ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳೆ ಎಣ್ಣೆಯ ಹೊಸ 'ಕ್ಯಾಲಿಕ್ಸ್ ಕ್ಯೂ 6' ತಳಿ ಉತ್ಪಾದನಾ ಕೃಷಿಗೆ ಚಾಲನೆ

|
Google Oneindia Kannada News

ಆಂಧ್ರಪ್ರದೇಶ ಆಗಸ್ಟ್ 06: ರಾಜ್ಯದ ಸಾವಿರಾರು ತಾಳೆ ಎಣ್ಣೆ ಬೀಜ ಬೆಳೆಯುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತಾಳೆ ಎಣ್ಣೆಯ ಹೊಸ 'ಕ್ಯಾಲಿಕ್ಸ್ ಕ್ಯೂ 6' ತಳಿ ಉತ್ಪಾದನಾ ಕೃಷಿಗೆ ಕೃಷಿ ಸಚಿವ ಕೆ.ಗೋವರ್ಧನ ರೆಡ್ಡಿ ಇತ್ತೀಚೆಗೆ ಚಾಲನೆ ನೀಡಿದರು.

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಲ್ಲಜೆರ್ಲಾದಲ್ಲಿ ದಲ್ಲಿ ಭಾರತ ಮೂಲದ '3ಎಫ್ ಆಯಿಲ್ ಪಾಮ್ ಲಿಮಿಟೆಡ್‌' ಆಯೋಜಿಸಿದ್ದ ಸಮಾರಂಭದಲ್ಲಿ ಸಚಿವರು ನೂತನ ಕೃಷಿಗೆ ಚಾಲನೆ ನೀಡಿದರು.

ಈ ವೇಳೆ ಭಾರತದಲ್ಲಿ ನೂತನ ತಾಳೆ ಎಣ್ಣೆಯ ತಳಿ ಪರಿಚಯಿಸುತ್ತಿರುವ '3ಎಫ್ ಆಯಿಲ್ ಪಾಮ್ ಲಿಮಿಟೆಡ್‌' ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗೋಯೆಂಕಾ ಮಾತನಾಡಿ, ನೂತನ ತಾಳೆ ಎಣ್ಣೆಯ 'ಕ್ಯಾಲಿಕ್ಸ್ ಕ್ಯೂ 6' ತಳಿಯನ್ನು ಮಲೇಷಿಯಾದ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಈ ತಳಿ ಕೃಷಿಯನ್ನು ಕಂಪನಿ ಪ್ರೋತ್ಸಾಹಿಸುತ್ತಿದ್ದು, ಇದರಿಂದ ರಾಜ್ಯದ 4,000 ತಾಳೆ ಎಣ್ಣೆ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ರೈತರ ಆದಾಯ ಹೆಚ್ಚಿಸುವ ಈ 'ಕ್ಯಾಲಿಕ್ಸ್ ಕ್ಯೂ 6 ಆಯಿಲ್ ಪಾಮ್ ವಿಧದ' ಕೃಷಿಮೇಲೆ ಕಂಪನಿಯು 30ಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ. ಇದರಿಂದ ಆಂಧ್ರಪ್ರದೇಶ ರಾಜ್ಯದಲ್ಲಿ ಅಗತ್ಯದಷ್ಟು ತಾಳೆ ಗಿಡಗಳನ್ನು ರೈತರಿಗೆ ಪೂರೈಕೆ ಮಾಡುವ ಗುರಿ ಕಂಪನಿ ಹೊಂದಿದೆ.

ಶೇ.20ರಿಂದ 30ರಷ್ಟು ಅಧಿಕ ಇಳುವರಿ

ಶೇ.20ರಿಂದ 30ರಷ್ಟು ಅಧಿಕ ಇಳುವರಿ

ಈ 'ಕ್ಯಾಲಿಕ್ಸ್ ಕ್ಯೂ 6' ತಳಿ ಕೃಷಿ ನಿರ್ವಹಣೆಗೆ ಭಾರತದಲ್ಲಿ ಕನಿಷ್ಠ ಸಮಸ್ಯೆಗಳು ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಅವುಗಳನ್ನು ಕಂಪರ್ನಿ ಸಮರ್ಥವಾಗಿ ನಿಭಾಯಿಸುವ ಮೂಲಕ ರೈತರ ಇಳುವರಿಯನ್ನು ಹೆಚ್ಚಿಸಲು ಶ್ರಮಿಸಲಿದೆ. ಪಾಮ್ ಆಯಿಲ್, ಕೃಷಿಯ ಅತ್ಯುತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರಂತರವಾಗಿ ನಿಯೋಜಿಸಲು ಕಂಪನಿ ಸದಾ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು.


'3ಎಫ್ ಆಯಿಲ್ ಪಾಮ್ ಲಿಮಿಟೆಡ್‌' ಕಂಪನಿಯು 30ಕೋಟಿ ಡಾಲರ್ ಹೂಡಿಕೆ ಮಾಡುವ ಮೂಲಕ ಆಂಧ್ರಪ್ರದೇಶದ ರೈತರಿಗೆ 10 ಲಕ್ಷ ತಾಳೆ ಗಿಡಗಳನ್ನು ನೀಡುವ ಮೂಲಕ ವಾರ್ಷಿಕವಾಗಿ ಸುಮಾರು 4,000 ಕೃಷಿ ಕುಟುಂಬಗಳನ್ನು ಬೆಂಬಲಿಸಲು ಯೋಜನೆಯಲ್ಲಿದ್ದೇವೆ. ಈ ಹೈಬ್ರಿಡ್ ತಾಳೆ ಎಣ್ಣೆ ತಳಿಯು ಸುಮಾರು ಶೇ.20ರಿಂದ 30ರಷ್ಟು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಧಿಕ ಇಳುವರಿ ಉತ್ತಮ ಆದಾಯ ಬಂದರೆ ಆಗ ಕೃಷಿಯತ್ತ ಒಲವು ಹೆಚ್ಚಾಗಿ ರೈತರ ಸಂಖ್ಯೆಯಲ್ಲೂ ಏರಿಕೆ ಆಗಲಿದೆ ಎಂದರು.

ತಾಳೆ ಎಣ್ಣೆ ರೈತರು, ಎಣ್ಣ ಉದ್ಯಮ ಉತ್ತೇಜನೆ

ತಾಳೆ ಎಣ್ಣೆ ರೈತರು, ಎಣ್ಣ ಉದ್ಯಮ ಉತ್ತೇಜನೆ

ಆಂಧ್ರಪ್ರದೇಶದಲ್ಲಿ ಇತರ ತಳಿಗಳಿಗಿಂತಲೂ ಈ ಹೊಸ 'ಕ್ಯಾಲಿಕ್ಸ್ ಕ್ಯೂ 6' ತಳಿಯು ಕೇವಲ 24 ತಿಂಗಳಲ್ಲಿ ಹೆಚ್ಚು ಇಳುವರಿ ಕೊಡುವುದರಿಂದ ಕಂಪನಿ ಈ ಕೃಷಿ ಬಗ್ಗೆ ಹೆಚ್ಚು ಆಕರ್ಷಿತವಾಗಿದೆ. ಅದಲ್ಲದೇ ರೈತರಿಗೆ ಮತ್ತು ತಾಳೆ ಎಣ್ಣೆ ಉದ್ಯಮ ಉತ್ತೇಜಿಸಿ ನೆರವಾಗಲು ಕಂಪನಿಯು ಪ್ರಪಂಚದಾದ್ಯಂತದ ಹೆಸರಾಂತ ವಿವಿಧ ಬೀಜ ತಯಾರಕರಿಂದ ಕೆಳಗಿನ ಬೀಜ ಪ್ರಭೇದಗಳನ್ನು ಸಂಗ್ರಹಿಸಿದೆ ಎಂದು ಅವರು ತಿಳಿಸಿದರು.

ಕಂಪನಿ ಸಂಗ್ರಹಿಸಿದ ಬೀಜ ತಳಿಗಳು ಯಾವವು?

ಕಂಪನಿ ಸಂಗ್ರಹಿಸಿದ ಬೀಜ ತಳಿಗಳು ಯಾವವು?

ಮಲೇಷ್ಯಾದಿಂದ 'ಸೈಮ್ ಡಾರ್ಬಿ' ಮತ್ತು ಪುಷ್ಪಪಾತ್ರೆ 600, 'ಕ್ಯಾಲಿಕ್ಸ್ ಕ್ಯೂ6' (ಭಾರತದಲ್ಲಿ ಇದೇ ಮೊದಲು), ಫ್ರಾನ್ಸ್- ಥೈಲ್ಯಾಂಡ್ ನಿಂದ ಸಿರಾಡ್ ಪಾಮ್ ಎಲಿಟ್, 3ವೇ ಕ್ರಾಸ್ (ಭಾರತದಲ್ಲಿ ಇದೇ ಮೊದಲು), ಕೋಸಟರಿಕಾ ದೇಶದಿಂದ ಎಎಸ್‌ಡಿ, ವಸಂತ, ತೆಂಬ, ಮಲೇಷ್ಯಾದಿಂದಿ ಎಫ್‌ಜಿವಿ ತಳಿಗಳನ್ನು ಕಂಪನಿ ಸಂಗ್ರಹಿಸಿದೆ. ಅದರಲ್ಲಿ ಕೆಲವುಗಳನ್ನು ತಾಳೆ ಎಣ್ಣೆ ಕೃಷಿ ಹಾಗೂ ಉದ್ಯಮಕ್ಕೆ ಪ್ರೋತ್ಸಾಹಿಸಲು ಭಾರತದಲ್ಲಿ ಪರಿಚಯಿಸಿದೆ.

ಕೃಷಿ ನಷ್ಟ ತಡೆಗೆ ಕ್ರಮ ಕೈಗೊಳ್ಳಬೇಕು

ಕೃಷಿ ನಷ್ಟ ತಡೆಗೆ ಕ್ರಮ ಕೈಗೊಳ್ಳಬೇಕು

ಪ್ರಾಯೋಗಿಕವಾಗಿ ಒಂಬತ್ತು ತಾಳೆ ಎಣ್ಣೆ ತಳಿಯ ಹೊಸ 'ಕ್ಯಾಲಿಕ್ಸ್ ಕ್ಯೂ6' ಗಿಡಗಳನ್ನು ರೈತರಿಗೆ ವಿತರಿಸಿ ಮಾತನಾಡಿದ ಆಂಧ್ರ ಕೃಷಿ ಸಚಿವ ಗೋವರ್ಧನ ರೆಡ್ಡಿ ಅವರು, ಪ್ರತಿಯೊಬ್ಬ ರೈತನು ತಾನು ಬಿತ್ತಿದ ಬೆಳೆಯಿಂದ ಉತ್ತಮ ಇಳುವರಿ ಪಡೆಯಲು ಬಯಸುತ್ತಾನೆ. ಪ್ರಸ್ತುತ ಕಾಲದಲ್ಲಿ ಇಳುವರಿಯಲ್ಲಿ ತಾಳೆ ಎಣ್ಣೆ ಬೆಳೆ ಮುಂದಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ಕೃಷಿ ಇಳುವರಿಯಲ್ಲಿ ರೈತರಿಗೆ ಉಂಟಾಗುವ ನಷ್ಟವನ್ನು ತಪ್ಪಿಸಲು ಸರ್ಕಾರವೇ ನ್ಯಾಯಯುತ ಬೆಲೆಗೆ ಕೃಷಿ ಉತ್ಪನ್ನ ಖರೀದಿಸಿ ಮಾರಾಟ ಮಾಡುತ್ತಿದೆ. ಹೀಗಿದ್ದರು. ಕೋಟ್ಯಂತರ ರು. ನಷ್ಟವಾಗುತ್ತಿರುವದು ಸರ್ಕಾರದ ಗಮನಕ್ಕೆ ಬಂದಿದೆ. ಈ ರೀತಿ ನಷ್ಟವಾಗದಂತೆ ಪರಿಹಾರ ಕಂಡು ಕೊಳ್ಳಬೇಕಾದ ಅಗತ್ಯತೆ ಇದೆ. ಅಲ್ಲದೇ ಭತ್ತದ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಮೆಕ್ಕೆಜೋಳ, ಅರಿಶಿನ ಮತ್ತು ಬಜರಾ ಕೃಷಿಕರಿಗೂ ಸರ್ಕಾರ ಸಹಾಯ ಮಾಡಿದೆ ಎಂದು ಅವರು ವಿವರಿಸಿದರು.

English summary
Andhra Pradesh agriculture minister K Govardhan Reddy recently Launched new Hybrid Oil Palm Varieties 'CALIX Q6' agriculture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X