ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ನೂರರ ಸಂಭ್ರಮ

By Mahesh
|
Google Oneindia Kannada News

Bangalore Lalbagh Flower Show
ಬೆಂಗಳೂರು, ಆ.5: ಸಸ್ಯ ಕಾಶಿ ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪಪ್ರದರ್ಶನ ಆ.5ರಿಂದ ಆರಂಭಗೊಂಡು ಆ.15ರವರೆಗೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಈ ಬಾರಿ ದೆಹಲಿಯ 'ಬಹಾಯಿ ಮಂದಿರ" (ಲೋಟಸ್ ಟೆಂಪಲ್) ಹಾಗೂ ಕೊನಾರ್ಕ್‌ನ ಸೂರ್ಯ ದೇವಾಲಯದ ಬೃಹತ್ ಚಕ್ರಗಳ ಪ್ರತಿಕೃತಿಗಳು ಪ್ರಮುಖ ಆಕರ್ಷಣೆಯಾಗಲಿದೆ ಎಂದು ತೋಟಗಾರಿಕಾ ಇಲಾಕೆ ನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.

ನೂರನೇ ವರ್ಷಾಚರಣೆಯಲ್ಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ 260ಕ್ಕೂ ಹೆಚ್ಚು ವೈವಿಧ್ಯದ ಹೂಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆಕರ್ಷಕ ಅಂಥೋರಿಯಂ, ಆರ್ಕಿಡ್ಸ್, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಲಿಲ್ಲಿ, ಅಗ್ ಪಾಂಥಸ್, ಸೈಕ್ಲೊಮನ್, ಪೆಟೂನಿಯಾ ಸೇರಿದಂತೆ 100ಕ್ಕೂ ಹೆಚ್ಚು ವರ್ಣಾಕರ್ಷಕ ಹೂಗಳ ವಿನ್ಯಾಸದ ಜೋಡಣೆ ಗಮನ ಸೆಳೆಯಲಿದೆ. [ಗ್ಯಾಲರಿ]

ಆ.5ರಂದು ಮಧ್ಯಾಹ್ನ 3ಕ್ಕೆ ಮೇಯರ್ ಪಿ.ಶಾರದಮ್ಮ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಸದ ಅನಂತಕುಮಾರ್, ಶಾಸಕ ಡಾ.ಡಿ. ಹೇಮಚಂದ್ರಸಾಗರ್ ಮುಂತಾದವರು ಭಾಗವಹಿಸಲಿದ್ದಾರೆ.

ಆ.6 ಮತ್ತು 7ರಂದು ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಒಣ ಹೂವಿನ ಜೋಡಣೆ ಕಲೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಆಗಸ್ಟ್ 12ರಂದು ವಿಜೇತರೈಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಬಹುಮಾನ ವಿತರಿಸಲಿದ್ದಾರೆ.

ವಾಹನ ನಿಲುಗಡೆ: ಡಾ.ಎಂ.ಎಚ್.ಮರಿಗೌಡ ರಸ್ತೆ ಕಡೆಯಿಂದ ಬರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ಲಘು ವಾಹನಗಳು ಪ್ರವೇಶ ದ್ವಾರ -2ರ (ಕೆ.ಎಚ್.ರಸ್ತೆ) ಮುಖಾಂತರ ಪ್ರವೇಶಿಸಿ, ಇದೇ ಮಾರ್ಗದ ಮೂಲಕ ನಿರ್ಗಮಿಸಲು ಅವಕಾಶ ಕಲ್ಪಿಸಲಾಗಿದೆ. ಸಿದ್ದಾಪುರ ಕಡೆಯಿಂದ ಬರುವ ವಾಹನಗಳಿಗೆ ದ್ವಾರ-3ರ ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

English summary
Karnataka Horticulture Department is celebrating 100th year of Lalbagh Flower Show. Independence Day flower show start on Aug 5 and display variety of flora up to Aug.15. Lotus Temple of Delhi and Konark Wheel of Orissa are the main attraction in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X