ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಜನವರಿ 19: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಕೃಷಿ ಸಚಿವ ಬಿ.ಸಿ. ಪಾಟೀಲರೊಂದಿಗೆ ಸಮಿತಿಯಲ್ಲಿ ಚರ್ಚಿಸಿ ನೀಡಿದ ಭರವಸೆಯಂತೆ "ಸೆಕೆಂಡರಿ ಅಗ್ರಿಕಲ್ಚರ್' ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದೆ.

ಕಳೆದ 2021 ಆಗಸ್ಟ್ 25ರಂದು ಸೆಕೆಂಡರಿ ಅಗ್ರಿಕಲ್ಚರ್ ಸ್ಥಾಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಕೇಂದ್ರದ ರೈತರ ಆದಾಯ ದ್ವಿಗುಣಗೊಳಿಸುವ ಸಮಿತಿಯ ಮುಖ್ಯಸ್ಥರೊಂದಿಗೆ ಸಮಿತಿ ಸಭೆ ನಡೆಸಿದ್ದು, ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಸರ್ಕಾರ ಕೃಷಿ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ 13 ಜನರ ಸದಸ್ಯರನ್ನೊಳಗೊಂಡ ಸಮಿತಿ "ಸೆಕೆಂಡರಿ ಅಗ್ರಿಕಲ್ಚರ್' ನಿರ್ದೇಶಾನಲಯ ಸ್ಥಾಪಿಸಿ ಆದೇಶಿಸಲಾಗಿದೆ.

"ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ಯ್ರಾಂಡ್ ಮೂಲಕ ಮಾರುಕಟ್ಟೆ ಕಲ್ಪಿಸುವುದು ಸೆಕೆಂಡರಿ ಅಗ್ರಿಕಲ್ಚರ್‌ನ ಮುಖ್ಯ ಧ್ಯೇಯೋದ್ದೇಶವಾಗಿದೆ,'' ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

Karnataka Government Established of the Directorate of Secondary Agriculture

ಏನಿದು ಸೆಕೆಂಡರಿ ಅಗ್ರಿಕಲ್ಚರ್?
ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಪ್ರಮಾಣದಲ್ಲಿ ಇರುವುದು ಸೆಕೆಂಡರಿ ಕೃಷಿಯಾಗಿದ್ದು, ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ ಹಾಗೂ ಕಚ್ಚಾ ವಸ್ತುಗಳನ್ನು ಮಾನವ ಶಕ್ತಿ ಕೌಶಲಗಳನ್ನು ಮೂಲವಾಗಿ ಸದಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳನ್ನು 'ಸೆಕೆಂಡರಿ ಕೃಷಿ'ಯಡಿ ಪರಿಗಣಿಸಬಹುದಾಗಿದೆ.

ಸ್ಥಳೀಯವಾಗಿ ಉತ್ಪಾದಿಸಲಾದ ಕಚ್ಚಾ ವಸ್ತುವು ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಸಂಸ್ಕರಣೆಗೆ ಒಳಗಾಗಿದ್ದರೆ ಮತ್ತು ಅಂತಹ ಕಚ್ಚಾವಸ್ತುಗಳಿಂದ ಮೌಲ್ಯವರ್ಧಿತಗೊಳಿಸುವ ಪ್ರಾಥಮಿಕ ಉತ್ಪಾದನೆಯನ್ನು ಉದ್ಯಮಕ್ಕೆ ಸರಬರಾಜು ಮಾಡಿದರೆ ಅದನ್ನು ಸೆಕೆಂಡರಿ ಕೃಷಿಗೆ ಪರಿಗಣಿಸಬಹುದಾಗಿದೆ.

ಜೇನು ಸಾಕಾಣೆ, ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಣೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ. ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ/ ಕಚ್ಛಾ ವಸ್ತುಗಳನ್ನು ಮಾನವ ಶಕ್ತಿ, ಕೌಶಲ್ಯಗಳನ್ನು ಮೂಲವಾಗಿ ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿವೆ.

ರೇಸ್ ಕುದುರೆಗಳ ಸಾಕಣೆ, ವನ್ಯಜೀವಿ ಮೀಸಲು ಪ್ರದೇಶಗಳ ಅಭಿವೃದ್ಧಿ, ದೊಡ್ಡ ಔಷಧೀಯ ಮತ್ತು ಕೃಷಿ ರಾಸಾಯನಿಕ ಉದ್ಯಮಗಳು, ದೊಡ್ಡ ಕೃಷಿ ಕೈಗಾರಿಕೆಗಳನ್ನು ಸೆಕಂಡರಿ ಅಗ್ರಿಕಲ್ಚರ್ ಎಂದು ಪರಿಗಣಿಸಲಾಗದು.

ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ತ್ಪನ್ನ ಮತ್ತು ಉಪಉತ್ಪನ್ನಗಳ ಕಚ್ಚಾ ವಸ್ತುವಾಗಿ ಬಳಸಿಕೊಂಡು ಉತ್ಪಾದಕ ಚಟುವಟಿಕೆ ಮಾಡುವುದು. ಸ್ಥಳೀಯವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗಾಗೊ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯಮ ಚಟುವಟಿಕೆ ಮಾಡುವುದು. ಎಂ.ಎಸ್.ಎಂ.ಇ ಕಾಯಿದೆ 2006 ಅಡಿಯಲ್ಲಿ ವರ್ಗೀಕರಿಸಲಾದ ಸಣ್ಣ ಅಥವಾ ಮಧ್ಯಮ ಉದ್ಯಮಗಳನ್ನು ಅಭಿವೃದ್ಧಿಪಡಿಸುವುದು.

ಸಾವಯವ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂವು ಅರಣ್ಯ ಕೃಷಿ ಬೆಳೆಗಳ ನರ್ಸರಿ, ಜೈವಿಕ ಕೀಟನಾಶಕಗಳ ತಯಾರಿಕೆ, ನೀರು ಮತ್ತು ಮಣ್ಣು ಪರೀಕ್ಷೆ, ಪಶು ಆಹಾರ ಮೇವು ಉತ್ಪಾದನೆ ಇತ್ಯಾದಿಗಳ ಉತ್ಪಾದಿತ ಬೆಳೆಗಳ ಮೌಲ್ಯವರ್ಧನೆ ಮಾಡುವುದು. ಕಟಾವು ಆದ ನಂತರ ಹೂವು, ಹಣ್ಣು, ಸಾಂಬಾರು ಪದಾರ್ಥಗಳ ಇತ್ಯಾದಿಗಳನ್ನು ಪೂರ್ವಸಿದ್ಧತೆಗೊಳಿಸಿ ಮಾರುಕಟ್ಟೆಗೆ ತಲುಪಿಸುವುದು. ಅತಿಸಣ್ಣ, ಸಣ್ಣ ಉದ್ದಿಮೆಗಳಾದ ಉಪ್ಪಿನಕಾಯಿ, ಜಾಮ್ ತಯಾರಿಕೆ ಅರಿಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು, ಅಗ್ರಿ ಟೂರಿಸಂ, ಆಯುಷ್ ಮೆಡಿಸಿನ್ಸ್, ನೇಯ್ಗೆ ಉತ್ಪನ್ನಗಳು, ಸುಗಂಧ ದ್ರವ್ಯ, ಡೈಗಳನ್ನು ಇತ್ಯಾದಿ ಮೌಲ್ಯವರ್ಧನೆ ಕೇಂದ್ರಿತ ಚಟುವಟಿಕೆಗಳನ್ನು ಮಾಡುವುದು.

ಸೆಕೆಂಡರಿ ಅಗ್ರಿಕಲ್ಚರ್ ಅಡಿ ಜೇನು ಸಾಕಾಣೆ, ಬೇವಿನ ಉತ್ಪನ್ನಗಳು, ಕಾರ್ನ್ ಪೌಡರ್ ತಯಾರಿಕೆ, ಹೈಡ್ರೋಪೋನಿಕ್ಸ್, ಕೈತೋಟ, ಅಡಿಕೆ ಹಾಳೆ ಉತ್ಪನ್ನಗಳು, ಅಲೊವೆರಾ ಉತ್ಪನ್ನಗಳು, ಬಿದಿರು ಉತ್ಪನ್ನಗಳು, ಅಂಟು ಉತ್ಪಾದನೆ, ರೇಷ್ಮೆ ಉತ್ಪನ್ನಗಳು, ಕುರಿಮರಿ ಹೊಸ ತಳಿ ಸಾಕಣೆ, ಹೋರಿ ಸಾಕಣೆ, ಡಯಾಂಚ ಬೆಳೆಸುವ ಮೂಲಕ ಪರ್ಯಾಯ/ಪೂರಕ ಉದ್ಯಮಗಳಿಗೆ ಉತ್ತೇಜಿಸುವುದು.

Recommended Video

ಅಪರ್ಣಾ BJP ಸೇರ್ಪಡೆಯಿಂದ ನಮ್ಮ ಪಕ್ಷದ ಸಿದ್ಧಾಂತ ಅಲ್ಲೂ ಹರಡುತ್ತೆ ಎಂದ Akhilesh Yadav | Oneindia Kannada

ಹತ್ತಿ ಬೆಳೆ ಉಳಿಕೆಯ ಉತ್ಪನ್ನಗಳು, ಹತ್ತಿ, ಭತ್ತದ ಉಳಿಕೆಯಿಂದ ಪೈಬರ್ ಬೋರ್ಡ್ ತಯಾರಿಸುವುದು, ಕತ್ತಾಳೆ ಬಾಳೆ ನಾರಿನ ಉತ್ಪನ್ನಗಳು, ಅಡಿಕೆ ಹಾಳೆ ಉತ್ಪನ್ನಗಳು, ಬಯೋಗ್ಯಾಸ್ ಉತ್ಪಾದನೆ, ಯೂರಿಯಾ ಲೇಪಿಸಿ ಮೇವಿನ ಬ್ಲಾಕ್‌ಗಳ ತಯಾರಿಕೆ, ಕಬ್ಬು ಸೋಗೆಯಿಂದ ಉತ್ಪನ್ನಗಳ ತಯಾರಿಕೆ ಸೇರಿದಂತೆ ಮುಂತಾದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶು ಸಂಗೋಪನಾ ತ್ಯಾಜ್ಯಗಳನ್ನು ಮರುಬಳಸಬಹುದಾಗಿದೆ.

English summary
A committee comprising of 13 members headed by the directors of the Agriculture Department has set up the Directorate of Secondary Agriculture and has been ordered by the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X