ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಸಮಸ್ಯೆಗೆ ಜಮೀನಿನಲ್ಲಿಯೇ ಪರಿಹಾರ: 100 ಕೃಷಿ ಸಂಜೀವಿನಿ ವಾಹನಗಳಿಗೆ ಚಾಲನೆ

|
Google Oneindia Kannada News

ಬೆಂಗಳೂರು, ಮೇ 8: ಕೃಷಿ ಇಲಾಖೆ ವತಿಯಿಂದ (ಕೃಷಿ ಸಂಜೀವಿನಿ) ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ 100 ವಾಹನಗಳನ್ನು ಇಂದು ಬೆಂಗಳೂರಿನ ಜಿಕೆವಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.

ಕೃಷಿ ಇಲಾಖೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಮತ್ತು ತೋಟಗಾರಿಕೆ ಸಚಿವ ಮುನಿತ್ನ ಉಸಪಸ್ಥಿತರಿದ್ದರು. ರೈತರ ಜಮೀನುಗಳಲ್ಲಿ ಮಣ್ಣು ಪರೀಕ್ಷೆ, ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳವಣಿಗೆ, ಚಂಡಮಾರುತ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳ ವಿರುದ್ಧ 'ರೈತ ಸಂಜೀವಿನಿ' ಕೆಲಸ ಮಾಡಲಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಾಯೋಗಿಕವಾಗಿಕವಾಗಿ 40 ಕೃಷಿ ಸಂಜಿವಿನಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಲಾಗಿತ್ತು. ಸದ್ಯ ಈ ವಾಹನಗಳು ರೈತರಿಗೆ ಅನೂಕೂಲ ಮತ್ತಷ್ಟು ಸಹಕಾರಿಯಾಗಲು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು 100 ವಾಹನಗಳನ್ನು ಕೃಷಿ ಇಲಾಖೆ ವತಿಯಿಂದ ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ.

 Karnataka: 100 agriculture Sanjeevini Vehicle Released

ಲ್ಯಾಬ್ ಟು ಲ್ಯಾಂಡ್ ಪ್ರಾಜೆಕ್ಟ್ ಮತ್ತು ಆ್ಯಂಬುಲೆನ್ಸ್‌ ಸೈರನ್ ಅನ್ನು ಈ ಕೃಷಿ ಸಂಜೀವಿನಿ ವಾಹನಕ್ಕೆ ಅಳವಡಿಸಲಾಗಿದೆ. 155313 ಟೋಲ್ ಫ್ರೀ ನಂಬರ್ (ಸಹಾಯವಾಣಿ) ರೈತರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನ ತಿಳಿಸಬಹದಾಗಿದೆ.

 Karnataka: 100 agriculture Sanjeevini Vehicle Released

ಕೃಷಿ ಸಂಜೀವಿನಿ ವಾಹನ: ಕಾರ್ಯವೈಖರಿ ಹೇಗೆ?

ರೈತರು ಕೃಷಿ ಸಂಜೀವಿನಿ ಸಹಾಯವಾಣಿ ಸಂಖ್ಯೆ 155313 ಕರೆ ಮಾಡಿ ತಮ್ಮ ಜಮೀನುಗಳ ಬೆಳೆ ಬಗ್ಗೆ ತಿಳಿಸಬಹುದು. ರೈತರ ಹೊಲಗಳಲ್ಲಿ ಮಣ್ಣಿನ ಪರೀಕ್ಷೆ, ಕೀಟನಾಶಕ, ರಸಗೊಬ್ಬರ ಪ್ರಮಾಣ ಬಗ್ಗೆ ನೇರವಾಗಿ ರೈತರ ಜಮೀನುಗಳಿಗೆ ಬಂದು ಪರೀಕ್ಷೆ ಮಾಡುತ್ತದೆ. ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣಿಗೆ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುತ್ತದೆ.

 Karnataka: 100 agriculture Sanjeevini Vehicle Released

ಸ್ಥಳೀಯ ಮಟ್ಟದಲ್ಲಿ ರೈತರು ಖರೀದಿ ಮಾಡಿದ ರಸಗೊಬ್ಬರಗಳಲ್ಲಿ ಮಿಶ್ರಣ ಆಗಿರುವ ಸಾಂದ್ರತೆ ಪರಿಶೀಲನೆ ಮಾಡಲಾಗುತ್ತದೆ. ಒಟ್ಟಾರೆ ರೈತನಿಗೆ 'ಕೃಷಿ ಸಂಜೀವಿನಿ' ಯೋಜನೆ ಬಹಳ ಉಕಾರಿಯಾಗಿದ್ದು, ರೈತರಿಗೆ ಈ ಯೋಜನೆ ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆ ಮತ್ತಷ್ಟು ಯೋಜನೆ ರೂಪಿಸಿಕೊಂಡಿದೆ.

English summary
100 Agro-Sanjeevini vehicles were driven by the Agriculture Department. These vehicles will go to the farmer's farm and provide information on crop problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X