ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ ಮುಂಗಾರು ಮಳೆ : ಶೇಕಡಾ 22ರಷ್ಟು ಕಡಿಮೆ ಬಿತ್ತನೆ

|
Google Oneindia Kannada News

ನವದೆಹಲಿ, ಜೂನ್ 19: 2022ರ ಮುಂಗಾರು ಆರಂಭ ಉತ್ತಮವಾಗಿಲ್ಲ, ಕೆಲವೆಡೆ ವಿಪರೀತ ಮಳೆಯಾದರೆ ಮತ್ತೊಂದೆಡೆ ಇನ್ನೂ ಬಿಸಿಲಿನ ಬೇಗೆ ಕಡಿಮೆಯಾಗಿಲ್ಲ, ಇದು ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮುಂಗಾರು ಹಂಗಾಮಿನ ಮೊದಲ ಹದಿನೈದು ದಿನಗಳಲ್ಲಿ ಕಳೆದ ವರ್ಷಕ್ಕಿಂತ ಶೇ.22ರಷ್ಟು ಕಡಿಮೆ ಬಿತ್ತನೆಯಾಗಿದೆ.

ನೈಋತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಿದ್ದರೂ 2022ರ ಜೂನ್ 12 ರವರೆಗೆ ಪರ್ಯಾಯ ದ್ವೀಪ ಶೇಕಡಾ 41 ರಷ್ಟು ಮತ್ತು ಮಧ್ಯ ಭಾರತದಲ್ಲಿ 69 ರಷ್ಟು ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕೃಷಿ-ಮಾಪನಶಾಸ್ತ್ರದ ಯೋಜನೆಯ ಯೋಜನಾ ಸಂಯೋಜಕ ಸಂತೋಷ್ ಕೆ. ಆರ್. ಬಾಲ ಹೇಳಿದರು.

ಮುಸುಕಿನ ಜೋಳ ಸುಳಿಕೊರಕ ಹುಳುವಿನ ಹತೋಟಿಗೆ ಕ್ರಮಗಳುಮುಸುಕಿನ ಜೋಳ ಸುಳಿಕೊರಕ ಹುಳುವಿನ ಹತೋಟಿಗೆ ಕ್ರಮಗಳು

ಮಧ್ಯ ಮತ್ತು ದಕ್ಷಿಣ ಭಾರತದ ಬಹುಪಾಲು ಮಳೆಯಾಶ್ರಿತ ನೀರಾವರಿಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು, ಇದರಿಂದಾಗಿ ರೈತರು ಖಾರಿಫ್ ಹಂಗಾಮಿಗೆ ಬಿತ್ತನೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಕೃಷಿ ಇಲಾಖೆಯ ಅಂಕಿಅಂಶಗಳು ಪ್ರಕಾರ ಎಣ್ಣೆಬೀಜ ಬೆಳೆಗಳ ಬಿತ್ತನೆಯು ಪ್ರಮಾಣ ಕಡಿಮೆಯಾಗಿದೆ. ದ್ವಿದಳ ಧಾನ್ಯಗಳ ಬೆಳೆಗಳು, ವಿಶೇಷವಾಗಿ ಬಟಾಣಿ ಮತ್ತು ಹೆಸರು ಬಿತ್ತನೆಯು ಶೇಕಡಾ 40-45 ರಷ್ಟು ಕಡಿಮೆಯಾಗಿದೆ.

 ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮ ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮ

ಕಳೆದ ವರ್ಷಕ್ಕಿಂತೆ ಕಡಿಮೆಯಾದ ಬಿತ್ತನೆ ಪ್ರಮಾಣ

ಕಳೆದ ವರ್ಷಕ್ಕಿಂತೆ ಕಡಿಮೆಯಾದ ಬಿತ್ತನೆ ಪ್ರಮಾಣ

2021 ರಲ್ಲಿ ಜೂನ್‌ ತಿಂಗಳ ಮೊದಲ ಎರಡು ವಾರಗಳಲ್ಲಿ 8.52 ಮಿಲಿಯನ್ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ 2022ರ ಜೂನ್ ತಿಂಗಳ ಮೊದಲ ಎರಡು ವಾರದಲ್ಲಿ 6.65 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಅಂದರೆ, 1.87 ಮಿಲಿಯನ್ ಹೆಕ್ಟೇರ್ (21.98 ಪ್ರತಿಶತ) ಪ್ರದೇಶದಲ್ಲಿ ಇನ್ನೂ ಬಿತ್ತನೆ ಮಾಡಲಾಗಿಲ್ಲ.

ಖಾರಿಫ್ ಹಂಗಾಮಿನ ಪ್ರಮುಖ ಬೆಳೆ ಭತ್ತದ ಬಿತ್ತನೆಯಲ್ಲೂ ಹಿನ್ನಡೆಯಾಗಿದೆ. ಕಳೆದ ವರ್ಷ ಜೂನ್ ಎರಡನೇ ವಾರದವರೆಗೆ ಸುಮಾರು 0.65 ಮಿ.ಹೆ. ಭತ್ತ ಬಿತ್ತನೆಯಾಗಿತ್ತು. ಈ ವರ್ಷ 0.64 ಮಿ.ಹೆ. ಮಾತ್ರ ಬಿತ್ತನೆಯಾಗಿದೆ.

ಕಾಳುಗಳ ಬಿತ್ತನೆ ಪ್ರಮಾಣ ಕಡಿಮೆ

ಕಾಳುಗಳ ಬಿತ್ತನೆ ಪ್ರಮಾಣ ಕಡಿಮೆ

ದ್ವಿದಳ ಧಾನ್ಯಗಳ ಬೆಳೆಗಳನ್ನು ಕಳೆದ ವರ್ಷ 0.27 ಮಿ.ಹೆ.ನಲ್ಲಿ ಬಿತ್ತನೆ ಮಾಡಲಾಗಿದ್ದು, ಈ ವರ್ಷ 0.20 ಮಿ.ಹೆ.ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ 0.45 ಮಿ.ಹೆ.ನಲ್ಲಿ ಏಕದಳ ಧಾನ್ಯಗಳನ್ನು ಬಿತ್ತಲಾಗಿದೆ. ಈ ವರ್ಷ 0.31 ಮಿ.ಹೆ.ನಲ್ಲಿ ಬಿತ್ತನೆಯಾಗಿದೆ.

ಕಳೆದ ವರ್ಷ ಜೂನ್ 10ರವರೆಗೆ 0.34 ಮಿ.ಹೆ. ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರೆ, ಈ ಬಾರಿ 0.25 ಮಿ.ಹೆ. ಬಿತ್ತನೆಯಾಗಿದೆ. ಎಣ್ಣೆಕಾಳುಗಳನ್ನು 0.19 ಮಿ.ಹೆ. ಈ ವರ್ಷ 0.13 ಮಿ.ಹೆ.ನಲ್ಲಿ ಮಾತ್ರ ಬಿತ್ತನೆಯಾಗಿದೆ.

ಈ ವರ್ಷ ಕಬ್ಬು ಬಿತ್ತನೆ ಹೆಚ್ಚಳವಾಗಿದೆ. ಕಳೆದ ವರ್ಷ ಜೂನ್ ಎರಡನೇ ವಾರದವರೆಗೆ 4.63 ಮಿ.ಹೆ.ನಲ್ಲಿ ಕಬ್ಬು ಬಿತ್ತನೆಯಾಗಿತ್ತು. ಈ ವರ್ಷ 4.71 ಮಿ.ಹೆ.ನಲ್ಲಿ ಕಬ್ಬು ಬಿತ್ತನೆಯಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಬಿತ್ತನೆ ಪ್ರಮಾಣ

ದೇಶದ ಹಲವು ರಾಜ್ಯಗಳಲ್ಲಿ ಬಿತ್ತನೆ ಪ್ರಮಾಣ

ರಾಜ್ಯಗಳ ಪೈಕಿ ಕಳೆದ ವರ್ಷ ಜೂನ್ ಎರಡನೇ ವಾರದವರೆಗೆ ಉತ್ತರ ಪ್ರದೇಶದಲ್ಲಿ 2.35 ಮಿ.ಹೆ. ಪ್ರದೇಶದಲ್ಲಿ ಬಿತ್ತನೆಯಾಗಿತ್ತು, ಆದರೆ ಈ ವರ್ಷ ಕೇವಲ 2.27 ಮಿ.ಹೆ.ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮಹಾರಾಷ್ಟ್ರದಲ್ಲಿ 1.04 ಮಿ.ಹೆ. ಬದಲಿಗೆ ಕೇವಲ 1 ಮಿ.ಹೆ., ಕರ್ನಾಟಕದಲ್ಲಿ 0.82 ಮಿ.ಹೆ. ಬದಲಿಗೆ 0.73 ಮಿ.ಹೆ. ಬಿತ್ತನೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ ವರ್ಷ 0.52 ಮಿ.ಹೆ. ಬಿತ್ತನೆಯಾಗಿದ್ದು, ಈ ಬಾರಿ 0.51 ಮಿ.ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲೂ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ಜೂನ್ 10 ರವರೆಗೆ ಪಂಜಾಬ್‌ನಲ್ಲಿ ಸುಮಾರು 0.45 ಮಿ.ಹೆ. ಬಿತ್ತನೆಯಾಗಿತ್ತು, ಆದರೆ ಈ ಬಾರಿ ಕೇವಲ 0.16 ಮಿ.ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಕಳೆದ ವರ್ಷಕ್ಕಿಂತ ಜೂನ್ ಎರಡನೇ ವಾರದವರೆಗೆ ಹೆಚ್ಚು ಬಿತ್ತನೆಯಾಗಿರುವ ಏಕೈಕ ರಾಜ್ಯ ಗುಜರಾತ್. ಇಲ್ಲಿ ಕಳೆದ ವರ್ಷ 0.25 ಮಿ.ಹೆ. ನಷ್ಟು ಬಿತ್ತನೆಯಾಗಿದ್ದರೆ ಈ ವರ್ಷ 0.26 ಮಿ.ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ

ಕಡಿಮೆಯಾದ ಮಳೆ ಪ್ರಮಾಣ

ಕಡಿಮೆಯಾದ ಮಳೆ ಪ್ರಮಾಣ

ಮುಂಗಾರು ಪೂರ್ವ ಮಳೆಯಾಗದ ಕಾರಣ ಹೊಲಗಳಲ್ಲಿ ತೇವಾಂಶದ ಕೊರತೆಯೂ ಖಾರಿಫ್ ಹಂಗಾಮಿಗೆ ಬಿತ್ತನೆ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ.

2022 ರ ಮಾರ್ಚ್‌ನಿಂದ ಮೇ ವರೆಗಿನ ಮುಂಗಾರು ಪೂರ್ವ ಋತುವಿನಲ್ಲಿ ದೀರ್ಘಾವಧಿಯ ಸರಾಸರಿ (LPA) ಗಿಂತ ಕೇವಲ ಒಂದು ಶೇಕಡಾ ಕಡಿಮೆ ಮಳೆ ದಾಖಲಾಗಿದೆ. ಮಧ್ಯ ಭಾರತ ಮತ್ತು ವಾಯುವ್ಯ ಭಾರತದ ಪ್ರದೇಶಗಳಲ್ಲಿ ಬಹಳ ಕಡಿಮೆ ಮಳೆಯಾಗಿದೆ.

ಭಾರತದ ಹವಾಮಾನ ಇಲಾಖೆಯ ಪ್ರಕಾರ, ಮುಂಗಾರು ಪೂರ್ವದ ಅವಧಿಯಲ್ಲಿ ಮಧ್ಯ ಭಾರತದಲ್ಲಿ 37.5 ಮಿಮೀ ಮಳೆಯಾಗಬೇಕಾಗಿತ್ತು ಆದರೆ 22.8 ರಷ್ಟು (ಶೇಕಡಾ 39 ರಷ್ಟು ಕಡಿಮೆ) ಮಳೆಯಾಗಿದೆ, ಆದರೆ ವಾಯುವ್ಯ ರಾಜ್ಯಗಳು 114.4 ಮಿ. ಮೀ. ಮಳೆಯಾಗಬೇಕಾಗಿತ್ತು 42.3 ಮಿ. ಮೀ. (ಶೇಕಡಾ 63 ಕಡಿಮೆ) ಮಳೆ ಪ್ರಮಾಣ ದಾಖಲಾಗಿದೆ.

English summary
Kharif season 2022 has not been good. About 22 per cent less sowing has been reported in the first fortnight of the season than last year, according to figures from the agriculture department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X