ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬಿನ ದರ ಪುನರ್ ಪರಿಶೀಲಿಸಿ : ಕುರುಬೂರ್ ಶಾಂತ ಕುಮಾರ್

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂನ್ 29 : 'ಕಬ್ಬಿನ ಬೆಳೆಗೆ ನೀಡುತ್ತಿರುವ ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ ಬೆಲೆಯನ್ನು (ಎಫ್‍ಆರ್‌ಪಿ) ಪ್ರತಿ ಟನ್‌ಗೆ 2,300 ರೂ. ನಿಂದ 3,800ಕ್ಕೆ ಏರಿಸಬೇಕು. ಇಲ್ಲವಾದಲ್ಲಿ ಕಬ್ಬು ಬೆಳೆಯದೇ ರಜಾ ವರ್ಷ ಮಾಡಲಾಗುವುದು' ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಒನ್ ಇಂಡಿಯಾ ಜೊತೆ ಮಾತನಾಡಿದ ಕುರುಬೂರ್ ಶಾಂತಕುಮಾರ್ ಅವರು,'ಸಕ್ಕರೆ ಬೆಲೆ ಏರಿಕೆಯಾಗಿದೆ, ಕಬ್ಬಿನ ಉತ್ಪಾದನಾ ವೆಚ್ಚವೂ ಹೆಚ್ಚಿದೆ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಿಂದಿನ ವರ್ಷ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎಫ್ಆರ್‌ಪಿ ದರವನ್ನು ಹೆಚ್ಚಿಸಬೇಕು' ಎಂದು ಆಗ್ರಹಿಸಿದರು. [ಕಬ್ಬು ಬೆಳೆ ಇಳಿಕೆ, ಸಕ್ಕರೆ ಬೆಲೆ ಭಾರೀ ಏರಿಕೆ ಸಂಭವ]

kuruburu shantakumar

'ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 5 ರಂದು ಮೈಸೂರಿನಲ್ಲಿ ರಾಜ್ಯ ರೈತರ ಸಮಾವೇಶದಲ್ಲಿ ಎರಡು ವರ್ಷಗಳವರೆಗೆ ಕಬ್ಬು ಬೆಳೆಯದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ಆ ಎರಡು ವರ್ಷ ಬೇರೆ ಬೆಳೆಗಳನ್ನು ಬೆಳೆಯುತ್ತೇವೆ' ಎಂದು ಹೇಳಿದರು. [ಆನ್ ಲೈನ್ ಮಾರುಕಟ್ಟೆಯಲ್ಲಿ ಮಂಡ್ಯದ ಸಿಹಿ ಬೆಲ್ಲ]

ಬಿಜೆಪಿ ಮುಖಂಡರಿಗೆ ತರಾಟೆ : ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, 'ರಾಜ್ಯದ ಬಿಜೆಪಿ ಮುಖಂಡರು ತೆಂಗು ಹಾಗೂ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಬಿಜೆಪಿಯವರಿಗೆ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರು ಕಾಣುತ್ತಿಲ್ಲವೇಕೆ?' ಎಂದು ಪ್ರಶ್ನಿಸಿದರು. [ಕಾರ್ಖಾನೆ'ಸಕ್ಕರೆ' ಕಾಯಿಲೆಗೆ ಸರ್ಕಾರದ ಮದ್ದು]

'ಕೇಂದ್ರ ಸರ್ಕಾರ 41 ಬೆಳೆಗಳನ್ನು ಪ್ರಧಾನಿ ಫಸಲ್ ಭೀಮಾ ಯೋಜನೆಗೆ ಒಳಪಡಿಸಿದೆ. ಆದರೆ ಕಬ್ಬು ಮತ್ತು ರೇಷ್ಮೆ ಬೆಳೆಯನ್ನು ಕೈಬಿಟ್ಟಿದ್ದೇಕೆ? ಎಂದು ಪ್ರಶ್ನಿಸಿದ ಅವರು, ಈ ಎರಡೂ ಬೆಳೆಗಳನ್ನು ಭೀಮಾ ಯೋಜನೆಗೆ ಒಳಪಡಿಸಬೇಕು' ಎಂದು ಒತ್ತಾಯಿಸಿದರು.

'20 ಲಕ್ಷ ರೈತರಿಗೆ ಅನುಕೂಲವಾಗುವ ಬೆಳೆಸಾಲ ನೀತಿಯನ್ನು ಬದಲಾಯಿಸಬೇಕು. ಬೆಳೆ ಸಾಲದಲ್ಲಿ ರಿಯಾಯಿತಿ ಬಡ್ಡಿ ಸಾಲ ಯೋಜನೆಯಲ್ಲಿ ಕಬ್ಬು ಮತ್ತು ಬಾಳೆಯನ್ನು ಸೇರಿಸಿಕೊಳ್ಳಬೇಕು ಮತ್ತು ಸಾಲ ಮರುಪಾವತಿ ಅವಧಿಯನ್ನು 18 ತಿಂಗಳಿಗೆ ವಿಸ್ತರಿಸಬೇಕು' ಎಂದು ಆಗ್ರಹಿಸಿದರು.

'ಕಬ್ಬಿನ ಉತ್ಪನ್ನಗಳ ಲಾಭವನ್ನು ಅಂದಾಜಿಸಿ ಎಸ್ಎಪಿ ದರದಂತೆ ರೈತರಿಗೆ ನೀಡಬೇಕಾದ ಅಂತಿಮ ಕಂತಿನ ಹಣವನ್ನು ಕೂಡಲೇ ನೀಡಲು ಸಕ್ಕರೆ ಸಚಿವರು ಕ್ರಮಕೈಗೊಳ್ಳಬೇಕು. ಜೊತೆಗೆ ಎಫ್ಆರ್‌ಪಿ ದರವನ್ನು 2,300 ರಿಂದ 3,800ಕ್ಕೆ ಏರಿಸಬೇಕೆಂದರು' ಎಂದು ಒತ್ತಾಯಿಸಿದರು.

English summary
Karnataka Sugarcane Growers' Association President Kuruburu Shantakumar demanded for hike in Fair and Remunerative Price (FRP) for for sugarcane. Now FRP price fixed Rs 2,300 per ton.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X