ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಅರಮನೆ ನೋಡಲು ಲಾಲ್‌ ಬಾಗ್‌ಗೆ ಬನ್ನಿ

|
Google Oneindia Kannada News

ಬೆಂಗಳೂರು, ಆಗಸ್ಟ್ 6 : ಬೆಂಗಳೂರು ಅರಮನೆಯನ್ನು ಲಾಲ್ ಬಾಗ್‌ನಲ್ಲಿ ನೋಡಬಹುದಾಗಿದೆ. ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ ಆ.7ರಿಂದ 16ರ ತನಕ ನಡೆಯಲಿದ್ದು, ಲಕ್ಷ-ಲಕ್ಷ ಹೂಗಳಿಂದ ಬೆಂಗಳೂರು ಅರಮನೆಯನ್ನು ಲಾಲ್‌ ಬಾಗ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ತೋಟಗಾರಿಕೆ ಇಲಾಖೆ ನಿರ್ದೇಶಕ (ಪ್ರಭಾರ) ಎಚ್.ಎಸ್. ಶಿವಕುಮಾರ್ ಅವರು 202ನೇ ಫಲಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ಆ.7ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಣಿ ಪ್ರಮೋದಾ ದೇವಿ ಒಡೆಯರ್ ಮತ್ತು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. [ಕಬ್ಬನ್ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ]

lalbagh

ಬೆಂಗಳೂರು ಅರಮನೆ : ಸುಮಾರು 3 ಲಕ್ಷ ಡಚ್ ಗುಲಾಬಿ ಹೂಗಳಿಂದ ಬೆಂಗಳೂರು ಅರಮನೆಯನ್ನು ನಿರ್ಮಿಸಲಾಗಿದ್ದು, ಈ ಬಾರಿ ಪ್ರದರ್ಶನದ ಪ್ರಮುಖ ಆಕರ್ಷಣೆ ಇದಾಗಿದೆ. 45 ಅಡಿ ಉದ್ದ, 35 ಅಡಿ ಎತ್ತರ ಮತ್ತು 20 ಅಡಿ ಅಗಲದ ಅರಮನೆಯನ್ನು ಸಂಪೂರ್ಣವಾಗಿ ಹೂಗಳಿಂದ ನಿರ್ಮಾಣ ಮಾಡಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಅರಮನೆ ಮುಂಭಾಗದಲ್ಲಿರುತ್ತದೆ.

ಮರಳಿನಲ್ಲಿ ಕಲಾಂಗೆ ನಮನ : ಮೈಸೂರಿನ ಕಲಾವಿದೆ ಎಂ.ಎನ್. ಗೌರಿ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮರಳಿನ ಕಲಾಕೃತಿಯನ್ನು ನಿರ್ಮಾಣ ಮಾಡಿದ್ದಾರೆ. ಗಾಜಿನ ಮನೆಯ ಮೇಲ್ಭಾಗದಲ್ಲಿ ಇದನ್ನು ನೋಡಬಹುದಾಗಿದೆ.

ಆನ್‌ಲೈನ್‌ನಲ್ಲಿಯೂ ಟಿಕೆಟ್ ಲಭ್ಯ : ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಲು ಆನ್‌ಲೈನ್ ಮೂಲಕವೂ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. www.lalbaghflowershow.in ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ಲಾಲ್ ಬಾಗ್‌ನ 4 ಪ್ರವೇಶ ದ್ವಾರಗಳಲ್ಲಿ ಟಿಕೆಟ್ ವಿತರಣೆ ಮಾಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 40 ರೂ., ರಜಾ ದಿನಗಳಲ್ಲಿ 50 ರೂ., 12 ವರ್ಷದೊಳಗಿನ ಮಕ್ಕಳಿಗೆ ಎರಡೂ ದಿನ 10 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆ.14 ಮತ್ತು 15ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆ ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗಿದೆ.

ವಾಹನ ಎಲ್ಲಿ ಪಾರ್ಕ್ ಮಾಡಬಹದು : ಲಾಲ್ ಬಾಗ್‌ನ 4 ಪ್ರವೇಶ ದ್ವಾರಗಳಲ್ಲಿ ಸಾರ್ವಜನಿಕ ವಾಹನ ಪ್ರವೇಶ ನಿಷೇಧಿಸಲಾಗಿದೆ. ಆದರೆ, ಶಾಲಾ-ಕಾಲೇಜು ವಾಹನಗಳು ಮಾತ್ರ ಡಬ್ಬಲ್ ರೋಡ್ ಗೇಟ್‌ನಲ್ಲಿ ಪ್ರವೇಶಿಸಿ ಬಂಡೆಯ ಎಡಭಾಗದಲ್ಲಿ ನಿಲುಗಡೆ ಮಾಡಬಹುದು.

ಪ್ರದರ್ಶನಕ್ಕೆ ಆಗಮಿಸುವವರು ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ನಿಲ್ದಾಣ ಹಾಗೂ ಜೆ.ಸಿ. ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿಯಿರುವ ಬಿಬಿಎಂಪಿ ವಾಹನ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಬಹುದು. ಈ ಬಾರಿ ಲಾಲ್‌ಬಾಗ್ ರಸ್ತೆಯಲ್ಲಿರುವ ಅಲ್ ಅಮೀನ್ ಕಾಲೇಜಿನಲ್ಲೂ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

English summary
Independence day flower show will be held at the Lalbagh Bengaluru from August 7 to 16. Sand sculpture of Abdul Kalam and floral Bengaluru palace main attraction of the show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X