ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬ್ಬು ಬೆಳೆಗಾರರ ಜೊತೆ ಕುಮಾರಸ್ವಾಮಿ ಮಾತುಕತೆ: ಬಾಕಿ ಪಾವತಿ ಭರವಸೆ

|
Google Oneindia Kannada News

ಬೆಂಗಳೂರು, ಜೂನ್ 05: ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಹೊಸದರಲ್ಲಿ ಭಾರಿ ಬಿರುಸಿನ ಹೋರಾಟ ನಡೆಸಿದ್ದ ಕಬ್ಬು ಬೆಳೆಗಾರರು ನಿನ್ನೆ ಮತ್ತೆ ಬೀದಿಗಿಳಿದು ತಮ್ಮ ದುಡಿಮೆಯ ಹಣಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಮೊದಲ ಸಂಪುಟ ಸಭೆಯಲ್ಲಿಯೇ ರೈತರಿಗೆ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರಮೊದಲ ಸಂಪುಟ ಸಭೆಯಲ್ಲಿಯೇ ರೈತರಿಗೆ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ

ನಿನ್ನೆ ಬೆಂಗಳೂರಿನಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಕಬ್ಬು ಬಾಕಿ ಹಣ ಪಾವತಿ ಸೇರಿದಂತೆ, ಷರತ್ತು ಸಾಲಮನ್ನಾಕ್ಕೆ ಆಗ್ರಹಿಸಿ ಅವರು ಪ್ರತಿಭಟನೆ ನಡೆಸಿದ್ದರು.

ದಾಳಿಂಬೆ ಬೆಳೆದು ಲಾಭದ ಸಿಹಿ ಸವಿದ ಕೊಪ್ಪಳದ ರೈತ ದಾಳಿಂಬೆ ಬೆಳೆದು ಲಾಭದ ಸಿಹಿ ಸವಿದ ಕೊಪ್ಪಳದ ರೈತ

ಪ್ರತಿಭಟನಾ ನಿರತ ರೈತರ ಮುಖಂಡರನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದ ಕುಮಾರಸ್ವಾಮಿ ಅವರು, ರೈತ ಮುಖಂಡರೊಡನೆ ಚರ್ಚೆ ನಡೆಸಿದರು.

Kumaraswamy talked to sugar cane farmers who protesting against government

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದ ಕುಮಾರಸ್ವಾಮಿ, ಅವರ ಎಲ್ಲ ಬೇಡಿಕೆಗಳನ್ನು 15 ದಿನಗಳ ಒಳಗಾಗಿ ಈಡೇರಿಸುವುದಾಗಿ ಭರವಸೆಯನ್ನು ನೀಡಿದರು.

ರಾಹುಲ್ ಗಾಂಧಿಯ ಒಂದೇ ಪತ್ರದಿಂದ ಕೇರಳ ರೈತರು ನಿರಾಳರಾಹುಲ್ ಗಾಂಧಿಯ ಒಂದೇ ಪತ್ರದಿಂದ ಕೇರಳ ರೈತರು ನಿರಾಳ

ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ ಹೊಸರದಲ್ಲಿ ಸಹ ಕಬ್ಬು ಬೆಳೆಗಾರರು ತೀವ್ರವಾದ ಹೋರಾಟ ಮಾಡಿದ್ದರು. ಕುಮಾರಸ್ವಾಮಿ ಅವರು ಸಹ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕರೆದು ಸಭೆ ನಡೆಸಿ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ಸೂಚಿಸಿದ್ದರು.

English summary
HD Kumaraswamy talked to sugar cane farmers leaders who protested against the government yesterday. Kumaraswamy promises to full fill their demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X