ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇನುಕೃಷಿ ಉತ್ತೇಜನಕ್ಕೆ ಮುಂದಾದ ಲ್ಯಾಂಡ್ ಸ್ಕೈರ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 20: ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಜೇನು ಕೃಷಿಗೆ ಒತ್ತು ನೀಡಲು ಲ್ಯಾಂಡ್ ಸ್ಕೈರ್ ನ್ಯೂಟ್ರಕೆಲ್ಯೂಟಿಕಲ್ಸ್ ಪ್ರೈ ಲಿಮಿಟೆಡ್ ಹಾಗೂ ಹನಿಡೇ ಬೀ ಫಾರ್ಮ್ ಜಂಟಿಯಾಗಿ ಹಲವು ಆಕರ್ಷಕ ಯೋಜನೆಗಳನ್ನು ರೂಪಿಸಿವೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಲ್ಯಾಂಡ್ ಸ್ಕೈರ್ ಸಂಸ್ಥೆಯ ಸಿಇಓ ವೆಂಕಟೇಶ್ ಅವರು, ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಜೇನುಕೃಷಿಯಿಂದ ರೈತರು ಮತ್ತು ವೃತ್ತಿಪರರು ದೂರ ಸರಿಯುತ್ತಿದ್ದಾರೆ. [ಉತ್ತರ ಕನ್ನಡದ ಜೇನುಗಳ ಜಾತ್ರೆಗೆ ಹೋಗಿದ್ರಾ?]

ಈ ಹಿನ್ನೆಲೆಯಲ್ಲಿ ಲ್ಯಾಂಡ್ ಸ್ಕೈರ್ ನ್ಯೂಟ್ರಸಿಟಿಕಲ್ಸ್ ಪ್ರೈ ಲಿಮಿಟೆಡ್, ಹನಿಡೇ ಸಂಸ್ಥೆಯೊಂದಿಗೆ ಸೇರಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರದಿಂದ ಈ ಜೇನು ಕೃಷಿಯನ್ನು ಮತ್ತೆ ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1990 ರಲ್ಲಿ ಜೇನಿಗೆ ಥಾಯ್ ಸಕ್ ಬ್ರೂ ಎಂಬ ವಿಚಿತ್ರ ರೋಗ ತಗುಲಿದ ಪರಿಣಾಮ ಜೇನು ಸಂತತಿ ಕಡಿಮೆಯಾಗುತ್ತಾ ಬಂದಿತು. ಇದರ ಪರಿಣಾಮ ಜೇನುಕೃಷಿಯಿಂದ ಬಹುತೇಕ ಕುಟುಂಬಗಳು ವಿಮುಖವಾಗತೊಡಗಿದವು. [ಮೀಟರ್‌ ಉದ್ದ ಜೇನು; ಲೀಟರುಗಟ್ಟಲೆ ತುಪ್ಪ!]

ಇದರಿಂದಾಗಿ ಜೇನುತುಪ್ಪದ ಕೊರತೆ ಉಂಟಾಯಿತು. ಅಂದಿನಿಂದ ಇಂದಿನವರೆಗೆ ಜೇನುಕೃಷಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಪ್ರಯತ್ನಗಳು ನಡೆದರೂ ಹೆಚ್ಚಿನ ಆಸಕ್ತಿ ಕಂಡು ಬರಲಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ಹನಿಡೇ ಯೊಂದಿಗೆ ಸೇರಿ ರಾಜ್ಯದ ಹಾಗೂ ದೇಶದ ಜೇನು ಕೃಷಿಯನ್ನು ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎಂದು ಹೇಳಿದರು.

ಹನೀಡೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಪೂರ್ವ

ಹನೀಡೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಪೂರ್ವ

1990 ರ ನಂತರದ ಆತಂಕದಲ್ಲಿರುವ ಜೇನು ಕೃಷಿಕರಲ್ಲಿ ಜಾಗೃತಿ ಮೂಡಿಸಿ ಕಳೆಗುಂದಿರುವ ಜೇನುಕೃಷಿಯನ್ನು ಪುನರುಜ್ಜೀವನಗೊಳಿಸಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ನೆರವು ಪಡೆಯಲಾಗವುದು ಎಂದು ತಿಳಿಸಿದರು.

ಜೇನುಕೃಷಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ರೈತರಿಗೆ ಮತ್ತು ಜೇನುಕೃಷಿಕರಿಗೆ ತಲುಪಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡಲಿದೆ.

ವಿಜ್ಞಾನಿ ಡಾ ದೀಪಕ್ ಕಸೋಟೆ ಮಾತನಾಡಿ,

ವಿಜ್ಞಾನಿ ಡಾ ದೀಪಕ್ ಕಸೋಟೆ ಮಾತನಾಡಿ,

ಪಶ್ಚಿಮಘಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜೇನು ತೆಗೆಯುವ ಕ್ರಮಕ್ಕೆ ಕಡಿವಾಣ ಹಾಕಿ ಜೇನು ಸಾಕಾಣಿಕೆಗಾರರಿಗೆ ಸೂಕ್ತ ತರಬೇತಿ ಮತ್ತು ಮನವರಿಕೆ ಮಾಡಿಕೊಟ್ಟು ಜೇನನ್ನು ವೈಜ್ಞಾನಿಕ ರೀತಿಯಲ್ಲಿ ತೆಗೆಯುವಂತೆ ಮಾಡಲು ನಮ್ಮ ಸಂಸ್ಥೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ವಿಶೇಷವಾಗಿ ಅರಣ್ಯ ಪ್ರದೇಶಗಳ ನಿವಾಸಿಗಳಾದ ಬುಡಕಟ್ಟು ಜನಾಂಗದವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ.

ಸಾವಿರಕ್ಕೂ ಅಧಿಕ ಜೇನು ಕೃಷಿಕರಿದ್ದಾರೆ

ಸಾವಿರಕ್ಕೂ ಅಧಿಕ ಜೇನು ಕೃಷಿಕರಿದ್ದಾರೆ

ರಾಜ್ಯದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಜೇನು ಕೃಷಿಕರಿದ್ದಾರೆ. ಇವರು ಪ್ರಮುಖವಾಗಿ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳು ಮತ್ತು ಸಸ್ಯ ಸಂಪತ್ತು ಹೆಚ್ಚಿರುವ ಪ್ರದೇಶಗಳಿಗೆ ಸೇರಿದವರು. ಕೊಡಗಿನಲ್ಲಿ ಜೇನುಕೃಷಿ ಅಭಿವೃದ್ಧಿಗೆಂದೇ ಹಲವಾರು ಜೇನು ಕೃಷಿಕರ ಸಹಕಾರ ಸಂಘಗಳಿವೆ. ಈ ಸಂಘಗಳ ಮೂಲಕವೇ ಜೇನುತುಪ್ಪ ಮಾರಾಟ ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತವೆ.

ಲ್ಯಾಂಡ್ ಸ್ಕೈರ್ ನಿರ್ದೇಶಕರಾದ ಸಂಜಯ್ ಪೈ

ಲ್ಯಾಂಡ್ ಸ್ಕೈರ್ ನಿರ್ದೇಶಕರಾದ ಸಂಜಯ್ ಪೈ

ಪತ್ರಿಕಾಗೋಷ್ಠಿಯಲ್ಲಿ ಲ್ಯಾಂಡ್ ಸ್ಕೈರ್ ನ್ಯೂಟ್ರಸಿಟಿಕಲ್ಸ್ ಪ್ರೈ ಲಿಮಿಟೆಡ್‍ನ ನಿರ್ದೇಶಕರಾದ ಸಂಜಯ್ ಪೈ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸಾದ್, ಬ್ರಾಂಡ್ ಅಂಬಾಸಡರ್ ಚಿತಾ ಯಜ್ಞೇಶ್ ಶೆಟ್ಟಿ ಪಾಲ್ಗೊಂಡಿದ್ದರು.

ಜೇನು ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಹಾಗೂ ಜೇನು ಸಾಕಾಣೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಈ 9036036333 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

English summary
Land Square Nutraceuticals to Promote Apiculture in Karnataka. To promote bee farming in the State, Land square Nutraceuticals and Honey Day Bee Farms have come up with innovative schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X