ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದಿಂದ ಮಾವು ಹೊತ್ತು ದೆಹಲಿಗೆ ಹೊರಟ ಕಿಸಾನ್ ರೈಲು

|
Google Oneindia Kannada News

ಕೋಲಾರ, ಜೂನ್ 29: ಕರ್ನಾಟಕದ ಕೋಲಾರ ಜಿಲ್ಲೆಯ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುತ್ತಿರುವ 'ಕಿಸಾನ್ ರೈಲ್'ಗೆ ಮಂಗಳವಾರ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

"ಅನ್ನದಾತ ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ 'ಕಿಸಾನ್ ರೈಲು' ಮಹತ್ವದ ಪಾತ್ರ ವಹಿಸುತ್ತಿದ್ದು, ನಮ್ಮ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,'' ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.

ಬೇಗ ಕೆಟ್ಟುಹೋಗುವ ಕೃಷಿ ಉತ್ಪನ್ನಗಳನ್ನು ಉತ್ಪಾದನೆಯ ಸ್ಥಳದಿಂದ ದೇಶದ ವಿವಿಧ ಭಾಗಗಳಿಗೆ ಅಡಚಣೆ ಇಲ್ಲದೆ ಸಾಗಣೆ ಮಾಡಲು ಅನುಕೂಲ ಕಲ್ಪಿಸುವುದಕ್ಕಾಗಿ 'ಕಿಸಾನ್ ರೈಲು' ಪ್ರಾರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21ರ ಬಜೆಟ್‌ನಲ್ಲಿ ಘೋಷಿಸಿದ್ದರು.

Kolar: Kisan Rail Carrying 250 Tonnes Of Mango From Chintamani To Delhi

ಭಾರತದ ಸಾಗಣೆ ಕ್ಷೇತ್ರದಲ್ಲಿಯೇ ಅತ್ಯಂತ ಉತ್ತಮವಾದ ಸಂಪನ್ಮೂಲಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ರೈಲು ಸಂಪರ್ಕ ಜಾಲವನ್ನು ಉಪಯೋಗಿಸಿ ರೈತರ ಆದಾಯವನ್ನು ಹೆಚ್ಚಿಸುವ ಕ್ರಮವಾಗಿ ರೈಲ್ವೆ ಸಚಿವಾಲಯ ಆಗಸ್ಟ್ 2020ರಲ್ಲಿ ಕಿಸಾನ್ ರೈಲು ಅನ್ನು ಪರಿಚಯಿಸಿದೆ.

ಶೀಘ್ರವಾಗಿ ಕೆಟ್ಟುಹೋಗುವ ಕೃಷಿ ಉತ್ಪನ್ನಗಳಾದ ಹಾಲು, ಮಾಂಸ, ಮೀನು, ಹಣ್ಣುಗಳು ಮತ್ತು ತರಕಾರಿಗಳು ಇತ್ಯಾದಿಯನ್ನು ರಿಯಾಯಿತಿ ದರದಲ್ಲಿ ಸಾಗಣೆ ಮಾಡಲು ಮತ್ತು ದೇಶದಲ್ಲಿ ಇದುವರೆಗೆ ಸಂಪರ್ಕರಹಿತವಾಗಿದ್ದ ಮಾರುಕಟ್ಟೆಗಳನ್ನು ತಲುಪಲು ಇದರಿಂದ ರೈತರಿಗೆ ಅನುಕೂಲವಾಗಿದೆ.

Kolar: Kisan Rail Carrying 250 Tonnes Of Mango From Chintamani To Delhi

ಕಿಸಾನ್ ರೈಲ್‌ನ ವೈಶಿಷ್ಟ್ಯತೆ
1. ಹಣ್ಣುಗಳು ಮತ್ತು ತರಕಾರಿಗಳ ಸಾಗಾಣಿಕೆಗಾಗಿ ಸಾಗಣೆ ದರದಲ್ಲಿ ಶೇ.50ರಷ್ಟು ಸಬ್ಸಿಡಿ. (Operation Greens- Top to Tatal ಯೋಜನೆ ಅಡಿಯಲ್ಲಿ ಆಹಾರ ಸಂಸ್ಕರಣೆ ಕೈಗಾರಿಕಾ ಸಚಿವಾಲಯವು ಇದನ್ನು ಭರಿಸುವುದು)

2. ದೂರದ, ದೊಡ್ಡ ಮತ್ತು ಅಧಿಕ ಲಾಭದಾಯಕ ಮಾರುಕಟ್ಟೆಗಳನ್ನು ತಲುಪಲು ರೈತರಿಗೆ ಅನುಕೂಲ.

3. ತ್ವರಿತ ರವಾನೆ ಸೌಲಭ್ಯದಿಂದ ಸಾಗಣೆ ಸಮಯದಲ್ಲಿ ಸರಕುಗಳಿಗೆ ಕನಿಷ್ಠ ಹಾನಿ.

Kolar: Kisan Rail Carrying 250 Tonnes Of Mango From Chintamani To Delhi

4. ನಿಗದಿತ ಸಮಯದ ರೈಲುಗಳಲ್ಲಿ ವಿವಿಧ ಪದಾರ್ಥಗಳಲ್ಲಿ ವಿಭಿನ್ನ ರವಾನೆದಾರರು ಮತ್ತು ವಿಭಿನ್ನ ಗ್ರಾಹಕರು ಬಹು ನಿಲುಗಡೆ ವ್ಯವಸ್ಥೆಯೊಡನೆ ಸಾಗಣೆ ಮಾಡುವ ಸೌಲಭ್ಯ.

ನೈಋತ್ಯ ರೈಲ್ವೆಯು 19ನೇ ಜೂನ್ 2021ರಿಂದ ಐದು ಕಿಸಾನ್ ರೈಲು ಸೇವೆಗಳನ್ನು ಪ್ರಾರಂಭಿಸಿದೆ. ಸುಮಾರು 1250 ಮೆಟ್ರಕ್ ಟನ್‌ಗಳ (ರೈಲು ಒಂದರಲ್ಲಿ 250) ಮಾವು ಸಾಗಣೆ ಮಾಡಿದೆ. ಬೇಡಿಕೆಯ ಮೇಲೆ ಅವಲಂಬಿತವಾಗಿ ಮಾವು ಸಾಗಣೆಗೆ ಪ್ರತೀ 2- 3 ದಿನಗಳಲ್ಲಿ ಕನಿಷ್ಠ 1 ಕಿಸಾನ್ ರೈಲು ಓಡಿಸಲು ಎಸ್‌ಡಬ್ಲ್ಯೂಆರ್ ಉದ್ದೇಶಿಸಿದೆ.

English summary
CM Yediyurappa a green signal for Kisan Rail, which is carrying 250 tonnes of mango from Chintamani to New Delhi on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X