• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತ ನಾಯಕರ ಅಕಾಲಿಕ ನಿಧನ: ಕರ್ನಾಟಕ ಪ್ರಾಂತ ರೈತ ಸಂಘ ಕಂಬನಿ

|
Google Oneindia Kannada News

ಗದಗ, ಜುಲೈ 22: ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಾಧ್ಯಕ್ಷರಾದ ರಾಮು ಹಾಗೂ ಹಿರಿಯ ಉಪಾಧ್ಯಕ್ಷ ಜಿ.ಟಿ. ರಾಮಸ್ವಾಮಿ ನಿಧನರಾಗಿರುವುದು ಅಘಾತಕಾರಿ ಹಾಗೂ ರಾಜ್ಯದ ರೈತ ಚಳುವಳಿಗೆ ಆದ ನಷ್ಟ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ನರಗುಂದ ರೈತ ಬಂಡಾಯ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಆದ ರಸ್ತೆ ಅಪಘಾತದಿಂದ ಈ ಇಬ್ಬರೂ ರೈತ ನಾಯಕರು ಮೃತರಾಗಿದ್ದಾರೆ. ರಾಜ್ಯ ರೈತ ಚಳವಳಿಯ ಸಕ್ರಿಯ ಮುಖಂಡರನ್ನು ಕಳೆದುಕೊಂಡಂತಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ತನ್ನ ಅಪಾರ ದುಃಖ ವ್ಯಕ್ತಪಡಿಸಿದೆ.

   ಮೈತ್ರಿ ಸರ್ಕಾರ ಪತನ ಮಾಡಿದ ದಿನದಿಂದಲೇ ಇವೆಲ್ಲ ಶುರುವಾಯ್ತು | Oneindia Kannada

   "ನಿರಂತರವಾಗಿ ರೈತ ಹೋರಾಟದಲ್ಲಿ ಹಾಗೂ ಕೃಷಿ ಕಾಯ್ದೆಗಳ ವಿರುದ್ಧದ ಸಂಯುಕ್ತ ರೈತ ಆಂದೋಲನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಕ್ರಿಯರಾಗಿದ್ದ ಈ ಇಬ್ಬರೂ ಹಿರಿಯ ನಾಯಕರ ಸಾವಿನಿಂದ ಅಘಾತಕ್ಕೆ ಒಳಗಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸಮಿತಿಗೆ ಹಾಗೂ ಅಪಾರ ಬಂಧು ಬಳಗ ಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿಯು ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದೆ.'' ಎಂದು ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.

   English summary
   Karnataka Provincial Farmer's Association Condolence to Karnataka leaders killed in road accident.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X