದು ನೋಡಬೇಕಿದೆ.

English summary
Farmers worried about kolar apmc decision where it is thinking to cancel mango market this year due to coronavirus fear
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X