ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಸಾರಿ, ಶ್ರೀನಿವಾಸಪುರ ಮಾವು ಬಂದಿಲ್ಲರೀ. ..

By Mahesh
|
Google Oneindia Kannada News

 Unseasonal variations in mango crop worries Srinivarpur farmers
ಶ್ರೀನಿವಾಸಪುರ, ಮೇ.12: ರಾಜ್ಯದ ಪ್ರಮುಖ ಮಾವು ತಳಿಗಳನ್ನು ಬೆಳೆಯುವ ಶ್ರೀನಿವಾಸಪುರ ತಾಲೂಕಿನಲ್ಲಿ ಈ ಬಾರಿ ತಾಲೂಕಿನ ಪ್ರಮುಖ ಬೆಳೆಯಾದ ಮಾವು ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಇಳುವರಿ ಇಳಿಕೆಯಾಗಿದ್ದು, ರೈತ ಕಂಗಾಲಾಗಿದ್ದಾನೆ. ಇಲ್ಲಿನ ಸುಮಾರು 27 ಸಾವಿರ ಹೆಕ್ಟೇರ್ ಬೆಳೆಯಲಾಗುವ ಮಾವನ್ನು ರೈತರು ನೀರಿನ ಆಸರೆಯಿಲ್ಲದೆ ಮಳೆ ನೀರನ್ನು ನೆಚ್ಚಿಕೊಂಡು ಬೆಳೆಯುತ್ತಾರೆ. ಕಳೆದ ವರ್ಷ ಮಾವು ಬಂಪರ್ ಬೆಳೆ ಬಂದಿದ್ದು, ಈ ವರ್ಷದ ಇಳುವರಿ ಶೇ.20ರಷ್ಟು ಮಾತ್ರ ಆಗಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.

ಮಾವಿನ ಫಸಲನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತ ಕುಟುಂಬಗಳ ಬದುಕು ಈ ಬಾರಿಯ ಕಡಿಮೆ ಫಸಲಿನಿಂದ ದುಸ್ಥರವಾಗಲಿದೆ. ಮಾವಿನ ಮರಗಳಲ್ಲಿ ಮಾರ್ಚ್ ವೇಳೆಗೆ ಹೂವುಬಿಡಬೇಕಾಗಿದ್ದು, ಬಿಸಿಲಿನ ಕೊರತೆಯಿಂದಾಗಿ ಈ ವರ್ಷ ನಿಧಾನವಾಗಿ ಹೂ ಬಿಟ್ಟಿತು. ನಂತರದ ದಿನಗಳಲ್ಲಿ ಕಂಡುಬಂದ ಬಿಸಿಲಿನ ಝಳಕ್ಕೆ ಪಿಂದಿಕಟ್ಟಿದ ಹೂಗಳು ಉದರತೊಡಗಿದವು. ಸುಮಾರು ಅರ್ಧದಷ್ಟು ಮರಗಳು ಹೂ ಬಿಡದೆ ಚಿಗರು ಬಂದುದರಿಂದ ಮೊದಲೇ ರೈತನಿಗೆ ಕಡಿಮೆ ಫಸಲಿನ ಮುನ್ಸೂಚನೆ ನೀಡಿತ್ತು.

ಉಳಿದ ಅಲ್ಪ ಸ್ವಲ್ಪ ಕಾಯಿಗಳು ಎರೆಡು-ಮೂರು ಬಾರಿ ಬಿದ್ದ ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಮಳೆಗೆ ಸಂಪೂರ್ಣವಾಗಿ ನೆಲ ಕಚ್ಚಿದವು. ಶ್ರೀನಿವಾಸಪುರದ ಮಾವಿನ ಹಣ್ಣು ದೇಶದೆಲ್ಲೆಡೆ ಪ್ರಸಿದ್ಧಿಯಾಗಿದ್ದು ಸೂಕ್ತ ಮಾರುಕಟ್ಟೆಯಿಲ್ಲದೆ ರೈತರು ನಷ್ಟವನ್ನು ಅನುಭಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಇದೆಯಾದರೂ ಅದು ಕೇವಲ ದಲ್ಲಾಳಿಗಳ ಪರವಾಗಿ ಕೆಲಸ ಮಾಡುವ ಸಮಿತಿಯಾಗಿದ್ದು ರೈತರಿಗೆ ಆಸರೆಯಾಗಿ ನಿಲ್ಲುವ ಸಂಸ್ಥೆಯಾಗಿ ಉಳಿದಿಲ್ಲ ಎಂದು ತಾಲೂಕು ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಕೊಳ್ತೂರು ಬಾಲಚಂದ್ರ ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳು ತಾಲೂಕಿನಲ್ಲಿ ಹಣ್ಣು ಸಂಸ್ಕರಣ ಘಟಕ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದ್ದರೂ ಇದುವರೆಗೆ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಗಳು ಪ್ರಗತಿಯಲ್ಲಿಲ್ಲ. ಆದಷ್ಟು ಶೀಘ್ರವಾಗಿ ಘಟಕ ಸ್ಥಾಪನೆಯಾದರೆ ರೈತರಿಗೆ ತುಂಬಾ ಅನುಕೂಲವಾಗಿಲಿದ್ದು, ರೈತರ ಸಂಕಷ್ಟ ಪಾರಾದಂತಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X