• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಸರ್ಕಾರದಿಂದ ಸ್ವಾವಲಂಬಿ ನಡೆ: ಆತಂಕದಲ್ಲಿ ಕರ್ನಾಟಕದ ರೈತರು

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 27: ಗೋವಾ ಮುಖ್ಯಮಂತ್ರಿಗಳ ಸ್ವಾವಲಂಬಿ ನಡೆಯಿಂದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿನ ಸಾವಿರಾರು ರೈತರು, ಮಾಂಸ ಹಾಗೂ ಹಾಲಿನ ವ್ಯಾಪಾರಿಗಳನ್ನು ಆತಂಕಕ್ಕೆ ನೂಕಿದೆ.

ಬೆಳಗಾವಿ ಜಿಲ್ಲೆಯ ಬೆಳಗಾವಿ, ಚಿಕ್ಕೋಡಿ, ಸಂಕೇಶ್ವರ, ಗೋಕಾಕ್ ಹಾಗೂ ಘಟಪ್ರಭ ಸೇರಿದಂತೆ ವಿವಿಧ ಭಾಗದ ಸಾಕಷ್ಟು ರೈತರು ತಾವು ಬೆಳೆದ ತರಕಾರಿ ಪೈಕಿ ಸುಮಾರು 50 ಟ್ರಕ್‌ಗಳಲ್ಲಿ ಪಕ್ಕದ ರಾಜ್ಯವಾದ ಗೋವಾಕ್ಕೆ ನಿತ್ಯ ಸುಮಾರು 12 ರಿಂದ 15 ಟನ್ ತರಕಾರಿ ಪೂರೈಸುತ್ತಾರೆ. ಬೆಳಗಾವಿ ಜಿಲ್ಲೆಯ ಅಂದಾಜು 100ಕ್ಕೂ ಹೆಚ್ಚು ವರ್ತಕರು ಗೋವಾದ 1,200ಕ್ಕೂ ಹೆಚ್ಚು ಏಜೆಂಟರಿಗೆ ತರಕಾರಿ ಸರಬರಾಜು ಮಾಡುತ್ತಾರೆ. ಇದೊಂದರಿಂದಲೇ ನಿತ್ಯ ನಡೆಯುವ ವಹಿವಾಟು ಅಂದಾಜು 5 ಕೋಟಿ ರೂ. ಎನ್ನಬಹುದು ಎಂದು ಸರ್ಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಸಗಟು ತರಕಾರಿ ಮಾರಾಟಗಾರರೊಬ್ಬರು ತಿಳಿಸಿದ್ದಾರೆ.

PM-PRANAM scheme : ಪಿಎಂ ಪ್ರಣಾಮ್ ಯೋಜನೆಯಿಂದ ರೈತರು, ಕೃಷಿಗೆ ಆಗುವ ಲಾಭವೇನು?PM-PRANAM scheme : ಪಿಎಂ ಪ್ರಣಾಮ್ ಯೋಜನೆಯಿಂದ ರೈತರು, ಕೃಷಿಗೆ ಆಗುವ ಲಾಭವೇನು?

ಗಡಿ ಜಿಲ್ಲೆಯ ಅನೇಕ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಪಕ್ಕದ ರಾಜ್ಯ ಗೋವಾವನ್ನೆ ಅವಲಂಬಿಸಿದ್ದಾರೆ. ಆದರೆ ಗೋವಾ ಸರ್ಕಾರದ ಇತ್ತೀಚಿನ ನಿರ್ಧಾರ ಗಡಿ ಜಿಲ್ಲೆ ರೈತರು, ವ್ಯಾಪಾರಿಗಳನ್ನು ಆತಂಕಕ್ಕೀಡು ಮಾಡಿದೆ.

ಏನಿದು ಗೋವಾದ ಸ್ವಾವಲಂಬಿ ನಿರ್ಧಾರ?

ಏನಿದು ಗೋವಾದ ಸ್ವಾವಲಂಬಿ ನಿರ್ಧಾರ?

ಕಳೆದ ವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸ್ವಾವಲಂಬಿ ಉದ್ದೇಶದಿಂದ ತರಕಾರಿ ಮತ್ತು ಹಣ್ಣುಗಳನ್ನು ಸ್ಥಳೀಯವಾಗಿ ಹೆಚ್ಚು ಬೆಳೆಯಬೇಕು. ಗೋವಾದಲ್ಲಿಯೇ ತರಕಾರಿ ಉತ್ಪಾದನೆ ಹೆಚ್ಚಿಸಿದರೆ ತೋಟಗಾರಿಕೆ ನಿಗಮ ಉತ್ತಮ ದರ ನೀಡಲಿದೆ. ಇದರಿಂದ ಆದಷ್ಟ ಶೀಘ್ರವೇ ಬೇರೆ ರಾಜ್ಯಗಳಿಂದ ತರಕಾರಿ ಹಣ್ಣು ಆಮದು ನಿಲ್ಲಿಸಬಹುದು. ಈ ವಿಚಾರದಲ್ಲಿ ನಾವು ಸ್ವಾವಲಂಬಿಯಾಗಬಹುದು ಎಂದು ಅವರು ಹೇಳಿದ್ದರು. ಇದು ಕರ್ನಾಟಕ ರೈತರು, ವ್ಯಾಪಾರಿ, ವರ್ತಕರನ್ನು ಸಂಕಷ್ಟ ನೀಡಲಿದೆ.

ಬೆಲೆ ಕುಸಿತ; ಲಿಂಗಸೂಗೂರು ರೈತರ ಮುಖದಲ್ಲಿ ಕಾಂತಿ ತರದ ಸೂರ್ಯಕಾಂತಿಬೆಲೆ ಕುಸಿತ; ಲಿಂಗಸೂಗೂರು ರೈತರ ಮುಖದಲ್ಲಿ ಕಾಂತಿ ತರದ ಸೂರ್ಯಕಾಂತಿ

ಗೋವಾಗೆ 750 ಟನ್ ತರಕಾರಿ, 10 ಕ್ವಿಂಟಾಲ್ ಮಾಂಸ ರವಾನೆ

ಗೋವಾಗೆ 750 ಟನ್ ತರಕಾರಿ, 10 ಕ್ವಿಂಟಾಲ್ ಮಾಂಸ ರವಾನೆ

ಮೂಲಗಳ ಪ್ರಕಾರ, ಗೋವಾ ರಾಜ್ಯಕ್ಕೆ ನಿತ್ಯ ಕರ್ನಾಟಕದಿಂದ ನಿತ್ಯ ಸುಮಾರು 750 ಟನ್ ತರಕಾರಿ, 10 ಕ್ವಿಂಟಾಲ್ ಮಾಂಸ ಹಾಗೂ 100 ಕೆ.ಜಿ. ಹೂವುಗಳು ಅನೇಕ ಜಿಲ್ಲೆಗಳಿಂದ ಹಾಗೂ ಕೆಲವೊಮ್ಮೆ ಮಧ್ಯ ಕರ್ನಾಟಕ ಜಿಲ್ಲೆಯಾದ ದಾವಣಗೆರೆಯಿಂದಲೂ ರಫ್ತಾಗುತ್ತದೆ. 300,000 ಲೀಟರ್‌ಗೂ ಅಧಿಕ ಹಾಲು ಮತ್ತು 1,000 ಕೆ.ಜಿ ಹಂದಿ ಮಾಂಸ ಸಹ ಗೋವಾಕ್ಕೆ ಪೂರೈಕೆ ಆಗುತ್ತಿದೆ.

ಬೆಳಗಾವಿ ಜಿಲ್ಲೆಯ ವ್ಯಾಪಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಗೋವಾ ರಾಜ್ಯವು ನಮ್ಮ ಜಿಲ್ಲೆ ಅಥವಾ ರಾಜ್ಯದಿಂದ ತರಕಾರಿ, ಹಣ್ಣು ಉತ್ಪನ್ನ ಪಡೆಯುವುದನ್ನು ನಿಲ್ಲಿಸಿದರೆ ನೂರಾರು ರೈತರು, ವ್ಯಾಪಾರಿಗಳು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಸಣ್ಣ ಅಂತರದಲ್ಲಿ ಕೊಯ್ಲು ಮಾಡುವ ತರಕಾರಿಗಳನ್ನು ರೈತರು ಎಪಿಎಂಸಿ ಇಲ್ಲವೇ ಮಾರುಕಟ್ಟೆಗೆ ಕೊಂಡೊಯ್ದರೆ ತಕ್ಷಣಕ್ಕೆ ಹಣ ಪಡೆಯಬಹುದಾಗಿದೆ. ಆದರೆ ಇದೆಲ್ಲ ಮಾರಾಟ ನಿಂತರೆ ಕಷ್ಟವಾಗಲಿದೆ ಎಂದು ತಿಳಿಸಿದರು.

ಬೆಳಗಾವಿಯ ವಿವಿಧ ಭಾಗಕ್ಕೆ ಆರ್ಥಿಕ ಹೊಡೆತ

ಬೆಳಗಾವಿಯ ವಿವಿಧ ಭಾಗಕ್ಕೆ ಆರ್ಥಿಕ ಹೊಡೆತ

ಬೈಲಹೊಂಗಲ ಭಾಗದ ರೈತ ಶಂಕರಗೌಡ ಪಾಟೀಲ ಅವರು, ಬೆಳಗಾವಿ ಎಪಿಎಂಸಿಗೆ ನಿತ್ಯ ಕ್ವಿಂಟಾಲ್‌ಗಟ್ಟಲೆ ತರಕಾರಿ ಕೊಂಡೊಯ್ಯಲಾಗುತ್ತದೆ. ಗೋವಾಕ್ಕೆ ತರಕಾರಿ ವ್ಯಾಪಾರ ನಿಲ್ಲಿಸಿದರೆ ಬೆಳಗಾವಿ, ಬೈಲಹೊಂಗಲ, ಗೋಕಾಕ್, ಸವದತ್ತಿ ತಾಲೂಕುಗಳ ಆರ್ಥಿಕತೆ ಹೊಡೆತ ಬೀಳುವುದರಲ್ಲಿ ಅನುಮಾನ ಇಲ್ಲ. ಉತ್ತಮ ತರಕಾರಿ ವ್ಯಾಪಾರದ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲೂಕಿನಲ್ಲಿ ಅನೇಕ ಮಂದಿ ತರಕಾರಿ ಬೆಳೆಯಲು ಹೆಚ್ಚಿನ ಜಮೀನು ಖರೀದಿಸಿದ್ದಾರೆ. ಗೋವಾ ಸರ್ಕಾರದ ನಿರ್ಧಾರದಿಂದ ಇವರೆಲ್ಲ ನಷ್ಟವಾಗುತ್ತದೆ ಎಂದು ಅವರು ವಿಷಾಧಿಸಿದರು.

ಹಿಂದೊಮ್ಮೆ ಗೋವಾದಲ್ಲಿ ಮಾಂಸದ ಕೊರತೆ

ಹಿಂದೊಮ್ಮೆ ಗೋವಾದಲ್ಲಿ ಮಾಂಸದ ಕೊರತೆ

ಕರ್ನಾಟದಲ್ಲಿ 2021ರಲ್ಲಿ ಗೋಹತ್ಯೆ ವಿರೋಧಿ ಮಸೂದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದ ನಂತರ ಆಗ ಗೋವಾ ಆತಂಕ ವ್ಯಕ್ತಪಡಿಸಿತ್ತು. ಕಾರಣ ಕರ್ನಾಟಕದಿಂದ ದನದ ಮಾಂಸವನ್ನು ನೆರೆಯ ಕೇರಳ ಹಾಗೂ ಗೋವಾಕ್ಕೆ ರಫ್ತು ಮಾಡಲಾಗುತ್ತಿತ್ತು. ಈ ಮಸೂದೆ ಪರಿಣಾಮ ಈ ರಾಜ್ಯಗಳಲ್ಲಿ ತೀವ್ರ ಮಾಂಸದ ಕೊರತೆ ಉಂಟಾಗಿತ್ತು.

ಸರ್ಕಾರದ ಮಾಹಿತಿ ಪ್ರಕಾರ, 2019-20ರ ವರ್ಷದಲ್ಲಿ ಕರ್ನಾಟಕದಿಂದ ಯುಎಇ, ಕತಾರ್ ಮತ್ತು ಇನ್ನಿತರ ರಾಷ್ಟ್ರಗಳಿಗೆ ಸುಮಾರು 2.5 ಮಿಲಿಯನ್ ಡಾಲರ್ ಮೌಲ್ಯದ ಗೋಮಾಂಸ ರಫ್ತಾಗಿತ್ತು. ಆ ಸಂದರ್ಭದಲ್ಲಿ ಗೋವಾ ಸರ್ಕಾರವು ತನ್ನ ರೈತರಿಗೆ ಉತ್ತಮ ಸಬ್ಸಿಡಿಗಳು ಮತ್ತು ಸಾಲ ಯೋಜನೆಗಳನ್ನು ಘೋಷಿಸಿತ್ತು. ಆದರೆ ಸ್ಥಳಿಯ ರೈತರ ಉತ್ಪನ್ನದ ಗುಣಮಟ್ಟದ ಕೊರತೆಯಿಂದ ಯೋಜನೆ ವಿಫಲವಾಯಿತು. ನಂತರ ಕರ್ನಾಟಕದಿಂದ ಬರುವ ಉತ್ಪನ್ನಕ್ಕೆ ಗೋವಾ ಸರ್ಕಾರ ಹೆಚ್ಚು ಆದ್ಯತೆ ನೀಡಿತು ಎನ್ನಲಾಗಿದೆ.

English summary
The Goa government 'self reliant' taken decision about Vegetables, meat, milk and etc. Karnataka farmers, traders in worry from.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X