ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಂದಿದೆ ರೈತರ ಮಾಹಿತಿ ಕಣಜ 'ಕೃಷಿ ಮೇಳ': ಏನೇನು ವಿಶೇಷತೆ

|
Google Oneindia Kannada News

ಬೆಂಗಳೂರು, ನವೆಂಬರ್ 13: ಕರ್ನಾಟಕ ಸರ್ಕಾರ ಕೃಷಿ ಇಲಾಖೆ ಜಿಕೆವಿಕೆ ಸಹಯೋಗದೊಂದಿಗೆ ನಡೆಸುವ ಕೃಷಿ ಮೇಳವು ಈ ಬಾರಿ ನವೆಂಬರ್ 15ರಂದು ಉದ್ಘಾಟನೆಗೊಳ್ಳಲಿದೆ.

ಕೃಷಿ ಸಂಬಂಧಿ ಹಲವು ಇಲಾಖೆಗಳು ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಸಹಯೋಗದೊಂದಿಗೆ ಕೃಷಿ ಮೇಳವು ನವೆಂಬರ್ 15ರಿಂದ ನಾಲ್ಕು ದಿನಗಳು ನಡೆಯಲಿವೆ.

ಕೃಷಿ ವಿವಿಯಿಂದ ಇಬ್ಬರು ಕೃಷಿಕರಿಗೆ ಎಚ್‌ಡಿ ದೇವೇಗೌಡ ಹೆಸರಲ್ಲಿ ಪ್ರಶಸ್ತಿ ಕೃಷಿ ವಿವಿಯಿಂದ ಇಬ್ಬರು ಕೃಷಿಕರಿಗೆ ಎಚ್‌ಡಿ ದೇವೇಗೌಡ ಹೆಸರಲ್ಲಿ ಪ್ರಶಸ್ತಿ

ಈ ಬಾರಿಯ ಕೃಷಿ ಮೇಳವನ್ನು ರಾಜ್ಯಪಾಲರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದಂತಹ ವಾಜುಭಾಯಿವಾಲಾ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೃಷಿ ಸಚಿವ ಎನ್.ಹೆಚ್. ಶಿವಶಂಕರ ರೆಡ್ಡಿ ಹಾಗೂ ವಿವಿಯ ಕುಲಪತಿಗಳು ಹಾಗೂ ಉಪನ್ಯಾಸಕ ವರ್ಗ ಭಾಗವಹಿಸಲಿದ್ದಾರೆ.

ಕೃಷಿ ಮೇಳದ ವಿಶೇಷ ಆಕರ್ಷಣೆಗಳು

ಕೃಷಿ ಮೇಳದ ವಿಶೇಷ ಆಕರ್ಷಣೆಗಳು

ಇತ್ತೀಚೆಗೆ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ, ಸುಧಾರಿತ ಬೇಸಾಯ ಪದ್ಧತಿಗಳ ತಾಕುಗಳು , ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ , ಸಿರಿಧಾನ್ಯಗಳು ಹಾಗೂ ಮಹತ್ವ ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನ ಪ್ರಾತ್ಯಕ್ಷಿಕೆ,
ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಮೇಲ್ಫಾವಣಿ ನೀರಿನ ಕೊಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಸಾಕಣೆ ಹಾಗೂ ಮೀನು ಸಾಕಾಣೆ, ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಹವಾಮಾನ ವೈಪರೀತ್ಯ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ರೈತರಿಂದ - ರೈತರಿಗಾಗಿ ಚರ್ಚಾಗೋಷ್ಠಿ ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ

ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನವೇ ಹೈಲೆಟ್ ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನವೇ ಹೈಲೆಟ್

ಬಿಡುಗಡೆ ಆಗಲಿರುವ ಹೊಸ ತಳಿಗಳು

ಬಿಡುಗಡೆ ಆಗಲಿರುವ ಹೊಸ ತಳಿಗಳು

ಈ ಬಾರಿಯ ಕೃಷಿ ಮೇಳದಲ್ಲಿ ಜಿಕೆವಿಕೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ರಾಗಿ ಕೆ.ಎಂ.ಆರ್-630 ತಳಿ, ಸೂರ್ಯಕಾಂತಿ- ಕೆಬಿಎಸ್‍ಹೆಚ್-78 ತಳಿ, ಸೋಯಾಅವರೆ-ಕೆಬಿಎಸ್-23 ತಳಿ, ಅಕ್ಕಿ ಅವರೆ-ಕೆಬಿಆರ್-1 ತಳಿಗಳು ಬಿಡುಗಡೆ ಆಗಲಿವೆ.

ರೈತರ ಶ್ರಮವನ್ನು ಹಾಡಿ ಹೊಗಳಿದ ವಜುಭಾಯಿ ವಾಲಾರೈತರ ಶ್ರಮವನ್ನು ಹಾಡಿ ಹೊಗಳಿದ ವಜುಭಾಯಿ ವಾಲಾ

 ಪ್ರಶಸ್ತಿ ವಿತರಣೆ

ಪ್ರಶಸ್ತಿ ವಿತರಣೆ

ದೇವೇಗೌಡ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುವುದು. ಸಿ.ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ, ಎಂ.ಹೆಚ್.ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಕೆನರಾ ಬ್ಯಾಂಕ್ ಪ್ರಾಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿಗಳನ್ನು ಕೃಷಿ ಮೇಳದಲ್ಲಿ ವಿತರಿಸಲಾಗುವುದು. ಜೊತೆಗೆ ಹಲವು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ವಿತರಿಸಲಾಗುವುದು.

ಕೃಷಿ ವಸ್ತು ಪ್ರದರ್ಶನ:

ಕೃಷಿ ವಸ್ತು ಪ್ರದರ್ಶನ:

ಈ ಭಾರಿಯ ಕೃಷಿ ಮೇಳವು ಸುಮಾರು 650 ಕ್ಕೂ ಅಧಿಕ ಮಳಿಗೆಗಳಿಂದ ಕೂಡಿರುತ್ತದೆ. ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಗಳು, ಕರ್ನಾಟಕ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿ, ಹಣಕಾಸು ಸಂಸ್ಥೆಗಳು, ಕೃಷಿ ಪರಿಕರಗಳ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು, ಕೃಷಿ ಯಂತ್ರೋಪಕರಣಗಳು, ಇನ್ನು ಮುಂತಾದ ರೈತ ಪರ ಸಂಘ - ಸಂಸ್ಥೆ / ಇಲಾಖೆಗಳು ಭಾಗವಹಿಸಲಿವೆ.

ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನದ ಪ್ರಾತ್ಯಕ್ಷಿತೆ

ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನದ ಪ್ರಾತ್ಯಕ್ಷಿತೆ

ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನಗಳ ಬಗ್ಗೆ ಚರ್ಚೆ ಮತ್ತು ಪ್ರಾತ್ಯಕ್ಷಿಕೆ: ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನಗಳಾದ ಹನಿ ನೀರಾವರಿ, ತುಂತುರು ನೀರಾವರಿ, ಹಸಿರು ಮನೆ, ಪ್ಲಾಸ್ಟಿಕ್ ಹೊದಿಕೆ ಮತ್ತು ನೇರಳು ಮನೆ ಬೇಸಾಯದ ಬಗ್ಗೆ ಪ್ರಾತ್ಯಕ್ಷಿಯ ತಾಕುಗಳು ಮುಖ್ಯ ಆಕರ್ಷಣೆಯಾಗಿರುತ್ತವೆ. ಇತ್ತೀಚೆಗೆ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು / ವಿಜ್ಞಾನಿಗಳಿಂದ ಇಸ್ರೇಲ್ ಕೃಷಿ ಬಗ್ಗೆ ಮಾಹಿತಿ ಕೊಡಿಸಲಾಗುತ್ತದೆ.

ವಿಶೇಷ ಸವಲತ್ತುಗಳು

ವಿಶೇಷ ಸವಲತ್ತುಗಳು

ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ದಾಖಲಾತಿ ಸ್ಥಳಕ್ಕೆ ತಲುಪಲು ಕೃಷಿ ವಿಶ್ವವಿದ್ಯಾನಿಲಯದ ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ. ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ, ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ, ಉಚಿತ ಪ್ರವೇಶ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಬಿಡುಗಡೆ ಮಾಡಿರುವ ಕೃಷಿ ತಂತ್ರಜ್ಞಾನಗಳನ್ನು ಅದರಲ್ಲೂ ಮುಖ್ಯವಾಗಿ ನೂತನ ತಂತ್ರಜ್ಞಾನಗಳನ್ನು ರೈತ ಸಮುದಾಯಕ್ಕೆ ಪರಿಚಯಿಸಲು ಕೃಷಿ ಮೇಳವನ್ನು ಸಮರ್ಪಕವಾಗಿ ಆಯೋಜಿಸುತ್ತಾ ಬಂದಿರುತ್ತದೆ. ರೈತರಿಗಾಗಿ ಆಯೋಜಿಸಿರುವ ಈ ಕೃಷಿ ಮಾಹಿತಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಭಾಂದವರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕೃಷಿ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೃಷಿ ಇಲಾಖೆ ಮನವಿ ಮಾಡಿದೆ.

English summary
Krishi Mela 2018 inaugurating on November 15 by governor Vajubhai Vala it will end on November 19. Many exhibitions, lectures about agriculture and many more Agri related things going to happen on Krishi Mela-2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X