ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ

|
Google Oneindia Kannada News

ಹೈದರಾಬಾದ್, ಏಪ್ರಿಲ್ 16 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ ಎಲ್ಲಾ ರೈತರ ಮೇಲೆ ಪರಿಣಾಮ ಬೀರಿದೆ. ಆದರೆ, ಮಾವು ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾವಿನ ಹಣ್ಣು ಮಾರುಕಟ್ಟೆಗೆ ಬರುವ ಸಮಯಕ್ಕೆ ಲಾಕ್ ಡೌನ್ ಘೋಷಣೆಯಾಗಿದೆ.

Recommended Video

ಕಲಬುರಗಿಯಲ್ಲಿ ಹೇಗೆ ನಡೆಯುತ್ತಿದೆ ತಪಾಸಣೆ | Kalburgi | Checking | Corona | Oneindia kannada

ಮಾವಿನ ಹಣ್ಣು ನಂಬಿಕೊಂಡು ಈ ಬಾರಿ ಬಂಡವಾಳ ಹೂಡುವಂತಿಲ್ಲ ಎಂದು ತೆಲಂಗಾಣದ ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 50ರಷ್ಟು ಹಣ್ಣುಗಳು ಮಾತ್ರ ಈಗ ಮಾರುಕಟ್ಟೆಗೆ ಬಂದಿವೆ.

ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು

ಬೇಸಿಗೆ ಬಂತೆಂದರೆ ಮಾವಿನ ಹಣ್ಣಿನ ಬೇಡಿಕೆ ಹೆಚ್ಚುತ್ತಿದೆ. ಈ ಬಾರಿ ಕೊರೊನಾ ಪರಿಣಾಮ ಮಾವು ಬೆಳೆಗಾರರಿಗೆ ಹೊಡೆತ ನೀಡಿದೆ. ಮಾರುಕಟ್ಟೆಗೆ ಹಣ್ಣುಗಳನ್ನು ಸಾಗಿಸುವುದು ದೊಡ್ಡ ಸಾಹಸವಾಗಿದೆ. ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಕುಸಿದಿದೆ.

ಬೆಂಗಳೂರಲ್ಲಿ ಅಂಚೆ ಕಚೇರಿಯಲ್ಲಿ ಸಿಗಲಿದೆ ಮಾವಿನ ಹಣ್ಣು! ಬೆಂಗಳೂರಲ್ಲಿ ಅಂಚೆ ಕಚೇರಿಯಲ್ಲಿ ಸಿಗಲಿದೆ ಮಾವಿನ ಹಣ್ಣು!

Lockdown Hits The Mango Sales In Many States

ಹೈದರಾಬಾದ್‌ ಮಾರುಕಟ್ಟೆಯಲ್ಲಿನ ಮಾವಿನ ವ್ಯಾಪಾರಿಗಳು, "ಈ ಬಾರಿ ಫಲಸು ಮಾರುಕಟ್ಟೆಗೆ ಬರುತ್ತಿಲ್ಲ. ಕೊಳ್ಳುವವರು ಬರುತ್ತಿಲ್ಲ. ನಾವೆಲ್ಲರೂ ಕಷ್ಟ ಅನುಭವಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು ಮಾವು ಬೆಳೆಯ ವಿವಿಧ ರೋಗ; ಹತೋಟಿ ಕ್ರಮಗಳು

ಈ ಸಮಯದಲ್ಲಿ 10 ರಿಂದ 12 ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಇರಬೇಕಿತ್ತು. ಆದರೆ, ಈ ಬಾರಿ ಕೇವಲ 5 ರಿಂದ 6 ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಆದರೆ,ಜನರು ಅವುಗಳನ್ನು ಕೊಳ್ಳಲು ಆಸಕ್ತಿ ತೋರುತ್ತಿಲ್ಲ.

ಮಾವಿನ ಹಣ್ಣುಗಳನ್ನು ಖರೀದಿ ಮಾಡುವಂತೆ ವಿವಿಧ ರಾಜ್ಯಗಳಲ್ಲಿ ರೈತರು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದಾರೆ. ಸಹಕಾರಿ ಸಂಘಗಳ ಮೂಲಕ ಖರೀದಿಸಿ ಜನರಿಗೆ ವಿತರಣೆ ಮಾಡಿ, ರೈತರಿಗೆ ನಷ್ಟವನ್ನು ಉಂಟು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ನಗರದಲ್ಲಿನ ರೆಸ್ಟೋರೆಂಟ್, ಜ್ಯೂಸ್ ಸೆಂಟರ್‌ಗಳಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿತ್ತು. ಆದರೆ, ಈಗ ಅವುಗಳು ಲಾಕ್ ಡೌನ್ ಕಾರಣದಿಂದಾಗಿ ಬಾಗಿಲು ಮುಚ್ಚಿವೆ. ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಿಲ್ಲ. ಇದರಿಂದಾಗಿ ಮಾವಿಗೆ ಬೇಡಿಕೆ ಕಡಿಮೆ ಇದೆ.

ಲಾಕ್ ಡೌನ್ ಅನ್ನು ಮೇ 3ರ ತನಕ ವಿಸ್ತರಣೆ ಮಾಡಲಾಗಿದೆ. ಬಳಿಕ ರೆಸ್ಟೋರೆಂಟ್, ಜ್ಯೂಸ್ ಸೆಂಟರ್ ಮುಂತಾದವುಗಳನ್ನು ತೆರೆಯುವ ಕುರಿತು ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಮಾವು ಬೆಳೆದ ರೈತರು ಅಲ್ಲಿಯ ತನಕ ಕಾಯುವುದು ಅನಿವಾರ್ಯವಾಗಿದೆ.

English summary
Nationwide lockdown hit the Mango sales. Mango traders in Hyderabad said that their business is low due to COVID19. Supply is low and buyers are also not coming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X