ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಹಾಪ್ ಕಾಪ್ಸ್ ನಲ್ಲಿ ಮಾವು ಮತ್ತು ಹಲಸು ಮೇಳ

By Mahesh
|
Google Oneindia Kannada News

ಬೆಂಗಳೂರು, ಮೇ 22: ಉದ್ಯಾನನಗರಿ ಬೆಂಗಳೂರಿಗೆ ತಡವಾಗಿಯಾದರೂ ಹಣ್ಣುಗಳ ರಾಜನ ಆಗಮನವಾಗಿದೆ. ಇಂದಿನಿಂದ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ. ಮಾವು ಅಭಿವೃದ್ಧಿ ನಿಗಮ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜನೆಗೊಂಡರುವ ಈ ಮೇಳದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ.

ನಗರ ಒಟ್ಟು 325 ಹಾಪ್ ಕಾಮ್ಸ್‌ ಮಳಿಗೆಗಳಲ್ಲಿ ಮೇಳ ಆಯೋಜಿಸಲಾಗಿದೆ. ಈ ಬಾರಿ ತಡವಾಗಿ ಮಾರುಕಟ್ಟೆಗೆ ಮಾವಿನ ಆಗಮನವಾಗಿದೆ. ಈ ಮೇಳದಲ್ಲಿ ಒಟ್ಟು 10ಕ್ಕೂ ಹೆಚ್ಚು ಬಗೆಯ ಮಾವಿನ ತಳಿ ಸಿಗಲಿವೆ,ಕಳೆದ ಬಾರಿ 635 ಟನ್‌ನಷ್ಟು ವಹಿವಾಟು ನಡೆದಿತ್ತು ಎಂದು ಹಾಪ್ ಕಾಪ್ಸ್ ಅಧ್ಯಕ್ಷ ಚಂದ್ರೇಗೌಡ ಹೇಳಿದರು.

Mango and Jack fruit Mela in Hopcoms

ಐಟಿ ಕಂಪನಿಗಳಿಗೂ ಮಾವಿನ ಘಮ ಹರಡುತ್ತಿದ್ದು, ಇನ್ಫೋಸಿಸ್ ಹಾಗೂ ಯುಬಿ ಸಿಟಿಯ ಮ್ಯಾನೇಜ್ಮೆಂಟ್ ವತಿಯಿಂದ ಸಂಸ್ಥೆಯ ಆವರಣದಲ್ಲಿ ಮಾವು ಮಾರಾಟ ಮಳಿಗೆ ಇಡಲು ಮುಂದಾಗಿವೆ. ಅಪಾರ್ಟ್ಮೆಂಟ್, ಮೊಬೈಲ್ ವ್ಯಾನ್ ಗಳಲ್ಲಿ ಮೌ ಮಾರಾಟಕ್ಕೂ ಹಾಪ್ ಕಾಪ್ಸ್ ಮುಂದಾಗಿದೆ.

ಮೇ 27ಕ್ಕೆ ಮಾವು ಅಭಿವೃದ್ಧಿ ನಿಗಮದಿಂದ 'ಮ್ಯಾಂಗೊ ಪಿಕ್ಕಿಂಗ್ ಟೂರಿಸಂ'ಮೇ 27ಕ್ಕೆ ಮಾವು ಅಭಿವೃದ್ಧಿ ನಿಗಮದಿಂದ 'ಮ್ಯಾಂಗೊ ಪಿಕ್ಕಿಂಗ್ ಟೂರಿಸಂ'

ಲಾಲ್ ಬಾಗ್ ನಲ್ಲಿ ಮೇ 25ರಿಂದ ಜೂನ್ 15ರ ತನಕ ಮಾವು ಮತ್ತು ಹಲಸು ಮೇಳ ನಡೆಯಲಿದೆ. 128ಕ್ಕೂ ಅಧಿಕ ರೈತರು, 250ಕ್ಕೂ ಅಧಿಕ ಟನ್ ಮಾವು ಮಾರಾಟದ ನಿರೀಕ್ಷೆ ಹೊಂದಿದ್ದಾರೆ.

ರಸಪುರಿ, ಕಾಲಾಪಾಡ್, ದಶೇರಿ, ಬಾದಾಮಿ, ಅಮ್ರಪಾಲಿ, ಮಲಗೋವಾ ಸೇರಿ ಅನೇಕ ತಳಿಯ ಹಣ್ಣುಗಳು ಜನರ ಬಾಯಲ್ಲಿ ನೀರೂರಿಸುತ್ತಿವೆ. ಮೊದಲ ದಿನವೇ ಮಾವು ಮತ್ತು ಹಲಸು ಖರೀದಿಸಲು ಜನ ಮುಗಿಬಿದ್ದಿರುವುದು ಕಂಡುಬಂತು.

ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳ

ತಳಿ: ಎಷ್ಟು ದರ (ಪ್ರತಿ ಕೆಜಿ)
ಆಲ್ಫಾನ್ಸ್ : 100 ರೂಪಾಯಿ
ಆಲ್ಫಾನ್ಸ್ ಬಾಕ್ಸ್ : 90
ಅಮ್ರಪಾಲಿ : 75
ಬಾದಾಮಿ : 78
ಬಗನಪಲ್ಲಿ : 62
ದಶೇರಿ - 115
ಕಾಲಾಪಾಡ್ - 95
ಕೇಸರ್: 53
ಮಲಗೋವಾ - 125
ಮಲ್ಲಿಕಾ - 88
ನೀಲಂ: 60
ರಸಪುರಿ - 65
ಸಕ್ಕರೆಗುಟ್ಟಿ - 100
ಸಿಂಧೂರ: 50
ತೋತಾಪುರಿ : 30

English summary
Karnataka Mango Developement Corporation in association with HOPCOMs is organising Mango and Jack fruit Mela in Bengaluru from May 22. The fair will provide fresh and quality fruits at 10% discount rate across more than 325 Hopcoms shops said Hopcoms president Chandre Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X