ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ಮಧ್ಯದಲ್ಲಿ ಮತ್ತೆ ಮರುಭೂಮಿ ಮಿಡತೆಗಳ ದಾಳಿ; ನಿಯಂತ್ರಣಕ್ಕೆ ಏನೆಲ್ಲಾ ಆಗಿದೆ?

|
Google Oneindia Kannada News

ಈಚೆಗಷ್ಟೆ ಗುಜರಾತ್, ರಾಜಸ್ಥಾನ್, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳೆಗಳ ಮೇಲೆ ದಾಳಿ ಇಟ್ಟು ರೈತರಲ್ಲಿ ಆತಂಕ ಸೃಷ್ಟಿಸಿದ್ದ ಮರುಭೂಮಿ ಮಿಡತೆಗಳು ಮತ್ತೆ ಕಾಣಿಸಿಕೊಳ್ಳಲಿವೆ ಎಂಬ ವರದಿ ಬಂದಿದೆ. ಜುಲೈ ಮೂರನೆಯ ವಾರದಿಂದ ಹಿಡಿದು ಆಗಸ್ಟ್ ಎರಡು ಮತ್ತು ಮೂರನೆಯ ವಾರಗಳವರೆಗೆ ಮರುಭೂಮಿ ಮಿಡತೆಗಳು ಉತ್ತರ ಭಾರತದ ರಾಜ್ಯಗಳನ್ನು ಮತ್ತೆ ಕಾಡಲಿವೆ ಎಂಬ ವರದಿ ಬಹಿರಂಗವಾಗಿದೆ.

ಈಗಾಗಲೇ ಭಾರತ ಮತ್ತು ಪಾಕ್ ಗಡಿಯಲ್ಲಿ ಸಂತಾನಾಭಿವೃದ್ಧಿ ಹೊಂದಿರುವ ಮಿಡತೆಗಳು ಮತ್ತೆ ಬೆಳೆಗಳ ಮೇಲೆ ದಾಳಿ ಮಾಡಲಿರುವುದಾಗಿ ತಿಳಿದುಬಂದಿದೆ.

"CALM BEFORE STORM" ಎಂಬಂತೆ ಮುಂದಿನ ದಿನಗಳಲ್ಲಿ ಮಿಡತೆಗಳ ದಾಳಿ ಭೀಕರವಾಗಲಿದೆ

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ predict ಮಾಡಿರುವಂತೆ ಆಫ್ರಿಕಾದಿಂದ ಕೂಡ ಮಿಡತೆಗಳ ಸಮೂಹ ಉತ್ತರ ಭಾರತಕ್ಕೆ ಬರುತ್ತವೆ. ಅಂದ ಮೇಲೆ ಸ್ಥಳೀಯವಾದ ಮತ್ತು ಆಫ್ರಿಕಾದಿಂದ ಬರುವ ಮಿಡತೆಗಳ ಸಮೂಹಗಳ ದಾಳಿ ಎದುರಿಸಲು ರೈತರು ಮತ್ತು ಸರ್ಕಾರ ತಯಾರಾಗಬೇಕಿದೆ. ಕಳೆದ ಎರಡೂವರೆ ತಿಂಗಳಿಂದ ಭಾರತ ಸರ್ಕಾರ ಮಿಡತೆಗಳ ನಿಯಂತ್ರಣಕ್ಕೆ ಏನೆಲ್ಲಾ ಮಾಡಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಂದು ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿದೆ.

 ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಬೆಲ್ ಹೆಲಿಕ್ಯಾಪ್ಟರ್ ಬಳಕೆ

ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಬೆಲ್ ಹೆಲಿಕ್ಯಾಪ್ಟರ್ ಬಳಕೆ

ಏಪ್ರಿಲ್ 11 ರಿಂದ ಜುಲೈ 9, 2020ನೇ ತಾರೀಖಿನವರೆಗೆ ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಛತ್ತೀಸಘಡ, ಹರಿಯಾಣ ಮತ್ತು ಬಿಹಾರ ರಾಜ್ಯಗಳಲ್ಲಿ 2,83,929 ಹೆಕ್ಟೇರ್ ಪ್ರದೇಶದಲ್ಲಿ ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ತಿಳಿಸಿದೆ.
ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಬೆಲ್ ಹೆಲಿಕ್ಯಾಪ್ಟರ್ ಬಳಸುತ್ತಿರುವುದಾಗಿ ಮತ್ತು ಹೆಚ್ಚುವರಿ 55 ವಾಹನಗಳು 20 ಸಿಂಪರಣಾ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದೂ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

 ಐದು ಕಂಪನಿಗಳಿಂದ 15 ಡ್ರೋಣ್ ಗಳ ನಿಯೋಜನೆ

ಐದು ಕಂಪನಿಗಳಿಂದ 15 ಡ್ರೋಣ್ ಗಳ ನಿಯೋಜನೆ

ಪ್ರಸ್ತುತ 60 ತಂಡಗಳು (ಮರುಭೂಮಿ ಮಿಡತೆ ನಿಯಂತ್ರಣಕ್ಕೆ ರಚಿಸಿರುವ ತಂಡಗಳು) ಸಿಂಪರಣಾ ವಾಹನಗಳ ಜೊತೆಯಾಗಿ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಕೆಲಸ ಮಾಡುತ್ತಿವೆ. ಕೇಂದ್ರದ 200ಕ್ಕೂ ಹೆಚ್ಚು ಸಿಬ್ಬಂದಿ ಈ ಕೆಲಸದಲ್ಲಿ ತೊಡಗಿದ್ದಾರೆ.

ರಾಜಾಸ್ತಾನದ ಬಾರ್ಮರ್, ಜೈಸಲ್ಮಿರ್, ಬಿಕನೆರ್, ನಾಗ್ಪುರ್ ಮತ್ತು ಫಲೋಡಿ ಪ್ರದೇಶಗಳಲ್ಲಿ ಮರುಭೂಮಿ ಮಿಡತೆಗಳನ್ನು ಸಮರ್ಥವಾಗಿ ನಿರ್ವಹಿಸಲು, ಎತ್ತರದ ಜಾಗಗಳಲ್ಲಿ, ಮರಗಳ ಮೇಲೆ ಕೂರುವ ಈ ಮಿಡತೆಗಳನ್ನು ತಹಬಂದಿಗೆ ತರಲು ರಾಸಾಯನಿಕ ಸಿಂಪರಣೆ ಮಾಡುವ ಸಲುವಾಗಿ ಐದು ಕಂಪನಿಗಳಿಂದ 15 ಡ್ರೋನ್ ಗಳನ್ನು ನಿಯೋಜಿಸಲಾಗಿದೆ.ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ವೈಮಾನಿಕ ಸಿಂಪರಣಾ ಚಟುವಟಿಕೆಗಳನ್ನು ಬಲಪಡಿಸಲಾಗಿದೆ. ರಾಜಾಸ್ತಾನದಲ್ಲಿ ಅಗತ್ಯವಿರುವ ಕಡೆ ಬೆಲ್ ಹೆಲಿಕ್ಯಾಪ್ಟರ್ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ವಾಯುಪಡೆ Mi-17 ಹೆಲಿಕ್ಯಾಪ್ಟರ್ ಅನ್ನೂ ಬಳಸಿ ಸಿಂಪರಣಾ ಪ್ರಯೋಗ ನಡೆಸಿದೆ. ಇದರಲ್ಲೂ ಉತ್ತಮ ಫಲಿತಾಂಶ ಕಂಡು ಬಂದಿದೆ.
ದೊಡ್ಡ ಮಟ್ಟದ ಬೆಳೆ ನಷ್ಟ ಎಲ್ಲಿಯೂ ವರದಿಯಾಗಿಲ್ಲ

ದೊಡ್ಡ ಮಟ್ಟದ ಬೆಳೆ ನಷ್ಟ ಎಲ್ಲಿಯೂ ವರದಿಯಾಗಿಲ್ಲ

ಈ ಅವಧಿಯಲ್ಲಿ ಇವಿಷ್ಟೂ ರಾಜ್ಯಗಳಲ್ಲಿ ದೊಡ್ಡ ಮೊತ್ತದ ಬೆಳೆ ನಷ್ಟ ಎಲ್ಲಿಯೂ ವರದಿಯಾಗಿಲ್ಲ. ರಾಜಸ್ಥಾನದಲ್ಲಿ ಅಲ್ಪ ಮೊತ್ತದ ಬೆಳೆ ನಷ್ಟವಾಗಿರುವುದಾಗಿ ತಿಳಿದು ಬಂದಿದೆ. ಜುಲೈ 3 2020ರ FAO (Food and Agriculture Organization) ಮಿಡತೆಗಳ ಸಮೂಹ ಮುಂಗಾರು ಮಳೆ ಆರಂಭಕ್ಕೂ ಮುನ್ನ ಭಾರತ ಮತ್ತು ಪಾಕ್ ಬಾರ್ಡರ್ ಗಳಿಗೆ ಹೋಗಿವೆ. ಕೆಲವು ಸಮೂಹಗಳು ಭಾರತದ ಪೂರ್ವ ಹಾಗೂ ಉತ್ತರದ ರಾಜ್ಯಗಳಲ್ಲಿ ಚದುರಿ ಹೋಗಿವೆ. ಮತ್ತೆ ನೇಪಾಳ ತಲುಪಿವೆ.

ಇದೀಗ ಜುಲೈ ಮಧ್ಯಭಾಗದಲ್ಲಿ ಮತ್ತೆ ರಾಜಾಸ್ತಾನಕ್ಕೆ ಈ ಮಿಡತೆಗಳ ಸಮೂಹ ಮರಳಿ ಬರಬಹುದೆಂಬ ಊಹೆಯಿದೆ. ಈ ಮಿಡತೆಗಳ ಸಮೂಹ ಈಗಾಗಲೇ ಊಹಿಸಿರುವಂತೆ ಆಫ್ರಿಕಾದಿಂದ ಭಾರತಕ್ಕೆ ಜುಲೈ ಮೂರನೆಯ ವಾರದಲ್ಲಿ ಬರಬಹುದಾದ ಸಮೂಹವನ್ನು ಸೇರಿಕೊಳ್ಳಲಿವೆ ಎಂದೂ ಹೇಳಲಾಗಿದೆ.
ವೃದ್ಧಿಯಾಗಿರುವ ಮಿಡತೆಗಳ ಸಂತಾನ

ವೃದ್ಧಿಯಾಗಿರುವ ಮಿಡತೆಗಳ ಸಂತಾನ

ಈಗಾಗಲೇ ಮಿಡತೆಗಳ ಸಂತಾನವು ಭಾರತ ಮತ್ತು ಪಾಕಿಸ್ತಾನ ಬಾರ್ಡರ್ ನಲ್ಲಿ ವೃದ್ಧಿಯಾಗಿದ್ದು, ಅವುಗಳು ಪ್ರೌಢಾವಸ್ಥೆಗೆ ಬಂದು ಆಗಸ್ಟ್ ಮಧ್ಯದಲ್ಲಿ ದಾಳಿ ಇಡಬಹುದು. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಮತ್ತು ಮುಂದಾಗಬಹುದಾದ ಅನಾಹುತಗಳ ನಿರೀಕ್ಷೆಯಲ್ಲಿ ದೇಶ ದೇಶಗಳ ನಡುವಿನ ವೈಜ್ಞಾನಿಕ ಸಮೂಹ ಚರ್ಚೆಯಲ್ಲಿ ತೊಡಗಿದೆ.

ಅಫ್ಘಾನಿಸ್ತಾನ, ಭಾರತ, ಇರಾನ್ ಮತ್ತು ಪಾಕಿಸ್ತಾನ ದೇಶಗಳ ನಡುವೆ ವಿಜ್ಞಾನಿಗಳ ನಡುವೆ ಆನ್ ಲೈನ್ ಮೀಟಿಂಗಳು ಪ್ರತಿ ವಾರ ನಡೆಯುತ್ತಿವೆ. ಈಗಾಗಲೇ ಸುಮಾರು 15 ಸಭೆಗಳು ನಡೆದಿರುವುದಾಗಿ ಕೇಂದ್ರ ಕೃಷಿ ಇಲಾಖೆ ತಿಳಿಸಿದೆ.

English summary
Locusts may once again attack on the states of north india From July 3rd week to August 3rd week
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X