ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಢೀರ್ ಏರಿಕೆಯಾಗಿದ್ದ ಜಮೀನು ಸರ್ವೆ ಶುಲ್ಕ ಶೇ.50ರಷ್ಟು ಇಳಿಕೆ

|
Google Oneindia Kannada News

ಬೆಂಗಳೂರು, ಫೆ.11: ಕಳೆದು ತಿಂಗಳು ದಿಢೀರ್ ಮಾಡಲಾಗಿದ್ದ ಕೃಷಿ ಜಮೀನು ಸರ್ವೆ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿ ಸರ್ವೆ ನಂಬರ್‌ಗೆ 35 ರೂ. ಇದ್ದ ಸರ್ವೆ ಶುಲ್ಕವನನ್ನು ರಾಜ್ಯ ಸರ್ಕಾರ 2021ರ ನವೆಂಬರ್‌ನಲ್ಲಿ ಏಕಾಏಕಿ ನೂರಾರು ಪಟ್ಟು ಹೆಚ್ಚಳ ಮಾಡಿತ್ತು. ಇದು ಕೊರೊನಾ ಮತ್ತು ಬೆಳೆ ನಷ್ಟಗಳಿಂದ ಕಂಗಾಲಾಗಿದ್ದ ರೈತರಿಗೆ ಇದು ಸಾಕಷ್ಟು ಸಮಸ್ಯೆ ಉಂಟು ಮಾಡಿತ್ತು. ಇತ್ತೀಚೆಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ ಸದಸ್ಯ ದಿನೇಶ್ ಗೂಳಿಗೌಡ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆಯ ಗಮನ ಸೆಳೆದು ಸರ್ವೆ ಶುಲ್ಕದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದ್ದರು. ಇದರ ಬೆನ್ನಲ್ಲೇ ಸರ್ವೆ ಶುಲ್ಕ ಪರಿಷ್ಕರಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.

ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ರಾಜ್ಯ ಸರ್ಕಾರಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ರಾಜ್ಯ ಸರ್ಕಾರ

ಪರಿಷ್ಕೃತ ಆದೇಶದ ಪ್ರಕಾರ ಹದ್ದು ಬಸ್ತು ಅರ್ಜಿ ಶುಲ್ಕ ಗ್ರಾಮೀಣ ಭಾಗದಲ್ಲಿ ಎರಡು ಎಕರೆವರೆಗೂ 500 ರೂಪಾಯಿ ಹಾಗೂ 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 300 ರೂಪಾಯಿಯಂತೆ ದರ ನಿಗದಿ ಮಾಡಿ ಆದೇಶಿಸಿದೆ. ಇನ್ನು ನಗರ ಪ್ರದೇಶಗಳಲ್ಲಿ ಮೊದಲ 2 ಎಕರೆವರೆಗೆ 2000 ರೂ. ಇದ್ದು, ನಂತರ ಪ್ರತಿ ಎಕರೆಗೆ 400 ರೂ. ನಿಗದಿ ಮಾಡಿ ಕಂದಾಯ ಇಲಾಖೆ (ಭೂಮಾಪನ) ಫೆ.9ರಂದು ಆದೇಶ ಹೊರಡಿಸಿದೆ.

Agriculture land survey price reduced 50 percent in Karnataka

11ಇ ನಕ್ಷೆ, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿಗೆ ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೂ 1500 ರೂಪಾಯಿ ಹಾಗೂ 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 400 ರೂಪಾಯಿಯಂತೆ ದರ ನಿಗದಿಯಾಗಿದೆ. ನಗರ ಪ್ರದೇಶಗಳಲ್ಲಿ ಮೊದಲ 2 ಎಕರೆವರೆಗೆ 2500 ರೂ. ಇದ್ದು, ನಂತರ ಪ್ರತಿ ಎಕರೆಗೆ 1000 ರೂ.ಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಬಜೆಟ್ 2022: ರಾಸಾಯನಿಕ ಮುಕ್ತ, ಸಾವಯವ ಕೃಷಿಗೆ ಉತ್ತೇಜನ; ಶೋಭಾ ಕರಂದ್ಲಾಜೆಬಜೆಟ್ 2022: ರಾಸಾಯನಿಕ ಮುಕ್ತ, ಸಾವಯವ ಕೃಷಿಗೆ ಉತ್ತೇಜನ; ಶೋಭಾ ಕರಂದ್ಲಾಜೆ

ಏಕಾಏಕಿ ದರ ಏರಿಸಿದ್ದ ಸರ್ಕಾರ:

ಇದುವರೆಗೆ 35 ರೂಪಾಯಿಯಲ್ಲಿ ಆಗುತ್ತಿದ್ದ ಸರ್ವೇ ಕೆಲಸಕ್ಕೆ ಕಳೆದ ನವೆಂಬರ್‌ನಲ್ಲಿ ಸರ್ಕಾರ ಏಕಾಏಕಿ ಕಳೆದ ಜನವರಿಯಲ್ಲಿ ದರ ಏರಿಕೆ ಮಾಡಿತ್ತು. ಹದ್ದು ಬಸ್ತು ಅರ್ಜಿ ಶುಲ್ಕವನ್ನು ಗ್ರಾಮೀಣ ಪ್ರದೇಶದಲ್ಲಿ ಮೊದಲ ಎರಡು ಎಕರೆಗೆ 1500 ರೂ. ನಂತರ ಪ್ರತಿ ಎಕರೆಗೆ 300 ರೂ.ಗೆ ಹೆಚ್ಚಿಸಿತ್ತು. ನಗರ ಪ್ರದೇಶದಲ್ಲಿ ಮೊದಲ ಎರಡು ಎಕರೆಗೆ 2000 ರೂ. ಮತ್ತು ನಂತರ ಪ್ರತಿ ಎಕರೆಗೆ 400 ರೂ. ನಿಗದಿ ಮಾಡಿತ್ತು.

Agriculture land survey price reduced 50 percent in Karnataka

ದಿನೇಶ್ ಗೂಳಿಗೌಡ ಮನವಿ:

ಗ್ರಾಮೀಣ ಭಾಗದಲ್ಲಿ ಸರ್ವೇ ಮಾಡಲು ಎಕರೆಗೆ 35 ರೂ. ಇದ್ದ ಸರ್ವೇ ಶುಲ್ಕವನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ದಿಢೀರನೆ 3500ರಿಂದ 4000 ರೂ. ಹಾಗೂ ನಗರ ಭಾಗಕ್ಕೆ 5 ಸಾವಿರ ರೂಪಾಯಿಗೆ ಏರಿಸಿ ಶುಲ್ಕವನ್ನು ವಿಧಿಸಿತ್ತು. ಸರ್ಕಾರದ ಈ ಕ್ರಮದಿಂದ ರಾಜ್ಯದ ರೈತರಿಗೆ ಬಹಳ ತೊಂದರೆ ಆಗುತ್ತಿದ್ದು, ಮತ್ತಷ್ಟು ಸಂಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂದೊದಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶುಲ್ಕವನ್ನು ಇಳಿಸಬೇಕೆಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ರವರು ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ದಿನೇಶ್ ಗೂಳಿಗೌಡ ರವರು ಮನವಿ ಮಾಡಿದ ಬೆನ್ನಲ್ಲೆ ಎಚ್ಚೆತ್ತ ರಾಜ್ಯ ಸರ್ಕಾರವು ಸರ್ವೆ ಶುಲ್ಕ ಇಳಿಕೆ ಮಾಡಿದೆ.

English summary
Agriculture land survey price reduced 50 percent in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X