ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ ನಂತರ ನಂದಿನಿ ಹಾಲಿನ ದರ ಏರಿಕೆ!

ಪ್ರತಿ ಲೀಟರ್ ಹಾಲಿಗೆ 2 ರುಪಾಯಿ ಹೆಚ್ಚಳ ಮಾಡಲು ಕೆಎಂಎಫ್ ಗಂಭೀರ ಚಿಂತನೆ ನಡೆಸಿದೆ. ಪ್ರತಿ ಲೀಟರ್ ಗೆ 3 ರಿಂದ 4 ರು ಹೆಚ್ಚಳ ಮಾಡುವಂತೆ ರೈತರು ಬೇಡಿಕೆ ಸಲ್ಲಿಸಿದ್ದಾರೆ. ಏಪ್ರಿಲ್ ನಿಂದ ಹೊಸ ದರ ಜಾರಿಗೆ ಬರಲಿದೆ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 10: ಪ್ರತಿ ಲೀಟರ್ ನಂದಿನಿ ಹಾಲಿಗೆ 2 ರುಪಾಯಿ ಹೆಚ್ಚಳ ಮಾಡಲು ಕರ್ನಾಟಕ ಹಾಲು ಮಾರಾಟಗಾರರ ಒಕ್ಕೂಟ(ಕೆಎಂಎಫ್) ಗಂಭೀರ ಚಿಂತನೆ ನಡೆಸಿದೆ. ಪ್ರತಿ ಲೀಟರ್ ಗೆ 2 ರಿಂದ 3 ರು ಹೆಚ್ಚಳ ಮಾಡುವಂತೆ ರೈತರು ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಬೇಕಿದೆ.

ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ದರ ಹೆಚ್ಚಳ ಉಪ ಚುನಾವಣೆ ನಂತರ ಜಾರಿಗೆ ಬರುವ ಸಾಧ್ಯತೆಯಿದೆ.

ಪಶು ಸಂಗೋಪನಾ ಸಚಿವ ಎ ಮಂಜು ನೇತೃತ್ವದಲ್ಲಿ ನಡೆದ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆಯಲ್ಲಿ ಬೆಲೆ ಏರಿಕೆಗೆ ಭಾರಿ ಒತ್ತಡ ಕಂಡು ಬಂದಿತು. ಸಭೆ ನಂತರ ಮಾತನಾಡಿದ ಮಂಜು, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.[ಕೆಎಂಎಫ್ ನಂತೆ ಬ್ರಾಂಡೆಡ್ ಮಟನ್ ಸ್ಟಾಲ್ ಸ್ಥಾಪನೆ]

KMF likely to hike Nandini Milk price by Rs 2 by April

ತೀವ್ರ ಬರ ಇರುವುದರಿಂದ ಜಾನುವಾರುಗಳ ಸಾಕಣೆ ಸಮಸ್ಯೆ, ಹಿಂಡಿ, ಬೂಸಾ ಮೇವು ಪಶು ಆಹಾರ ದರ ಹೆಚ್ಚಳ, ಸಾಗಣೆ ವೆಚ್ಚ ಸೇರಿದಂತೆ ಹೈನುಗಾರಿಕೆ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರವನ್ನು 2 ರಿಂದ 3 ರುಪಾಯಿ ಹೆಚ್ಚಳ ಮಾಡುವಂತೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ರೈತರು ಕೆಎಂಎಫ್ ಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. [ಹಾಲು ಮಾರಾಟದಿಂದ ಬರುವ ಲಾಭ ರೈತರಿಗೆ ಸೇರಿದ್ದು, ಡೇರಿಗಳಿಗಲ್ಲ!]

ಟೋನ್ಡ್ ಹಾಲಿನ ದರ 33 ರು ಇದ್ದು 35 ರುಗೆ ಹೆಚ್ಚಳವಾಗಲಿದೆ. ಇದರಲ್ಲಿ 1.50 ರು ರೈತರಿಗೆ, ಒಕ್ಕೂಟಗಳ ನಿರ್ವಹಣೆಗೆ 50 ಪೈಸೆ ಕೊಡಲು ನಿರ್ಧರಿಸಲಾಗಿದೆ.

ಈಗ ನಂದಿನಿ ಬೂತ್‌ಗಳಲ್ಲಿ ಕೆಎಂಎಫ್ ನ 50ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿದೆ. ರಾಜ್ಯಾದ್ಯಂತ ಕೆಎಂಎಫ್ 800ಕ್ಕೂ ಅಧಿಕ ಬೂತ್‌ಗಳನ್ನು ಹೊಂದಿದ್ದು, ಬೆಂಗಳೂರು ನಗರದಲ್ಲಿಯೇ 400ಕ್ಕೂ ಅಧಿಕ ಬೂತ್‌ಗಳಿವೆ. ಎಲ್ಲವೂ ಅಂದುಕೊಂಡಂತೆ ಆದರೆ, ಕೆಲವೇ ದಿನಗಳಲ್ಲಿ ಅಪಾರ್ಟ್ ಮೆಂಟ್‌ನಲ್ಲಿಯೇ ನಂದಿನಿ ಹಾಲು ಸಿಗಲಿದೆ ಎಂದು ಸಚಿವರು ಹೇಳಿದರು.

English summary
The Karnataka Milk Federation is likely to hike the Nandini Milk price by Rs.2 per liter. KMF has to seek Karnataka govt approval to revise rates and new rates will be announced after April month after by election said KMF
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X