ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಭತ್ತ, ರಾಗಿ, ಜೋಳ, ತೊಗರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 08: ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವ ಕುರಿತು ಇಂದು ಸಚಿವ ಸಂಪುಟದ ಉಪಸಮಿತಿ ಸಭೆ ನಡೆಯಿತು.

2020-21 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಭತ್ತ ಖರೀದಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಚಿವರಾದ ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಎಸ್.ಟಿ.ಸೋಮಶೇಖರ್, ಪ್ರಭು ಚೌವಾಣ್, ಗೋಪಾಲಯ್ಯ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಭತ್ತ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 25 ಕ್ವಿಂಟಾಲ್‌ ನಂತೆ ಗರಿಷ್ಟ ಪ್ರತಿ ರೈತರಿಂದ 75 ಕ್ವಿಂಟಾಲ್‌ ನಿಗದಿಪಡಿಸುವಂತೆ ತೀರ್ಮಾನಿಸಲಾಯಿತು.

Karnataka Govt Fixed Minimum Support Price For Paddy, Millet And White Corn Crops

ಈ ವರ್ಷದಲ್ಲಿ ಕೇಂದ್ರ ಸರ್ಕಾರವು 1,10 ಲಕ್ಷ ಮೆಟ್ರಿಕ್‌ ಟನ್‌ ಭತ್ತವನ್ನು ಖರೀದಿ ಮಾಡಲು ಅನುಮತಿ ನೀಡಿದೆ. ಹೆಚ್ಚುವರಿಯಾಗಿ ಇನ್ನೂ 1 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಪ್ರಮಾಣಕ್ಕೆ ಅಂದರೆ ಒಟ್ಟು ಸುಮಾರು 2.10 ಲಕ್ಷ ಟನ್ ನಷ್ಟು ಭತ್ತವನ್ನು ಖರೀದಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಯಿತು.

ಬೆಲೆ ಎಷ್ಟು?
ಭತ್ತ ಸಾಮಾನ್ಯ: 1868 ರೂ. (ಪ್ರತಿ ಕ್ವಿಂಟಾಲ್ ಗೆ)
ಭತ್ತ ಗ್ರೇಡ್ ಎ: 1888 ರೂ. (ಪ್ರತಿ ಕ್ವಿಂಟಾಲ್ ಗೆ)

ಪ್ರತಿ ಕ್ವಿಂಟಾಲ್ ಗೋಧಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರಪ್ರತಿ ಕ್ವಿಂಟಾಲ್ ಗೋಧಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ತೊಗರಿ: ಉತ್ತರ ಕರ್ನಾಟಕದ ಸಾಮಾನ್ಯವಾಗಿ ಬೆಳೆಯುವ ಬೆಳೆಯಾದ ತೊಗರಿ ಖರೀದಿಗೆ ರೈತರ ನೋಂದಣಿಯನ್ನು ಡಿಸೆಂಬರ್‌ 15 ರಿಂದ ಪ್ರಾರಂಭಿಸಲು ಮತ್ತು ಖರೀದಿ ಪ್ರಕ್ರಿಯೆಯನ್ನು ಜನವರಿ 1 ರಿಂದ ಪ್ರಾರಂಭಿಸಲು ನಿರ್ಧರಿಸಲಾಯಿತು. ಖರೀದಿ ಅವಧಿ 90 ದಿನಗಳು.

ಪ್ರತಿ ಎಕರೆಗೆ ಗರಿಷ್ಟ 7.5 ಕ್ವಿಂಟಾಲ್ ಮತ್ತು ಗರಿಷ್ಟ ಒಟ್ಟು 20 ಕ್ವಿಂಟಾಲ್ ವರೆಗೆ ಒಬ್ಬ ರೈತರಿಂದ ಖರೀದಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 6 ಸಾವಿರ ರೂ. ದರವನ್ನು ನಿಗದಿ ಮಾಡಲಾಗಿದೆ.

ರಾಗಿ ಮತ್ತು ಬಿಳಿಜೋಳ: ರಾಗಿ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್‌ ನಂತೆ ಗರಿಷ್ಟ ಪ್ರತಿ ರೈತರಿಂದ 50 ಮಿತಿ ಕ್ವಿಂಟಾಲ್ ನಿಗದಿಪಡಿಸಿರುವುದನ್ನು ಮುಂದುವರೆಸುವಂತೆ ತೀರ್ಮಾನಿಸಲಾಗಿದೆ.

ಬಿಳಿಜೋಳ ಖರೀದಿಗೆ ಮುಂಗಾರು ಪ್ರಮಾಣ 4000 ಮೆಟ್ರಿಕ್ ಟನ್‌ ಈಗಾಗಲೇ ನಿಗದಿಯಾಗಿದ್ದು, ಇದನ್ನು 1 ಲಕ್ಷ ಮೆಟ್ರಿಕ್‌ ಟನ್‌ ಗೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.

ರಾಗಿ ಮತ್ತು ಬಿಳಿಜೋಳ ಖರೀದಿಗಾಗಿ ರೈತರ ನೋಂದಣಿಯನ್ನು ತಕ್ಷಣದಿಂದಲೇ ಆರಂಭಿಸುವಂತೆ ಹಾಗೂ ಖರೀದಿಯನ್ನು ಇದೇ ಡಿಸೆಂಬರ್‌15 ರಿಂದ ಆರಂಭಿಸಲು ನಿರ್ಧರಿಸಲಾಯಿತು.

ಬಿಳಿಜೋಳ ಖರೀದಿ ಪ್ರಮಾಣದ ಮಿತಿಯನ್ನು ಪ್ರತಿ ಎಕರೆಗೆ 15 ಕ್ವಿಂಟಾಲ್‌ ನಂತೆ ಗರಿಷ್ಟ ಪ್ರತಿ ರೈತರಿಂದ 75 ಕ್ವಿಂಟಾಲ್‌ ಮಿತಿ ನಿಗದಿಪಡಿಸಿರುವುದನ್ನು ಮುಂದುವರೆಸುವಂತೆ ನಿರ್ಧಾರ ಕೈಗೊಳ್ಳಲಾಯಿತು.

ಬೆಲೆ ಎಷ್ಟು?
ರಾಗಿ: ರೂ. 3295 (ಪ್ರತಿ ಕ್ವಿಂಟಾಲ್ ಗೆ)
ಬಿಳಿ ಜೋಳ ಹೈಬ್ರಿಡ್: 2,620 ರೂ. (ಪ್ರತಿ ಕ್ವಿಂಟಾಲ್ ಗೆ)
ಬಿಳಿ ಜೋಳ ಮಾಲ್ದಂಡಿ: 2,640 ರೂ. (ಪ್ರತಿ ಕ್ವಿಂಟಾಲ್ ಗೆ)

ಶೇಂಗಾ: ಶೇಂಗಾ ಪ್ರಕ್ರಿಯೆಯಲ್ಲಿ 173 ರೈತರು ಮಾತ್ರ ಈವರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 5,275 ರೂ. ದರವನ್ನು ನಿಗದಿ ಮಾಡಲಾಗಿದೆ.

ಹೆಸರುಕಾಳು: ರೈತರಿಗೆ ಮುಂದೆ ಅನುಕೂಲ ಕಲ್ಪಿಸಲು ಪ್ರತಿ ರೈತರಿಂದಲೂ ಗರಿಷ್ಟ 20 ಕ್ವಿಂಟಾಲ್ ವರೆಗೆ ಖರೀದಿಸಲು ನಿರ್ಧಾರಿಸಲಾಯಿತು. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು.

ಉದ್ದು: ಉದ್ದಿನ ಖರೀದಿ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದರೂ ಹೆಚ್ಚಿನ ಆವಕಗಳು ಬಂದಿರುವುದಿಲ್ಲ. ಮುಂದಿನ ವರ್ಷದಿಂದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿಯೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು.

English summary
Karnataka Government raised Minimum Support Price For Paddy, Millet And White Corn Crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X