ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ನಮಗೆ ಭೂಮಿ ಕೊಡಿ- ಮಹಿಳಾ ರೈತ ವೇದಿಕೆಯಿಂದ ಹಕ್ಕೊತ್ತಾಯ

|
Google Oneindia Kannada News

ಕೃಷಿಯೇತರರಿಗೆ ಕೃಷಿ ಭೂಮಿ ಕೊಳ್ಳುವ ಅವಕಾಶ ಕಲ್ಪಿಸಲು ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರದ ನಡೆಗೆ ಭೂರಹಿತ ಕೃಷಿ ಕಾರ್ಮಿಕರು ಹಾಗೂ ಕೃಷಿಕರಿಗೆ ನಿರಾಸೆ ಹಾಗೂ ಸಿಟ್ಟು ತಂದಿದೆ ಎಂದು ಕರ್ನಾಟಕ ಮಹಿಳಾ ರೈತರ ಹಕ್ಕುಗಳ ವೇದಿಕೆ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆದಿದೆ.

Recommended Video

America helps India by delivering its first batch of ventilators | Oneindia Kannada

"ಯಾವ ಕೈಗಳು ಭೂಮಿ ಉಳುತ್ತವೆಯೋ ಆ ಕೈಗಳ ಕುಟುಂಬವೇ ರೈತ ಕುಟುಂಬ" ಎಂಬುದು ಹೌದಾದರೆ ಮಹಿಳೆಯರಷ್ಟು ಕೈ ಮಣ್ಣು ಮಾಡಿಕೊಳ್ಳುವವರು ಬೇರಾರೂ ಇಲ್ಲ. ಅಖಿಲ ಭಾರತ ಮಟ್ಟದಲ್ಲಿ ಶೇಕಡಾ 24ರಷ್ಟು ಪುರುಷರು ಭೂಮಿ ಹೊಂದಿದ್ದಾರೆ. ಕೇವಲ 4% ಗ್ರಾಮೀಣ ಮಹಿಳೆಯರು ಭೂಮಿಯನ್ನು ಹೊಂದಿದ್ದಾರೆ. ಇದಕ್ಕೆ ಕರ್ನಾಟಕದ ಅಂಕಿ ಅಂಶಗಳು ಹೊರತಾಗಿಲ್ಲ.

 ಮಹಿಳಾ ರೈತರಿಗೆ ಆದ್ಯತೆ ನೀಡಿಲ್ಲ

ಮಹಿಳಾ ರೈತರಿಗೆ ಆದ್ಯತೆ ನೀಡಿಲ್ಲ

ಕೃಷಿಯ ಎಲ್ಲಾ ಕೆಲಸಗಳಲ್ಲಿಯೂ ಮಹಿಳೆಯರು ಭಾಗಿಯಾಗಿದ್ದರೂ ಅವರಿಗೆ ಆಸ್ತಿಯಲ್ಲಿ ಪಾಲು ದಕ್ಕಿಲ್ಲ. ಮಹಿಳಾ ರೈತರಿಗೆ ವಿಶೇಷವಾಗಿ ದಲಿತ ಮತ್ತು ಆದಿವಾಸಿ ರೈತ ಮಹಿಳೆಯರಿಗೆ ಸರ್ಕಾರ ಎಂದಿಗೂ ಆದ್ಯತೆ ನೀಡಿಲ್ಲ.
ಈ ಅಂಕಿ ಅಂಶಗಳನ್ನು ಗಮನಿಸೋಣ...
* ಜಾಗತಿಕ ಮಟ್ಟದಲ್ಲಿ ಶೇಕಡಾ 66 ರಷ್ಟು ಗ್ರಾಮೀಣ ಪ್ರದೇಶದ ಕೆಲಸಗಳಲ್ಲಿ ಮಹಿಳೆಯರು ತೊಡಗಿದ್ದಾರೆ.
* ಪ್ರಪಂಚಕ್ಕೆ ಬೇಕಿರುವ ಆಹಾರದ ಶೇಕಡಾ 50ರಷ್ಟನ್ನು ಮಹಿಳೆಯರು ಪೂರೈಸುತ್ತಾರೆ.
* ಕೃಷಿ ಆದಾಯದ ಶೇಕಡಾ 10ರಷ್ಟು ಗಳಿಸುತ್ತಾರೆ. ಆದರೆ ಕೇವಲ ಶೇಕಡಾ 1ರಷ್ಟು ಭೂಮಿ ಹೊಂದಿದ್ದಾರೆ.

ಸಂದರ್ಶನ: ಭೂ ಸುಧಾರಣೆಯೋ, ಭೂ ಕಬಳಿಕೆಯೋ...?ಸಂದರ್ಶನ: ಭೂ ಸುಧಾರಣೆಯೋ, ಭೂ ಕಬಳಿಕೆಯೋ...?

 ಮಹಿಳೆಯರಿಗೆ ಭೂಮಿ ಸಿಗುವಂತೆ ಮಾಡಬೇಕು

ಮಹಿಳೆಯರಿಗೆ ಭೂಮಿ ಸಿಗುವಂತೆ ಮಾಡಬೇಕು

ಈಗಿರುವ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಯಾರು ಬೇಕಾದರೂ ಕೃಷಿ ಭೂಮಿ ಕೊಳ್ಳುವಂತೆ ಮಾಡುವ ಬದಲು ಮಹಿಳೆಯರಿಗೆ ಭೂಮಿ ಸಿಗುವಂತೆ ಮಾಡಬೇಕು. ಸಮುದಾಯದ ಜಮೀನುಗಳಿಗೆ ಮಹಿಳೆಯರಿಗೆ ಪ್ರವೇಶವಿರಬೇಕು. ಪಶು ಸಾಕಣೆ, ಗುಂಪು ಕೃಷಿ, ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ, ಒಳನಾಡು ಮೀನುಗಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಭೂರಹಿತ ಕುಟುಂಬಗಳಿಗೆ ತಲಾ 5 ಎಕರೆಯನ್ನು ಮಹಿಳೆಯರೊಂದಿಗೆ ಜಂಟಿಯಾಗಿ ಖಾತೆ ಮಾಡಿಕೊಡಬೇಕು.

"ಆರ್ ಅಶೋಕ್ ಮಾತು ಒಪ್ಪಲು ಸಾಧ್ಯವಿಲ್ಲ"

"ಭೂ ಸುಧಾರಣಾ ಕಾಯಿದೆಯಲ್ಲಿ ಕಠಿಣ ನಿಯಮಗಳಿದ್ದರೂ ಕೃಷಿಕರಲ್ಲದವರು ವಾಮ ಮಾರ್ಗ ಅನುಸರಿಸಿ ಜಮೀನು ಖರೀದಿಸುತ್ತಿದ್ದಾರೆ" ಹಾಗಾಗಿ ಕಾಯಿದೆಗೆ ತಿದ್ದುಪಡಿ ತರುತ್ತಿದ್ದೇವೆ ಎಂಬ ಸಚಿವ ಆರ್ ಅಶೋಕ್ ಅವರ ಮಾತು ಒಪ್ಪಲು ಸಾಧ್ಯವಿಲ್ಲ. ಇದು ವಾಮ ಮಾರ್ಗವನ್ನೇ ರಾಜಮಾರ್ಗ ಮಾಡುವ ಕೆಲಸದಂತೆ ಕಾಣುತ್ತಿದೆ.

ರಾಸಾಯನಿಕ ಕೀಟನಾಶಕಗಳು ಏಕೆ ಅವಶ್ಯಕ?; ವಿಜ್ಞಾನಿ ಡಾ.ಪಿ.ಚೌಡಪ್ಪ ವಿವರಣೆರಾಸಾಯನಿಕ ಕೀಟನಾಶಕಗಳು ಏಕೆ ಅವಶ್ಯಕ?; ವಿಜ್ಞಾನಿ ಡಾ.ಪಿ.ಚೌಡಪ್ಪ ವಿವರಣೆ

 ಮಹಿಳೆಯರಿಗೆ ಭೂಮಿ ನೀಡಲು ಆಗ್ರಹ

ಮಹಿಳೆಯರಿಗೆ ಭೂಮಿ ನೀಡಲು ಆಗ್ರಹ

ಈ ಹಿನ್ನೆಲೆಯಲ್ಲಿ ಮಹಿಳಾ ರೈತರ ಹಕ್ಕುಗಳ ವೇದಿಕೆ ಭೂ ಸುಧಾರಣಾ ಕಾಯಿದೆಗೆ ತರಲೆತ್ನಿಸುತ್ತಿರುವ ತಿದ್ದುಪಡಿಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾ, ಮಹಿಳೆಯರಿಗೆ ಭೂಮಿ ನೀಡಬೇಕೆಂದು ಆಗ್ರಹಿಸುತ್ತಿದೆ ಎಂದು ಇಂದಿರಾ ಕೃಷ್ಣಪ್ಪ, ಶಾರದಾ ಗೋಪಾಲ್, ಕವಿತಾ, ನೀಲಮ್ಮ ಮುಂತಾದವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ.

English summary
The Women's Farmers' Rights Forum has rejected the amendment to the Land Reform Act, demanding right of land for women
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X