ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇವರ್ಗಿ: ಮುಂಗಾರು ಹಂಗಾಮಿಗೆ 1,18,271 ಹೆಕ್ಟೇರ್ ಬಿತ್ತನೆ ಗುರಿ

|
Google Oneindia Kannada News

ಕಲಬುರಗಿ,ಜೂನ್ 3: ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಗೂ 8.25 ಲಕ್ಷ ಟನ್ ಉತ್ಪಾದನಾ ಗುರಿ ಹೊಂದಲಾಗಿದೆ ಎಂದು ಜೇವರ್ಗಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಸುನೀಲಕುಮಾರ ಜವಳಗಿ ತಿಳಿಸಿದ್ದಾರೆ.

ಜೇವರ್ಗಿ ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ 64450 ಹೆಕ್ಟೇರ್, ಹತ್ತಿ 42725 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ ಮತ್ತು ಮೆಕ್ಕೆ ಜೋಳಗಳನ್ನು 1000 ಹೆಕ್ಟೇರ್, ಹೆಸರು 1250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಕಲಬುರಗಿ; ಕೃಷಿ ಚಟುವಟಿಕೆ ಆರಂಭ, 3.64 ಲಕ್ಷ ಟನ್ ಉತ್ಪಾದನೆ ಗುರಿ ಕಲಬುರಗಿ; ಕೃಷಿ ಚಟುವಟಿಕೆ ಆರಂಭ, 3.64 ಲಕ್ಷ ಟನ್ ಉತ್ಪಾದನೆ ಗುರಿ

ರಿಯಾಯತಿ ದರದಲ್ಲಿ ಬಿತ್ತನೆ ಬೀಜ ಲಭ್ಯ:

ಪ್ರಸ್ತಕ ಹಂಗಾಮಿಗೆ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲು ಬಿತ್ತನೆ ಬೀಜಗಳಾದ ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಕೊರೊನಾ ವೈರಸ್ (ಕೋವಿಡ-19) ಪ್ರಯುಕ್ತ ರೈತ ಸಂಪರ್ಕ ಕೇಂದ್ರವಲ್ಲದೇ ಪ್ರತಿ ರೈತ ಸಂಪರ್ಕ ಕೇಂದ ವ್ಯಾಪ್ತಿಯಲ್ಲಿ 2 ರಿಂದ 3 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಬೀಜ ವಿತರಣೆ ಮಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ.

Kalaburagi: Jevargi District Farmers All Set For Monsoon Seed Sowing

ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರವನ್ನು ಎಲ್ಲಾ ಹೋಬಳಿಗಳ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಹಾಗೂ ಅಧಿಕೃತ ಮಾರಾಟಗಾರರ ಮೂಲಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ರೈತರು ಬಿತ್ತನೆಗೆ ಪೂರ್ವ ತಯಾರಿ ಸಿದ್ದತೆ ಕೈಗೊಳ್ಳುತ್ತಿದ್ದು, ಬಿತ್ತನೆಗೆ ಭೂಮಿಯ ಹದ ಅರಿತು (ಬಿತ್ತನೆಗೆ ಯೋಗ್ಯವಾದ) ಬಿತ್ತನೆ ಕಾರ್ಯ ಕೈಗೊಳ್ಳಬಹುದಾಗಿದೆ.

ಬಿತ್ತನೆಗೆ ಮುನ್ನ ರೋಗ ಮತ್ತು ಕೀಟಗಳ ಹತೋಟಿಗಾಗಿ ಬೀಜಗಳ ಬೀಜೋಪಚಾರ ಕೈಗೊಳ್ಳಲು ತಾಂತ್ರಿಕ ಸಲಹೆಗಳನ್ನು ಅನುಸರಿಸಬೇಕು. ಕೊರೊನಾ ಪ್ರಯುಕ್ತ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಪರಿಕರಗಳನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ರೈತ ಸಂಪರ್ಕ ಕೇಂದ್ರವಾರು ಬಿತ್ತನೆ ಗುರಿ ವಿವರ: ಜೇವರ್ಗಿ-21712 ಹೆಕ್ಟೇರ್, ನೆಲೋಗಿ-26657 ಹೆಕ್ಟೇರ್, ಅಂದೋಲಾ-21132, ಇಜೇರಿ-20987 ಹಾಗೂ ಯಡ್ರಾಮಿ-27783 ಹೆಕ್ಟೇರ್.

ರೈತ ಸಂಪರ್ಕ ಕೇಂದ್ರವಾರು ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ವಿವರ
ಜೇವರ್ಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಹರನೂರ, ಕೂಡಿ, ಸೊನ್ನ, ನೆಲೋಗಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಅಂಕಲಗಾ, ಮಂದೇವಾಲ, ಜೇರಟಗಿ, ಆಂದೋಲಾ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಚಿಗರಳ್ಳಿ ಕ್ರಾಸ್, ನರಿಬೋಳ, ಇಜೇರಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಬಿಳವಾರ, ಯಲಗೋಡ ಹಾಗೂ ಯಡ್ರಾಮಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಅರಳಗುಂಡಗಿ, ಕುಕನೂರ, ಮಳ್ಳಿ. (ಮಾಹಿತಿಕೃಪೆ: ವಾರ್ತಾ ಇಲಾಖೆ)

English summary
Kalaburagi: Jevargi district farmers all set for Monsoon seed sowing of Kharif crops in as many as 1,18,271 hectares said Agriculture department officer Sunil Kumar Javalagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X