ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ, ರೈತ ಸಂಘದಿಂದ ರಾಜ್ಯವ್ಯಾಪಿ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 11: ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆ ತಡೆದು ನಿಯಂತ್ರಣಕ್ಕೊಳಪಡಿಸುವ ಅಗತ್ಯ ಕ್ರಮಗಳಿಗಾಗಿ ಒತ್ತಾಯಿಸಿ, ರಾಜ್ಯವ್ಯಾಪಿ ಪ್ರತಿಭಟನೆಗೆ ಕರ್ನಾಟಕ ಪ್ರಾಂತ ರೈತ ಸಂಘ ಕರೆ(KPRS) ಕರೆ ನೀಡಿದೆ.

ರೈತರ ಕೊಳ್ಳೆ ಹೊಡೆಯುವುದನ್ನು ತಡೆಯಲು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳನ್ನು ನಿರ್ಬಂಧಿಸಲು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಹಿಂದಿನಂತೆ ಬೆಲೆಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ, ಏಪ್ರಿಲ್ 12ರಂದು ಬೃಹತ್ ಪ್ರತಿಭಟನೆಯನ್ನು ರಾಜ್ಯದಾದ್ಯಂತ ನಡೆಸುವಂತೆ ರೈತರು ಹಾಗೂ ಎಲ್ಲ ಘಟಕಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡಿದೆ.

ರೈತರ ಆದಾಯಗಳನ್ನು ದ್ವಿಗುಣಗೊಳಿಸುವುದಾಗಿ ಬಹುದೊಡ್ಡ ಸುಳ್ಳುಗಳ ದಾಳಗಳನ್ನು ಉರುಳಿಸುತ್ತಾ, ಇರುವ ಅಲ್ಪ ಸ್ವಲ್ಪ ಆದಾಯವನ್ನು ಕಾರ್ಪೋರೇಟ್ ಲೂಟಿಗೆ ತೆರೆಯುವ ಕೇಂದ್ರ ಸರಕಾರದ ಕುತಂತ್ರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ.

KPRS Farmers to protest against Fertiliser price hike

ಕಳೆದ ಎರಡು- ಮೂರು ತಿಂಗಳುಗಳಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್, ನಾಫ್ತಾ ಬೆಲೆಗಳು ಕೃತಕವಾಗಿ ಹೆಚ್ಚಳಗೊಳ್ಳುವಂತೆ ಕರಭಾರವನ್ನು ಹೇರಿದೆ. ಇದರಿಂದಾಗಿ, ಸಾರಿಗೆ, ಸರಕು ಸಾಗಾಣೆ ವೆಚ್ಚ ಮತ್ತು ಟ್ರಾಕ್ಟರ್ ಉಳುಮೆಯ ಬಾಡಿಗೆಗಳು ವ್ಯಾಪಕ ಗೊಂಡಿವೆ. ಅದೇ ರೀತಿ,ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗಿವೆ. ಈ ಎಲ್ಲದರಿಂದಾಗಿ ರೈತರ ಜೀವನ ಮಟ್ಟವು ಮತ್ತಷ್ಠು ಕುಸಿತ ಗೊಂಡಿದೆ ಮತ್ತು ತಲಾ ಎಕರೆವಾರು ಕೃಷಿ ಉತ್ಪನ್ನಗಳ ವೆಚ್ಚದಲ್ಲಿ ಭಾರಿ ಏರಿಕೆ ಉಂಟಾಗಿದೆ. ಇದರ ಪರಿಣಾಮವಾಗಿ ಹೂಡಿಕೆಗಳ ಸಾಲದ ಬಡ್ಡಿಯೂ ಬೆಳೆದಿದೆ.

ಪರಿಸ್ಥಿತಿ ಹೀಗಿರುವಾಗ, ಗಾಯದ ಮೇಲೆ ಬರೆ ಎಳೆದಂತೆ, ರಸಾಯನಿಕ ಗೊಬ್ಬರಗಳ ಬೆಲೆಗಳನ್ನು ಶೇ 50 ರಷ್ಠು ಹೆಚ್ಚಿಸುವ ಇಂಗಿತವನ್ನು ಕಂಪನಿಗಳು ಪ್ರಕಟಿಸಿವೆ.

ಪ್ರತಿ 50 ಕೆಜಿ ಡಿಏಪಿ ಗೊಬ್ಬರದ ಬೆಲೆಯನ್ನು 1200 ರೂಗಳಿಂದ 1900 ರೂಗಳಿಗೆ ಮತ್ತು ಎನ್.ಪಿ ಕೆ ಎಸ್ ಗೊಬ್ಬರದ ಬೆಲೆಯನ್ನು 1185 ರೂಗಳಿಂದ 1800 ರೂಗಳಿಗೆ ಹೆಚ್ಚಿಸಲಾಗಿದೆ.

ಬೆಲೆಗಳ ಮೇಲಿನ ನಿಯಂತ್ರಣವನ್ನು ತೆಗೆದರೆ, ಕಂಪನಿಗಳ ಸ್ಪರ್ಧೆಯಲ್ಲಿ ರಸಾಯನಿಕ ಗೊಬ್ಬರಗಳ ಬೆಲೆಗಳು ಇಳಿಮುಖವಾಗಲಿವೆ ಎಂಬ ವಾದವನ್ನು ಮುಂದೆ ಮಾಡಿ ಈ ಹಿಂದೆ ಇದ್ದ ನಿಯಂತ್ರಣವನ್ನು ತಗೆದು, ಮುಕ್ತಗೊಳಿಸಲಾಯಿತು. ಆದರೇ ಈಗಿನ ಬೆಲೆ ಏರಿಕೆಯು ಆ ರೈತ ವಿರೋಧಿ ಪ್ರಚಾರವು ಹಸಿ ಹಸಿ ಸುಳ್ಳಾಗಿತ್ತು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ:
ಪ್ರತಿ ಎಕರೆ ಭತ್ತ ಬೆಳೆಗೆ ಕನಿಷ್ಠವೆಂದರೂ 10 ಚೀಲ ರಸಾಯನಿಕ ಗೊಬ್ಬರ ಬಳಸುವ ರೈತ, ಅದರಲ್ಲಿ ತಲಾ ಮೂರು ಚೀಲ ಈ ಎರಡು ರೀತಿಯ ಗೊಬ್ಬರಗಳನ್ನು ಬಳಸುತ್ತಾನೆಂದರೂ, ತಲಾ ಎಕರೆಗೆ ಡಿಎಪಿಗಾಗಿ 2100 ರೂ. ಹಾಗೂ ಎನ್.ಪಿ.ಕೆ. ಗಾಗಿ 1850 ರೂ. ಸೇರಿ ಒಟ್ಟು 4000 ರೂ. ಗಳು ಮತ್ತು ಅದರ ಬಡ್ಡಿ ಯನ್ನು ಹೆಚ್ಚುವರಿಯಾಗಿ ಹೂಡಬೇಕಾಗುತ್ತದೆ.

ಒಟ್ಟಾರೇ ಈ ಎಲ್ಲಾ ರೀತಿಯ ಬೆಲೆ ಏರಿಕೆಗಳು ತಲಾ ಎಕರೆ ಉತ್ಪಾದನಾ ವೆಚ್ಚವನ್ನು ಖಂಡಿತಾ ದುಪ್ಪಟ್ಟಿಗಿಂತ ಅಧಿಕವಾಗಿಸಲಿದೆ.

ಇದೆಲ್ಲವೂ, ಉತ್ಪಾದನಾ ವೆಚ್ಚವನ್ನು ವಿಪರೀತವಾಗಿ ಹೆಚ್ಚಿಸಿ, ಅಗತ್ಯ ಸಾಲ ಸೌಲಭ್ಯ ಮತ್ತು ಕನಿಷ್ಟ ಬೆಂಬಲ ಬೆಲೆ ದೊರೆಯದಂತೆ ಮಾಡಿ, ರೈತರನ್ನು ಸಾಲದ ಬಲೆಯಲ್ಲಿ ನೂಕಿ, ಕಾರ್ಪೋರೇಟ್ ಕಂಪನಿಗಳ ವಶಕ್ಕೆ ಕೃಷಿ ಮತ್ತು ಕೃಷಿ ಭೂಮಿಯನ್ನು ವರ್ಗಾಯಿಸುವ ನೀಚತಂತ್ರದ ಭಾಗವೆಂದು ಕಟುವಾಗಿ ವಿಮರ್ಶಿಸಿದೆ.

ಆದ್ದರಿಂದ, ರೈತರನ್ನು ಲೂಟಿಗೊಳಪಡಿಸುವ ಕಂಪನಿಗಳ ಲಾಭವನ್ನು ಹಲವು ಪಟ್ಟು ಹೆಚ್ಚಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ದುಷ್ಟ ಸಂಚನ್ನು ತೀವ್ರವಾಗಿ ಸೆಣಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಬೆಲೆ ಏರಿಕೆಯ ಹಿಂದಿನ ರಾಜಕೀಯವನ್ನು ವಿಶ್ಲೇಷಿಸಿದೆ.

English summary
KPRS Farmers unit called for massive protest across Karnataka against Fertiliser price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X